3ನೇ ದಿನವೂ ಇಸ್ರೇಲ್‌ - ಇರಾನ್‌ ಸಂಘರ್ಷ : 10 ಮಂದಿ ಸಾವು । ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 13ಕ್ಕೆ

Published : Jun 16, 2025, 04:10 AM IST
Israel Launches Strikes Against Iran

ಸಾರಾಂಶ

ಇಸ್ರೇಲ್‌-ಇರಾನ್‌ ಕದನ ಸತತ 3ನೇ ದಿನವೂ ಮುಂದುವರಿದಿದೆ. ಭಾನುವಾರ ಕೂಡ ಇರಾನ್ ಮೇಲೆ ಇಸ್ರೇಲ್‌ ವಿಸ್ತೃತ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ನಿಕ್ಷೇಪ, ತೈಲ ನಿಕ್ಷೇಪ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ.

ದುಬೈ: ಇಸ್ರೇಲ್‌-ಇರಾನ್‌ ಕದನ ಸತತ 3ನೇ ದಿನವೂ ಮುಂದುವರಿದಿದೆ. ಭಾನುವಾರ ಕೂಡ ಇರಾನ್ ಮೇಲೆ ಇಸ್ರೇಲ್‌ ವಿಸ್ತೃತ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ನಿಕ್ಷೇಪ, ತೈಲ ನಿಕ್ಷೇಪ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ. ಅಪಾರ ಸಾವು ನೋವು ಆಗಿದೆ ಎಂದು ಹೇಳಲಾಗಿದ್ದರೂ ನಿಖರ ಅಂಕಿ-ಅಂಶ ವಿವರ ಲಭ್ಯವಿಲ್ಲ.

ಇನ್ನೊಂದೆಡೆ ಶನಿವಾರ ತಡರಾತ್ರಿಯಿಂದ ಭಾನುವಾರ ನಸುಕಿನ ತನಕ ಇರಾನ್‌ ದಾಳಿಗಳಲ್ಲಿ ಇಸ್ರೇಲ್‌ನ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ 3 ದಿನದಲ್ಲಿ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 13 ದಾಟಿದೆ. 200 ಜನರು ಗಾಯಗೊಂಡಿದ್ದಾರೆ ಮತ್ತು 7 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಭಾನುವಾರ ರಾತ್ರಿಯೂ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ಮಳೆಗರೆದಿದೆ. ಹೀಗಾಗಿ ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾಯುಪ್ರದೇಶವು 3ನೇ ದಿನವೂ ಮುಚ್ಚಲ್ಪಟ್ಟಿದೆ.

ಶುಕ್ರವಾರ ಹಾಗೂ ಶನಿವಾರ ಇಸ್ರೇಲ್‌, ಇರಾನ್‌ ಅಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ್ದ ದಾಳಿಯಲ್ಲಿ ಇರಾನ್‌ನ 2 ಸೇನಾಧಿಕಾರಿಗಳು, 9 ಅಣುವಿಜ್ಞಾನಿಗಳು ಸೇರಿ 80 ಮಂದಿ ಸಾವನ್ನಪ್ಪಿದ್ದರು.

ತೈಲಾಗಾರ, ಅನಿಲ ನಿಕ್ಷೇಪ ಟಾರ್ಗೆಟ್‌:

ಶನಿವಾರ ಇಸ್ರೇಲ್‌ ಮೇಲೆ ದಾಳಿ ಮಾಡಿ ಇರಾನ್ ತಿರುಗೇಟು ನೀಡಿತ್ತು. ಇದಕ್ಕೆ ಶನಿವಾರ ಇಸ್ರೇಲ್‌ ಮೇಲೆ ದಾಳಿ ಮಾಡಿ ಇರಾನ್ ತಿರುಗೇಟು ನೀಡಿತ್ತು. ಆದರೆ ಭಾನುವಾರ ಪುನಃ ತಿರುಗಿಬಿದ್ದ ಇಸ್ರೇಲ್‌, ಇರಾನ್‌ನ ದೊಡ್ಡ ಅನಿಲ ನಿಕ್ಷೇಪ ಹಾಗೂ 2 ತೈಲ ಸಂಸ್ಕರಣಾಗಾರಗಳಿಗೆ ಕ್ಷಿಪಣಿ ದಾಳಿ ಮಾಡಿದೆ ಎಂದು ಇರಾನ್ ಹೇಳಿದೆ.

ಪ್ರಮುಖವಾಗಿ ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಾಗಾರವನ್ನು ಇಸ್ರೇಲ್‌ ಗುರಿಯಾಗಿಸಿಕೊಂಡಿದೆ. ಜತೆಗೆ ಇಸ್ರೇಲಿ ಮಿಲಿಟರಿ, ಟೆಹ್ರಾನ್ ಬಳಿಯ ತೈಲ ಸಂಸ್ಕರಣಾಗಾರದ ಮೇಲೂ ದಾಳಿ ಮಾಡಿದೆ. ಶನಿವಾರ ಇಸ್ರೇಲಿ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ನಂತರ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್‌ನಲ್ಲಿ ಇರಾನ್‌ ಅನಿಲ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಿದೆ.

ಇದು ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಟೆಹ್ರಾನ್‌ ಧಗಧಗ:

ಇದೇ ವೇಳೆ, ಭಾನುವಾರ ಮುಂಜಾನೆ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ವರದಿಯಾಗಿದೆ. . ಕ್ಷಿಪಣಿ ನಗರ ಖೊರಾಮಾಬಾದ್‌ ಮೇಲೂ ಭಾನುವಾರ ದಾಳಿ ಮಾಡಿ ನಗರ ಧ್ವಂಸಗೊಳಿಸಲಾಗಿದೆ. ‘ಟೆಹ್ರಾನ್ ಹೊತ್ತಿ ಉರಿಯುತ್ತಿದೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಟೆಹ್ರಾನ್‌ ಮೇಲೇ ಕ್ಷಿಪಣಿ ದಾಳಿ ನಡೆದ ಕಾರಣ ರಾಜಧಾನಿಯಲ್ಲಿ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.ಇಸ್ರೇಲ್‌ ನಿಲ್ಲಿಸಿದರೆ ನಾವೂ ನಿಲ್ಲಿಸ್ತೇವೆ- ಇರಾನ್:

ಈ ನಡುವೆ, ಇಸ್ರೇಲ್‌ ದೇಶವು ನಮ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿದರೆ, ಇಸ್ರೇಲ್ ಮೇಲಿನ ನಮ್ಮ ದಾಳಿಗಳು ಕೊನೆಗೊಳ್ಳುತ್ತವೆ ಎಂದು ಇರಾನ್ ವಿದೇಶಾಂಗ ಸಚಿವ ಅರ್ಬಾಜ್‌ ಅರ್ಗಾಚಿ ಭಾನುವಾರ ಹೇಳಿದ್ದಾರೆ. ಆದರೆ ಇದಕ್ಕೆ ಇಸ್ರೇಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕ-ಇರಾನ್ ಮಾತುಕತೆ ಸ್ಥಗಿತ:ಆದರೆ ನಿರಂತರ ಸಂಘರ್ಷದ ಮಧ್ಯೆ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇರಾನ್ ಮತ್ತು ಅಮೆರಿಕ ನಡುವಿನ ಯೋಜಿತ ಮಾತುಕತೆಗಳು ರದ್ದಾಗಿವೆ. ಇದು ಯುದ್ಧ ಸದ್ಯಕ್ಕೆ ನಿಲ್ಲದು ಎಂಬ ಪ್ರಶ್ನೆ ಹುಟ್ಟುಹಾಕಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ ಯಾವುದೇ ಕಾರಣಕ್ಕೂ ಅಮೆರಿಕವನ್ನು ಟಾರ್ಗೆಟ್‌ ಮಾಡಬಾರದು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!