
ಕುವೈತ್ ಸಿಟಿ (ಫೆ.4): ಫ್ಯಾಮಿಲಿಗಳು ವಾಸಿಸುವ ಏರಿಯಾಗಳಲ್ಲಿ ಬ್ಯಾಚುಲರ್‌ಗಳಿಗೆ ಮನೆ ಬಾಡಿಗೆ ಕೊಟ್ಟಿದ್ದಕ್ಕೆ ಕುವೈತ್ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಫರ್ವಾನಿಯಾ ಗವರ್ನರೇಟ್‌ನ ರಬಿಯಾ, ಫಿರ್ದೌಸ್ ಮತ್ತು ಒಮಾರಿಯಾ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿದ್ದ 10 ಕಟ್ಟಡಗಳ ಕರೆಂಟ್ ಸಂಪರ್ಕವನ್ನು ಕಟ್ ಮಾಡಿದ್ದಾರೆ.
ಕುವೈತ್ ಮುನ್ಸಿಪಾಲಿಟಿಯ ಇಂಜಿನಿಯರಿಂಗ್ ಆಡಿಟ್ ಮತ್ತು ಫಾಲೋ-ಅಪ್ ವಿಭಾಗ ಈ ದಾಳಿ ನಡೆಸಿದೆ. ಈ ಕಟ್ಟಡಗಳ ಮಾಲೀಕರಿಗೆ ಈ ಮೊದಲೇ 47 ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಮುನ್ಸಿಪಾಲಿಟಿ ತಿಳಿಸಿದೆ. ಆದರೆ, ಈ ಎಚ್ಚರಿಕೆಗಳನ್ನು ಮಾಲೀಕರು ಕಡೆಗಣಿಸಿದ್ದರು. ಹೀಗಾಗಿ, ಸಂಬಂಧಪಟ್ಟ ಇತರೆ ಇಲಾಖೆಗಳ ಸಹಕಾರದೊಂದಿಗೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಹ ಕಠಿಣ ಕ್ರಮ ಕೈಗೊಂಡಿದ್ದಾರೆ.
ಕುಟುಂಬಗಳು ವಾಸಿಸುವ ಪ್ರದೇಶಗಳಲ್ಲಿ ಬ್ಯಾಚುಲರ್‌ಗಳು ಇರುವುದನ್ನು ತಡೆಯುವುದೇ ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲೂ ಈ ತಪಾಸಣೆ ಮುಂದುವರಿಯಲಿದೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ