ಇಂಡೋನೇಷಿಯಾ ಜನರು 4 ರಿಂದ 5 ಮಕ್ಕಳು ಮಾಡಿಕೊಳ್ಳುತ್ತಾರೆ. ಆದರೆ ಕೆಲ ದೇಶದ ದನ ಕೇವಲ ನಾಯಿ, ಬೆಕ್ಕು ಹಿಡಿದು ಸಂತೋಷ ಪಡುತ್ತಿದ್ದಾರೆ ಎಂದು ಪೋಪ್ ಕ್ಷೀಣಿಸುತ್ತಿರುವ ಸಮುದಾಯದ ಜನಸಂಖ್ಯೆ ಕುರಿತು ಖಡಕ್ ಸಂದೇಶ ರವಾನಿಸಿದ್ದಾರೆ.
ಜಕರ್ತಾ(ಸೆ.05) ಹಲವು ದೇಶಗಳಲ್ಲಿ ಜನಸಂಖ್ಯಾ ಅನುಪಾತದಲ್ಲಿನ ಮಹತ್ವದ ಬದಲಾವಣೆ ಆತಂಕ ಹೆಚ್ಚಿಸಿದೆ. ಈ ಕುರಿತು ಹಲವು ಸಮುದಾಯಗಳು ಆತಂಕ ವ್ಯಕ್ತಪಡಿಸುತ್ತಲೇ ಬಂದಿದೆ. ಇದೀಗ ಕ್ರಿಶ್ಚಿಯನ್ ಸಮುದಾಯದ ಗುರು ಪೋಪ್ ಫ್ರಾನ್ಸಿಸ್ ಇದೇ ಆತಂಕವನ್ನು ಹಾಸ್ಯದ ಮೂಲಕ ಹೇಳಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇಂಡೋನೇಷಿಯಾದಲ್ಲಿ ಜನ 4 ರಿಂದ 5 ಮಕ್ಕಳು ಮಾಡಿಕೊಳ್ಳುತ್ತಾರೆ. ಆದರೆ ಕೆಲ ದೇಶದ ಜನರು ನಾಯಿ ಬೆಕ್ಕು ಸಾಕಿ ಸಂತೋಷ ಪಡುತ್ತಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
ಇಂಡೋನೇಷಯಾದ ಜಕರ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೋಪ್ ದೇಶದ ಜನಸಂಖ್ಯೆ, ಕುಟುಂಬ ಕಲ್ಯಾಣ ಕುರಿತ ಆಲೋಚನೆಗಳನ್ನು ಪ್ರಶಂಸಿಸಿದ್ದಾರೆ. ಇಲ್ಲಿನ ಜನ 2 , 3, 4 ಹಾಗೂ 5 ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಆರೈಕೆಯಿಂದ ಬೆಳೆಸುತ್ತಾರೆ. ಇದು ಇತರ ದೇಶಗಳಿಗೂ ಮಾದರಿಯಾಗಬೇಕು. ಆದರೆ ಕೆಲ ದೇಶದ ಜನ ನಾಯಿ ಬೆಕ್ಕುಗೆ ಸೀಮಿತಗೊಳ್ಳುತ್ತಿದ್ದಾರೆ ಎಂದು ಪೋಪ್ ಹಳಿದ್ದಾರೆ.
ಸೆಕ್ಸ್ ಅನ್ನೋದು ದೇವರು ಮಾನವನಿಗೆ ನೀಡಿದ ಅದ್ಭುತ ಸಂಗತಿ, ಪೋಪ್ ಫ್ರಾನ್ಸಿಸ್ ಮಾತು!
ಈ ಮನಸ್ಥಿತಿ ಉತ್ತಮವಲ್ಲ. ಕಾರಣ ಇದು ಅಪಾಯದ ಸಂಕೇತ. ಮಕ್ಕಳ ಬೇಡ ಎಂದು ಸಾಗುವುದು ಸಮುದಾಯಗಳ ಅಳಿವಿಗೆ ಕಾರಣವಾಗುತ್ತದೆ. ಪ್ರತಿ ಸಮುದಾಯಕ್ಕೆ ಅದರದ್ದೇ ಆದ ಮಹತ್ವ ಹಾಗೂ ಪಾರಂಪರಿಕ, ಐತಿಹಾಸಿ ಹಿನ್ನಲೆಯಿದೆ. ಒಂದು ನಿರ್ಧಾರ ಒಂದು ಸಂಸ್ಕೃತಿಯನ್ನು ಅಳಿವಿನಂಚಿನಲ್ಲಿಡುತ್ತದೆ ಎಂದಿದ್ದಾರೆ. ಈ ರೀತಿಯ ಮನಸ್ಥಿತಿ ಉತ್ತಮ ನಡೆಯಲ್ಲ ಎಂದು ಪೋಪ್ ಹೇಳಿದ್ದಾರೆ.
ಪೋಪ್ ಭಾಷಣದಲ್ಲಿ ನಾಯಿ ಬೆಕ್ಕಿಗೆ ತೃಪ್ತಿ ಅನ್ನೋ ಸಂದೇಶ ನೀಡುತ್ತಿದ್ದಂತೆ ವೇದಿಕೆಯಲ್ಲಿದ್ದ ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡ್‌ಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಚಪ್ಪಾಳೆ ತಟ್ಟಿದ್ದಾರೆ. ಇದೇ ವೇಳೆ ಅಧ್ಯಕ್ಷರತ್ತ ತಿರುಗಿದ ಪೋಪ್, ನಾನು ಹೇಳುತ್ತಿರುವುದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇಂಡೋನೇಷಿಯಾ ಜನರೆ, ನಿಮ್ಮ ನಿರ್ಧಾರ ಸರಿಯಾಗಿದೆ. ನಾನು ಹೇಳುತ್ತಿರುವುದು ಹಾಸ್ಯವಾಗಿ ಕಾಣಬಹುದು. ಆದರೆ ಇದರ ಹಿಂದಿನ ಗಂಭೀರತೆ ಹಲವು ಸಮುದಾಯದ ಪ್ರಮುಖರಿಗೆ ಅರ್ಥವಾಗಿಲ್ಲ ಎಂದಿದ್ದಾರೆ. ಇತ್ತೀಗೆ ರೋಮ್‌ನಲ್ಲಿ ಪೋಪ್ ಮಾಡಿದ ಭಾಷಣದಲ್ಲೂ ಜನಸಂಖ್ಯಾಶಾಸ್ತ್ರದ ಕುರಿತು ಮಾತನಾಡಿದ್ದರು. ಈ ವೇಳೆ ಇಟರಿ ಯೂರೋಪ್ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಇಟಲಿ ಯೂರೋಪ್‌ನಲ್ಲಿ ಕೆಲ ಸಮುದಾಯದ ಜನಸಂಖ್ಯೆ ಕುಂಠಿತವಾಗುತ್ತಿದೆ. ಮನೆಗಳು ಬೇಸರದ ತಾಣವಾಗುತ್ತದೆ. ಮದುವೆಯಾದ ಬಳಿಕ ಮಕ್ಕಳ ಬೇಡ ನಿರ್ಧರಿಸುವುದು ಹೆಚ್ಚು. ಇದರಿಂದ ಮನೆಯಲ್ಲಿ ಮಕ್ಕಳ ಸದ್ದು ಇಲ್ಲದಾಗಿದೆ. ಅಜ್ಜ ಅಜ್ಜಿ ಏಕಾಂಗಿ, ಕುಟುಂಬವೇ ಬೆಳೆಯುತ್ತಿಲ್ಲ, ಇನ್ನು ಸಮುದಾಯದ ಪ್ರಶ್ನೆ ಎಲ್ಲಿ ಎಂದು ಪೋಪ್ ಪ್ರಶ್ನಿಸಿದ್ದರು.
ವಿಶ್ವಸಂಸ್ಥೆಯ ಸಂಭಾವ್ಯ ಜಾಗತಿಕ ಆಯೋಗಕ್ಕೆ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಮೆಕ್ಸಿಕೋ ಅಧ್ಯಕ್ಷ!