
ಟೆಹ್ರಾನ್: ಅಮೆರಿಕ- ಇರಾನ್ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿ ನಡುವೆಯೇ, ‘ನಾವು ಅಮೆರಿಕ ಅಧ್ಯಕ್ಷ ಟ್ರಂಪ್ ಅಥವಾ ಅವರ ಅಳಿಯ ಕುಶ್ನರ್ ಜತೆ ಮಾತನಾಡಲ್ಲ. ಅವರ ಬದಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜತೆ ಮಾತುಕತೆ ಬಯಸುತ್ತೇವೆ‘ ಎಂದು ಇರಾನ್ ಹೇಳಿದೆ ಹಾಗೂ ಈ ಬಗ್ಗೆ ಅಮೆರಿಕಕ್ಕೆ ಸಂದೇಶ ಕಳಿಸಿದೆ ವರದಿಯಾಗಿದೆ.
‘ಈಗ ನಡೆಯುತ್ತಿರುವ ಯುದ್ಧವನ್ನು ಶಾಂತಿ ಮಾತುಕತೆಗೆ ಸಿದ್ಧ. ಆದರೆ ಡೊನಾಲ್ಡ್ ಟ್ರಂಪ್ ಅಥವಾ ಸರ್ಕಾರದ ಇತರರೊಂದಿಗೆ ಮಾತುಕತೆ ನಡೆಸುವ ಬದಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರೊಂದಿಗೆ ಮಾತುಕತೆ ಏರ್ಪಡಿಸಬೇಕು. ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಅಥವಾ ಜೇರೆಡ್ ಕುಶ್ನರ್ ನೇತೃತ್ವದ ಮಾತುಕತೆಗಳು ಯಶಸ್ವಿಯಾಗುವ ಸಾಗುವ ಸಾಧ್ಯತೆ ಇಲ್ಲ’ ಎಂದು ಇರಾನ್ ಹೇಳಿದೆ ಎನ್ನಲಾಗಿದೆ.
ಈ ನಡುವೆ, ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸಲು ಉತ್ಸುಕರಾಗಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಸೌದಿ ಅರೇಬಿಯಾ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ತಮ್ಮ ಯತ್ನಗಳ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ