
ಇರಾನ್(ಫೆ.04): ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ವಿಶ್ವದೆಲ್ಲಡೆ ಭಾರಿ ಸದ್ದು ಮಾಡಿತ್ತು. ಅಲ್ಲೀವರೆಗೆ ಸರ್ಜಿಕಲ್ ಸ್ಟ್ರೈಕ್ ಪದ ಭಾರತದಲ್ಲಿ ಬಹುತೇಕರಿಗೆ ತಿಳಿದೇ ಇರಲಿಲ್ಲ. ಭಾರತದ ಸರ್ಜಿಕಲ್ ಸ್ಟ್ರೈಕ್ ಬಳಿಕ ಇದೀಗ ಇರಾನ್ ಪಾಕಿಸ್ತಾನ ಮೇಲೆ ಸರ್ಜಿಕಲ್ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಭಾರತ ಪಾಕ್ ಪಡೆಯನ್ನು ಹಿಮ್ಮೆಟ್ಟಿಸಿದ್ದು ಹೇಗೆ?
ಇರಾನ್ ವಾಯುಪಡೆ ಪಾಕಿಸ್ತಾನದ ಬಲೂಚ್ ಪ್ರಾಂತ್ಯಕ್ಕೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿದೆ. ಫೆಬ್ರವರಿ 3 ರ ರಾತ್ರಿ ಇರಾನ್ ವಾಯುಪಡೆ, ಪಾಕಿಸ್ತಾನ ಸೇನೆಯ ಅರಿವಿಗೆ ಬಾರದಂತೆ ಇರಾನ್ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಬಲೂಚ್ ಪ್ರಾಂತ್ಯದಲ್ಲಿ ನೆಲೆಯೂರಿರುವ ಜೈಶ್ ಉಲ್ ಉದ್ ಉಗ್ರ ಸಂಘಟನೆ ಇರಾನ್ ಯೋಧರಿಬ್ಬರನ್ನು ವಶದಲ್ಲಿಟ್ಟುಕೊಂಡಿತ್ತು.
ಇರಾನ್ ತನ್ನ ಯೋಧರ ರಕ್ಷಣೆಗೆ ಬಲೂಚ್ ಪ್ರಾಂತ್ಯಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಜೈಶ್ ಉಲ್ ಉದ್ ಸಂಘಟನೆಯ ಉಗ್ರರನ್ನು ಹೊಡೆದುರಳಿಸಿದ ಇರಾನ್ ಸೇನೆ, ಇಬ್ಬರು ಯೋಧರನ್ನು ರಕ್ಷಣೆ ಮಾಡಿದೆ. ಇಷ್ಟೇ ಉಗ್ರರಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನ ಸೇನೆ ಯೋಧರು ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ಹೇಳಿವೆ.
ಇರಾನ್ ತನ್ನ ಯೋಧರನ್ನು ಬಿಡುಗಡೆ ಮಾಡಿರುವುದಾಗಿ ಅಧೀಕೃತವಾಗಿ ಹೇಳಿಕೊಂಡಿದೆ. ಆದರೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಯೋಧರ ರಕ್ಷಣೆ ಮಾಡಿರುವ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇರಾನ್ IRGC ಗುಪ್ತಚರ ಇಲಾಖ ನೀಡಿದ ಖಚಿತ ಮಾಹಿತಿ ಮೇರೆ ಸರ್ಜಿಕಲ್ ಸ್ಟ್ರೈಕ್ ನೆಡಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ