ಅಮೆರಿಕದಿಂದ ಕುಲಾಂತರಿ ಉತ್ಪನ್ನ ಆಮದಿಗೆ ಭಾರತ ಅಸ್ತು?

Published : Jul 04, 2025, 05:14 AM IST
US INDIAN

ಸಾರಾಂಶ

ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು, , ಕೆಲವು ಸಂಸ್ಕರಿಸಿದ, ತಳೀಯವಾಗಿ ಮಾರ್ಪಡಿಸಿದ (ಕುಲಾಂತರಿ) ಅಮೆರಿಕದ ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶ ನೀಡಬಹುದು ಎಂದು ಮೂಲಗಳು ಹೇಳಿವೆ.

ನವದೆಹಲಿ: ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು, , ಕೆಲವು ಸಂಸ್ಕರಿಸಿದ, ತಳೀಯವಾಗಿ ಮಾರ್ಪಡಿಸಿದ (ಕುಲಾಂತರಿ) ಅಮೆರಿಕದ ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶ ನೀಡಬಹುದು ಎಂದು ಮೂಲಗಳು ಹೇಳಿವೆ.

ಭಾರತದಲ್ಲಿ ಕುಲಾಂತರಿ ಉತ್ಪನ್ನಗಳಿಗೆ ರೈತರ ವಿರೋಧ ಇದ್ದರೂ ಆಮೆರಿಕದಿಂದ ಕೆಲ ಬಿಟಿ ಉತ್ಪನ್ನಗಳ ಆಮದಿಗೆ ಭಾರತ ಅಸ್ತು ಎಂದಿದೆ. ಪಶು ಆಹಾರಗಳಲ್ಲಿ ಬಳಸಲಾಗುವ ಕೆಲವು ಉತ್ಪನ್ನಗಳಾದ ಸೋಯಾಬೀನ್‌ ಮೇವು ಮತ್ತು ಒಣ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಭಾರತ ಒಪ್ಪುವ ಸಾಧ್ಯತೆ ಇದೆ. 2-3 ದಿನದಲ್ಲಿ ವ್ಯಾಪಾರ ಒಪ್ಪಂದದ ಅಂತಿಮ ಘೋಷಣೆ ಹೊರಬೀಳಬಹುದು ಎಂದು ಮೂಲಗಳು ಹೇಳಿವೆ. ಎಂದು ಮೂಲಗಳು ಹೇಳಿವೆ.

ಆದರೆ ರೈತರ ವಿರೋಧದ ಕಾರಣ ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅವಕಾಶ ನೀಡಲಿಕ್ಕಿಲ್ಲ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಉತ್ಪನ್ನಗಳ ಮೇಲೆ ಭಾರಿ ಪ್ರತಿತೆರಿಗೆ ಹೇರಿ ಬಳಿಕ ಜು.9ರವರೆಗೆ ತಮ್ಮ ನಿರ್ಧಾರ ಮುಂದೂಡಿದ್ದರು. ಈಗ ಜು.9ರ ಗಡುವಿನೊಳಗೆ ತೆರಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶ ಯತ್ನಿಸುತ್ತಿವೆ.

ಅಮೆರಿಕದಿಂದ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಸರಕನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

ಆಪರೇಷನ್ ಸಿಂದೂರ್ ನಂತರ, ಭಾರತೀಯ ಸೇನೆಯು ಪಶ್ಚಿಮ ಪ್ರದೇಶದಲ್ಲಿ ತನ್ನ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ನಿರಂತರವಾಗಿ ಗಮನಹರಿಸುತ್ತಿದೆ. ಈ ನಡುವೆ, ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳಿಗಾಗಿ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಈ ತಿಂಗಳು ಅಮೆರಿಕದಿಂದ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳ ಮೊದಲ ಸರಕನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

ಭಾರತವು ಈ ಹೆಲಿಕಾಪ್ಟರ್‌ಗಳಿಗಾಗಿ 15 ತಿಂಗಳಿನಿಂದ ಕಾಯುತ್ತಿದೆ. ಆದರೆ, ಅಂತಿಮವಾಗಿ ಅವುಗಳ ಡೆಲಿವರಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿದೆ. ಇವುಗಳನ್ನು ಪಶ್ಚಿಮ ಗಡಿಯಲ್ಲಿ ನಿಯೋಜಿಸಲು ಯೋಜಿಸಲಾಗಿದೆ.ಅಪಾಚೆ ಸ್ಕ್ವಾಡ್ರನ್ ಅನ್ನು ಮಾರ್ಚ್ 2024 ರಲ್ಲಿ ಜೋಧ್‌ಪುರದಲ್ಲಿ ಸೇನಾ ವಾಯುಯಾನ ದಳವು ಸ್ಥಾಪಿಸಿತು. ಆದರೆ, ಅದರ ರಚನೆಯ ಹೊರತಾಗಿಯೂ, ಸ್ಕ್ವಾಡ್ರನ್‌ನಲ್ಲಿ 15 ತಿಂಗಳವರೆಗೆ ಅಪಾಚೆ ಹೆಲಿಕಾಪ್ಟರ್‌ಗಳು ಸೇವೆಯಲ್ಲಿ ಇದ್ದಿರಲಿಲ್ಲ.

ಭಾರತವು ಅಮೆರಿಕದಿಂದ ಒಟ್ಟು ಆರು ಅಪಾಚೆ AH-64E ಹೆಲಿಕಾಪ್ಟರ್‌ಗಳನ್ನು ಪಡೆಯಲಿದೆ. ಮೊದಲ ಮೂರು ಹೆಲಿಕಾಪ್ಟರ್‌ಗಳು ಕಳೆದ ವರ್ಷ ಮೇ-ಜೂನ್‌ನಲ್ಲಿ ತಲುಪಬೇಕಿತ್ತು. ಆದರೆ, ಅಮೆರಿಕ ತನ್ನ ಡೆಡ್‌ಲೈನ್‌ಗೆ ಬದ್ಧವಾಗಿರಲಿಲ್ಲ.ತಾಂತ್ರಿಕ ಮತ್ತು ಪೂರೈಕೆ ಸಮಸ್ಯೆಗಳನ್ನು ಅಮೆರಿಕ ಉಲ್ಲೇಖಿಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಬಹಿರಂಗಪಡಿಸಿವೆ. ಆದರೆ ಈಗ ಭಾರತವು ಈ ತಿಂಗಳ ಮೊದಲ ಸರಕಿನಲ್ಲಿ ಮೂರು ಹೆಲಿಕಾಪ್ಟರ್‌ಗಳನ್ನು ಮತ್ತು ವರ್ಷದ ಅಂತ್ಯದ ವೇಳೆಗೆ ಉಳಿದ ಮೂರು ಹೆಲಿಕಾಪ್ಟರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ