ಆಫ್ರಿಕನ್ ರಾಷ್ಟ್ರದಲ್ಲಿ ಉಗ್ರರ ಕ್ರೂರತೆ ಮಿತಿ ಮೀರಿದ್ದು, 50 ಜನರ ಶಿರಚ್ಛೇದ ಮಾಡಲಾಗಿದೆ. ಅಲ್ಲಾಹು ಅಕ್ಬರ್ ಎನ್ನುತ್ತಲೇ ಬಡ ಜನರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ
ನವದೆಹಲಿ(ನ.10): ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ನ ಇಸ್ಲಾಮಿಕ್ ಉಗ್ರರು ಫುಟ್ಬಾಲ್ ಪಿಚ್‌ನಲ್ಲೇ 50 ಜನರ ಶಿರಚ್ಛೇದ ಮಾಡಿರುವ ಭೀಕರ ಘಟನೆ ಆಫ್ರಿಕನ್ ರಾಷ್ಟ್ರದಲ್ಲಿ ನಡೆದಿದೆ.
ಆಫ್ರಿಕನ್ ದೇಶದ ಉತ್ತರ ಮೊಝಂಬಿಕ್‌ನ ಹಳ್ಳಿಯಲ್ಲಿ ಈ ಕ್ರೂರ ಘಟನೆ ನಡೆದಿದೆ. ಉಗ್ರರು ಫುಟ್ಬಾಲ್ ಪಿಚ್ ಅನ್ನು ಮರಣದಂಡನೆ ಮೈದಾನವಾಗಿ ಪರಿವರ್ತಿಸಿ ಶಿರಚ್ಛೇದ ಮಾಡಿದ್ದಾರೆ. ಶುಕ್ರವಾರ ರಾತ್ರಿ ನಂಜಾಬಾ ಗ್ರಾಮದ ಮೇಲೆ ದಾಳಿ ನಡೆಸಿದ ಉಗ್ರರು ಅಲ್ಲಾಹು ಅಕ್ಬರ್ ಎಂದು ಬೊಬ್ಬಿರಿಯುತ್ತಾ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
undefined
ಡ್ರಗ್ಸ್ ಜಾಲ ಬಯಲು ಮಾಡಲು ಹೊರಟ ಪತ್ರಕರ್ತನ ಹತ್ಯೆ
ಇನ್ನೊಂದು ಗ್ರಾಮದಲ್ಲಿ ಮತ್ತೊಂದಷ್ಟು ಜನರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. 2017 ರಿಂದ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಉಗ್ರರು ನಡೆಸಿದ ಸರಣಿ ದಾಳಿಯಲ್ಲಿ ಈ ಹತ್ಯೆಗಳು ಇತ್ತೀಚಿನವುಗಳು.
ಕನಿಷ್ಠ 2 ಸಾವಿರ ಜನ ಕೊಲ್ಲಲ್ಪಟ್ಟಿದ್ದು, 4 ಲಕ್ಷ ಜನರು ನಿರ್ಗತಿಕರಾಗಿದ್ದಾರೆ. ಐಎಸ್ ಜೊತೆ ಸಂಬಂಧ ಹೊಂದಿರುವ ಉಗ್ರರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೆಜ್ಜೆ ಇಟ್ಟಿದ್ದಾರೆ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ, ಈ ಗುಂಪು ನಿರುದ್ಯೋಗ ಮತ್ತು ಬಡತನ ಬಳಸಿಕೊಂಡು ಯುವಕರನ್ನು ನೇಮಿಸಿಕೊಳ್ಳುತ್ತಿದೆ. ಇತ್ತೀಚಿನ ದಾಳಿಯು ಭಯೋತ್ಪಾದಕರ ಸರಣಿಯ ದಾಳಿಯಲ್ಲಿ ಅತ್ಯಂತ ಕ್ರೂರವಾಗಿದ್ದು ಎಂದು ಹೇಳಲಾಗುತ್ತಿದೆ.