ಕೋವಿಡ್​ನಲ್ಲಿ ಕೆಲಸ ಕಳಕೊಂಡ, ತನ್ನ ಪ್ರತಿಕೃತಿ ಮಾರಿ 9 ಸಾವಿರ ಕೋಟಿಯ ಒಡೆಯನಾದ ಇನ್​ಫ್ಲುಯೆನ್ಸರ್​!

Published : Feb 05, 2026, 06:26 PM IST
Khaby Lame

ಸಾರಾಂಶ

ಕೋವಿಡ್​ ಸಮಯದಲ್ಲಿ ಕಾರ್ಖಾನೆ ಕೆಲಸ ಕಳೆದುಕೊಂಡಿದ್ದ ಇಟಲಿಯ ಖಾಬಿ ಲ್ಯಾಮ್, ಟಿಕ್​ಟಾಕ್​ ಮೂಲಕ ಜಗತ್ಪ್ರಸಿದ್ಧರಾದರು. ಇದೀಗ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಹಾಂಗ್ ಕಾಂಗ್ ಮೂಲದ AI ಕಂಪನಿಗೆ ಮಾರಾಟ ಮಾಡುವ ಮೂಲಕ, ಕೆಲಸವೇ ಮಾಡದೇ 9 ಸಾವಿರ ಕೋಟಿ ರೂಪಾಯಿಗಳ ಒಡೆಯನಾಗಿದ್ದಾರೆ.

ಅದೃಷ್ಟವೊಂದಿದ್ದರೆ ಮಣ್ಣು ಕೂಡ ಹೊನ್ನು ಆಗುತ್ತದೆ ಎನ್ನುವ ಮಾತಿದೆ. ಅದರ ಜೊತೆ ಒಂದಿಷ್ಟು ಶ್ರಮ ಸೇರಿದರೆ ರಾತ್ರೋರಾತ್ರಿ ಜಗತ್ಪ್ರಸಿದ್ಧಿಯನ್ನೇ ಪಡೆಯಬಹುದು ಎನ್ನುವುದಕ್ಕೆ, ಕೋವಿಡ್​ ಸಮಯದಲ್ಲಿ ಕೆಲಸ ಕಳೆದುಕೊಂಡು, ಇದೀಗ ಒಂದೇ ಸಮನೆ 9 ಸಾವಿರ ಕೋಟಿಯ ಒಡೆಯನಾದ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​, ಟಿಕ್​ಟಾಕ್​ ಸ್ಟಾರ್​ ಇಟಲಿಯ ಖಾಬಿ ಲ್ಯಾಮ್ ಒಬ್ಬರು. ಟಿಕ್‌ಟಾಕ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಖ್ಯಾತಿಯನ್ನು ಇದಾಗಲೇ ಹೊಂದಿದ್ದ ಖಾಬಿ ಅವರಿಗೆ ಇದೀಗ ಅದೃಷ್ಟ ಒತ್ತಿ ಒತ್ತಿ ಬಂದಿದೆ. ಇದಾಗಲೇ, ಖಾಬಿ ಅವರು, 10 ಕೋಟಿಗೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ಟಿಕ್‌ಟಾಕ್‌ನ ಅತ್ಯಂತ ಜನಪ್ರಿಯ ಸೃಷ್ಟಿಕರ್ತರು.

ಟಿಕ್​ಟಾಕರ್​

ಇಡೀ ಜಗತ್ತನ್ನು ಕೋವಿಡ್​ ಮಹಾಮಾರಿ ಕಬಳಿಸಿದ್ದ ಸಂದರ್ಭದಲ್ಲಿ, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಂತೆ, ಖಾಬಿ ಕೂಡ ಕೆಲಸ ಕಳೆದುಕೊಂಡಿದ್ದರು. ಇತರ ಅವರು ಕಾರ್ಖಾನೆ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು. ಆದರೆ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಆಗ ಅವರ ಕೈ ಹಿಡಿದದ್ದು ಟಿಕ್​ ಟಾಕ್​. ಹಾಸ್ಯ ಪ್ರಜ್ಞೆ ಇವರು ಅವರು, ಅದನ್ನೇ ಬಂಡವಾಳ ಮಾಡಿಕೊಂಡರು. ಅವರ ಟಿಕ್​ಟಾಕ್​ ವಿಶೇಷತೆ ಎಂದರೆ, ಅವರು ಎಲ್ಲಿಯೂ ಮಾತೇ ಆಡದೇ ಕೇವಲ ಸನ್ನೆಗಳ ಮೂಲಕ ಹಾಸ್ಯ ಮಾಡುತ್ತಿದ್ದರು. ಅವರ ಹಾಸ್ಯಮಯ ಪ್ರತಿಕ್ರಿಯೆಗಳು ಅವರನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ರಭಾವಿಯನ್ನಾಗಿ ಮಾಡಿತು. ದಿನದಿಂದ ದಿನಕ್ಕೆ ಫಾಲೋವರ್ಸ್​ ಹೆಚ್ಚಾದರು. ಆರಂಭದಲ್ಲಿಯೇ ಅವರು, ಟಿಕ್‌ಟಾಕ್‌ನಲ್ಲಿ ಪ್ರತಿ ಪೋಸ್ಟ್‌ಗೆ ಖಾಬಿ ಲೇಮ್‌ 750,000 ಡಾಲರ್‌ ಅಂದರೆ ಸುಮಾರು 6 ಕೋಟಿ ರೂ. ಹಣ ಗಳಿಸಲು ಆರಂಭಿಸಿದ್ದರು. ಆಗಲೇ ನೂರಾರು ಕೋಟಿ ಒಡೆಯನೂ ಆದರು.

ಕೆಲಸವೇ ಮಾಡಿದೆ ಬಿಲೇನಿಯರ್​

ಆದರೆ, ಇದೀಗ ಕೆಲಸವೇ ಮಾಡದೇ, 9 ಸಾವಿರ ಕೋಟಿಯ ಒಡೆಯ ಆಗಿದ್ದಾರೆ ಖಾಬಿ. ಅದು ಹೇಗೆಂದರೆ, ಕೃತಕ ಬುದ್ಧಿಮತ್ತೆ (AI) ಮೇಲಿನ ಕ್ರೇಜ್ ಪ್ರಸ್ತುತ ಜಗತ್ತನ್ನು ವ್ಯಾಪಿಸುತ್ತಿದೆ. ಜನರು ವಿವಿಧ ರೀತಿಯ ವೀಡಿಯೊಗಳನ್ನು ರಚಿಸಲು AI ಅನ್ನು ಬಳಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಸಹ ಈ ಹೊಸ ತಂತ್ರಜ್ಞಾನದ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಖಾಬಿ ಲ್ಯಾಮ್ ಅವರು, AI ಆಧರಿತ ಹಾಂಗ್ ಕಾಂಗ್ ಕಂಪೆನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದಕ್ಕಾಗಿ ಅವರು 9 ಸಾವಿರ ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಏನಿದು ಡೀಲ್​?

ಅಷ್ಟಕ್ಕೂ ಈ ಮೊತ್ತವನ್ನು ಅವರಿಗೆ ಕೊಟ್ಟಿದ್ದು, ಕೇವಲ ಅವರ ಫೋಟೋಗಳನ್ನು ತಮ್ಮ ಪ್ರಮೋಷನ್​ಗೆ ಬಳಸಿಕೊಳ್ಳುವುದಕ್ಕಾಗಿ! ಇದು ಕೇಳಿದರೇನೇ ಅಚ್ಚರಿ ಆಗುತ್ತದೆ ಅಲ್ಲವೇ, ಈ ಒಪ್ಪಂದದ ಭಾಗವಾಗಿ, ಖಾಬಿ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ಇದರ ಅರ್ಥ, ಖಾಬಿ ಲ್ಯಾಮ್ ತಮ್ಮ ಬ್ರ್ಯಾಂಡಿಂಗ್, ಫೇಸ್ ಐಡಿ, ವಾಯ್ಸ್ ಐಡಿ ಮತ್ತು ನಡವಳಿಕೆಯ ಮಾದರಿಗಳಿಗಾಗಿ ಈ ಹಾಂಗ್ ಕಾಂಗ್ ಮೂಲದ ಕಂಪನಿಗೆ ಅಧಿಕಾರ ನೀಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ, AI ಬಳಸಿ ಖಾಬಿ ಲ್ಯಾಮ್‌ನ ವರ್ಚುವಲ್ ಮಾದರಿಯನ್ನು ರಚಿಸಲಾಗುತ್ತದೆ. ಅದನ್ನು ಅವರು ಯಾವುದಾದರೂ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಅಂದರೆ, ಖಾಬಿ ಅವರ ಪ್ರತಿಕೃತಿ ಅಲ್ಲಿ ಇರುತ್ತದೆ ಅಷ್ಟೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆಯಾದ ಬಳಿಕ ಗಂಡ ಹೆಂಡತಿ ನಡುವೆ ಜಗಳ, ಬರೋಬ್ಬರಿ 20 ವರ್ಷ ಮಾತೇ ಇಲ್ಲ, ಆದ್ರೂ ಮೂವರು ಮಕ್ಕಳು!
ವಾಷಿಂಗ್ಟನ್‌ ಪೋಸ್ಟ್‌ನಿಂದ 300 ಪತ್ರಕರ್ತರ ವಜಾ, ಕೆಲಸ ಕಳೆದುಕೊಂಡ ಶಶಿ ತರೂರ್‌ ಪುತ್ರ ಇಶಾನ್‌!