ಟ್ರಂಪ್‌ಗೆ ಭಾರೀ ಮುಖಭಂಗ ಬೆನ್ನಲ್ಲೇ ಇರಾನ್‌ನಿಂದ ಟ್ರೋಲ್‌, ಅಧಿಕೃತವಾಗಿಯೇ ಏನೆಲ್ಲಾ ಹಾಕ್ತಿದೆ ನೋಡಿ

Published : Apr 08, 2026, 12:32 PM IST
Donald Trump Troll

ಸಾರಾಂಶ

ಅಮೆರಿಕ-ಇರಾನ್ ಕದನ ವಿರಾಮದ ನಂತರ, ಇರಾನ್ ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಡೊನಾಲ್ಡ್ ಟ್ರಂಪ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದೆ. #TACO ಹ್ಯಾಶ್‌ಟ್ಯಾಗ್‌ನೊಂದಿಗೆ ಲೆಗೋ ಅನಿಮೇಷನ್ ವಿಡಿಯೋ ಬಿಡುಗಡೆ ಮಾಡಿ, ಟ್ರಂಪ್ ಶರಣಾಗಿದ್ದಾರೆ ಎಂದು ಬಿಂಬಿಸುತ್ತಿದೆ. 

ನವದೆಹಲಿ (ಏ.8): ಇರಾನ್‌ ಹಾಗೂ ಅಮೆರಿಕ ನಡುವೆ 15 ದಿನಗಳ ಕದನ ವಿರಾಮ ಏರ್ಪಟ್ಟಿದೆ. ಇದರ ಬೆನ್ನಲ್ಲಿಯೇ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಇರಾನ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ನ ಜನ್ಮ ಜಾಲಾಡುತ್ತಿದೆ. ಅಮೆರಿಕ-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ, ವಿವಿಧ ದೇಶಗಳಲ್ಲಿರುವ ಇರಾನ್‌ನ ರಾಯಭಾರ ಕಚೇರಿಗಳು ಡೊನಾಲ್ಡ್‌ ಟ್ರಂಪ್‌ಅನ್ನು ಅತ್ಯಂತ ಹೀನವಾಗಿ ಟ್ರೋಲ್‌ ಮಾಡಲು ಆರಂಭಿಸಿದೆ. ಇನ್ನು ಇರಾನ್‌ನ ಎಕ್ಸ್‌ಪ್ಲೋಸಿವ್ ಮೀಡಿಯಾ ಆನಿಮೇಷನ್‌ ಟೀಮ್‌, ಟ್ರಂಪ್ ಅವರು ಅನಿವಾರ್ಯವಾಗಿ ಹಿಂದೆ ಸರಿದಿದ್ದಾರೆ ಎಂಬುದನ್ನು ಬಿಂಬಿಸಲು 'ಲೆಗೋ' (Lego) ಶೈಲಿಯ ಅನಿಮೇಷನ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಈ ಅನಿಮೇಷನ್ ವಿಡಿಯೋದಲ್ಲಿ ಟ್ರಂಪ್ ಅವರು ಕೋಪದಿಂದ ಹಿಂದೆ ಸರಿಯುವಂತೆ ಚಿತ್ರಿಸಲಾಗಿದೆ. ಇರಾನ್ ತಂಡವು ಇದನ್ನು ‘TACO’(Trump Always Chickens Out - ಟ್ರಂಪ್ ಯಾವಾಗಲೂ ಹೇಡಿಯಂತೆ ಹಿಂದೆ ಸರಿಯುತ್ತಾರೆ) ಎಂಬ ಹೊಸ ಹ್ಯಾಶ್‌ಟ್ಯಾಗ್ ಮೂಲಕ ವೈರಲ್ ಮಾಡುತ್ತಿದೆ. "ಸಾಮ್ರಾಜ್ಯಶಾಹಿಯನ್ನು ಹೇಗೆ ಹತ್ತಿಕ್ಕಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಟ್ರಂಪ್ ಶರಣಾಗಿದ್ದಾರೆ, ಇರಾನ್ ಗೆದ್ದಿದೆ" ಎಂದು ಈ ತಂಡ ಬರೆದುಕೊಂಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅನಿಮೇಷನ್ ಕೌಶಲವನ್ನು ಮೆಚ್ಚಿಕೊಂಡರೆ, ಮತ್ತೆ ಕೆಲವರು ಇರಾನ್‌ನ ಇಂತಹ ನಡೆಯನ್ನು ಟೀಕಿಸಿದ್ದಾರೆ. "ಇರಾನ್ ಗೆದ್ದಿತೇ? ನಿಮ್ಮ ವಿವಿಗಳು ಬಾಂಬ್ ದಾಳಿಗೆ ತುತ್ತಾಗಿವೆ, ನೂರಾರು ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಗೆಲುವೇ?" ಎಂದು ಒಬ್ಬರು ಪ್ರಶ್ನಿಸಿದರೆ, "ಈ ವಿಡಿಯೋ ಎರಡು ವಾರಗಳಲ್ಲೇ ಹಳೆಯದಾಗಲಿದೆ, ಟ್ರಂಪ್ ಅವರ ಶಕ್ತಿ ಏನೆಂದು ತಿಳಿಯಲಿದೆ" ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇರಾನ್‌ ನಾಗರೀಕತೆಗೆ ತಲೆಬಾಗಿದ ಟ್ರಂಪ್: ಭಾರತದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಪೋಸ್ಟ್‌

ಶ್ವೇತಧ್ವಜ ಹಿಡಿದು ಬಂದು ತಲೆಬಾಗಿ ಕುಳಿತ ಟ್ರಂಪ್‌: ಇರಾನ್‌ ನ್ಯೂಸ್‌ 24 ಪೋಸ್ಟ್‌

ಇಂದು, #ಮಿನಾಬ್ ಶಾಲೆಯ ಮಕ್ಕಳು ಸ್ವರ್ಗದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ. ಬೆಳಕು ಮತ್ತು ದೇವತೆಗಳ ನಡುವೆ, ಎಂದಿಗೂ ಮಸುಕಾಗದ ನಗುವಿನೊಂದಿಗೆ. ನಿಮ್ಮ ನೆನಪು ನಮ್ಮ ಹೃದಯದಲ್ಲಿ ಜೀವಂತವಾಗಿದೆ... ನಾವು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ.

ಟ್ರಂಪ್‌ ಕುತ್ತಿಗೆ ಹಿಡಿದ ಇರಾನ್: ಬಲ್ಗೇರಿಯಾದ ಇರಾನ್‌ ರಾಯಭಾರ ಕಚೇರಿಯ ಪೋಸ್ಟ್‌

ಬಿಟ್ಟೂಬಿಡದೆ ಟ್ರಂಪ್‌ ಟ್ರೋಲ್‌ ಮಾಡಿದ ಜಿಂಬಾಬ್ವೆಯಲ್ಲಿರುವ ಇರಾನ್‌ ರಾಯಭಾರ ಕಚೇರಿ

ಯುದ್ಧ ಆರಂಭವಾದ ದಿನದಿಂದ ಇರಾನ್‌ನ ಜಿಂಬಾಬ್ವೆ ರಾಯಭಾರ ಕಚೇರಿಯು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಟ್ರಂಪ್ ಅವರನ್ನು ಸಖತ್ ಆಗಿ ಟ್ರೋಲ್ ಮಾಡುತ್ತಿದೆ.

'ಕೀಲಿಗಳನ್ನು ಕಳೆದುಕೊಂಡಿದ್ದೇವೆ':

ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಪವರ್ ಪ್ಲಾಂಟ್ ಮತ್ತು ಸೇತುವೆಗಳನ್ನು ನಾಶ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಇದಕ್ಕೆ ರಾಯಭಾರ ಕಚೇರಿಯು, "ನಾವು ಕೀಲಿಗಳನ್ನು ಕಳೆದುಕೊಂಡಿದ್ದೇವೆ" ಎಂದು ವ್ಯಂಗ್ಯವಾಗಿ ಉತ್ತರಿಸಿತ್ತು.

'ಸಮಯದ ಬಗ್ಗೆ ಅಣಕ'

ಟ್ರಂಪ್ ಅವರು ಇರಾನ್‌ಗೆ ರಾತ್ರಿ 8 ಗಂಟೆಯ ಗಡುವನ್ನು ನೀಡಿದ್ದಾಗ, "ರಾತ್ರಿ 8 ಗಂಟೆ ಅಷ್ಟು ಒಳ್ಳೆಯ ಸಮಯವಲ್ಲ. ಮಧ್ಯಾಹ್ನ 1 ಅಥವಾ 2 ಗಂಟೆಗೆ ಅಥವಾ ರಾತ್ರಿ 1 ಅಥವಾ 2 ಗಂಟೆಗೆ ಬದಲಾಯಿಸಬಹುದೇ? ನಿಮ್ಮ ಗಮನಕ್ಕೆ ಧನ್ಯವಾದಗಳು," ಎಂದು ರಾಯಭಾರ ಕಚೇರಿಯು ಅಣಕವಾಡಿತ್ತು.

'ಇನ್ನೂ ಶಿಲಾಯುಗಕ್ಕೆ ಹೋಗಿಲ್ಲ':

ಟ್ರಂಪ್ ಹಿಂದೆ "ಇರಾನ್ ಅನ್ನು ಬಾಂಬ್ ಹಾಕಿ ಶಿಲಾಯುಗಕ್ಕೆ ಕಳುಹಿಸುತ್ತೇವೆ" ಎಂದು ಬೆದರಿಕೆ ಹಾಕಿದ್ದರು. ಇದಕ್ಕೆ ರಾಯಭಾರ ಕಚೇರಿಯು, "ನಾವು ಇನ್ನೂ ಶಿಲಾಯುಗಕ್ಕೆ ಹೋಗಿಲ್ಲ" ಎಂದು ತೀಕ್ಷ್ಣವಾಗಿ ಉತ್ತರಿಸಿದೆ.

ರಾಯಭಾರ ಕಚೇರಿಯ ಇಂತಹ ವಿಚಿತ್ರ ಮತ್ತು ತೀಕ್ಷ್ಣವಾದ ಕಾಮೆಂಟ್‌ಗಳಿಗೆ ನೆಟ್ಟಿಗರು ಫಿದಾ ಆಗಿದ್ದು, "ಎಕ್ಸ್‌ನಲ್ಲಿ ನೀವು ಅತ್ಯಂತ ತಮಾಷೆಯ ರಾಯಭಾರ ಕಚೇರಿ" ಎಂದು ಹೊಗಳುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೆಹಬಾಜ್ ಷರೀಫ್ 'ಕಾಪಿ-ಪೇಸ್ಟ್' ಎಡವಟ್ಟು: ಇರಾನ್ ಬಿಕ್ಕಟ್ಟಿನ ನಡುವೆ ಪಾಕ್ ಪ್ರಧಾನಿ ಪೋಸ್ಟ್ ನೋಡಿ ನಕ್ಕ ನೆಟ್ಟಿಗರು!
ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಕೋಮಾದಲ್ಲಿ: ಕೋಂ ನಗರದಲ್ಲಿ ಚಿಕಿತ್ಸೆ