Russia Ukraine War: ಉಕ್ರೇನ್‌ ಹತ್ಯಾಕಾಂಡದ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ

Published : Apr 06, 2022, 03:11 AM ISTUpdated : Apr 06, 2022, 04:05 AM IST
 Russia Ukraine War: ಉಕ್ರೇನ್‌ ಹತ್ಯಾಕಾಂಡದ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ

ಸಾರಾಂಶ

* ಉಕ್ರೇನ್‌ ಹತ್ಯಾಕಾಂಡದ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ * ಬುಚಾದಲ್ಲಿ ನಡೆದ ನಾಗರಿಕರ ಹತ್ಯಾಕಾಂಡವನ್ನು ಖಂಡಿಸಿದ ತಿರುಮೂರ್ತಿ * ನಿಲ್ಲದ ರಷ್ಯಾ-ಉಕ್ರೇನ್ ಸಮರ 

ನ್ಯೂಯಾರ್ಕ್(ಏ. 06) ಉಕ್ರೇನ್‌ನ ಬುಚಾ ನಗರದಲ್ಲಿ(Russia Ukraine war)  ರಷ್ಯಾನಡೆಸಿರುವ ನಾಗರಿಕ ಹತ್ಯೆಗಳನ್ನು ವಿಶ್ವಸಂಸ್ಥೆಯಲ್ಲಿ ಭಾರತ ಖಂಡಿಸಿದೆ. ಅಮಾಯಕರ ಜೀವಗಳು ಅಪಾಯದಲ್ಲಿದೆ ಹಾಗಾಗಿ ಸ್ವತಂತ್ರ ತನಿಖೆಯನ್ನು ಭಾರತ ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.

‘ಕಳೆದ ಬಾರಿ ಉಕ್ರೇನ್‌ನ ಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಿದಾಗಿನಿಂದಲೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ಉಕ್ರೇನಿನ ಇತ್ತೀಚಿನ ವರದಿಗಳು ಆತಂಕಕಾರಿಯಾಗಿವೆ. ನಾವು ಈ ಹತ್ಯಾಕಾಂಡವನ್ನು ಖಂಡಿಸುತ್ತೇವೆ ಮತ್ತು ಸ್ವತಂತ್ರ ತನಿಖೆಯನ್ನು ಬೆಂಬಲಿಸುತ್ತೇವೆ’ ಎಂದು ಅವರು ಹೇಳಿದರು.

ಯುದ್ಧ ಆರಂಭವಾದಾಗಿನಿಂದ ಮೊದಲ ಬಾರಿ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರಿಗೆ ತಿರುಮೂರ್ತಿ ಧನ್ಯವಾದ ಅರ್ಪಿಸಿದರು.'

ಜಿಂಕೆ ಕೊಂಬಿನ ರಕ್ತದ ಶಕ್ತಿ! ಪುಟಿನ್ ಸುತ್ತ ಹುಟ್ಟಿಕೊಂಡಿರುವ ಕಥೆ

ಕ್ರಮ ಕೈಗೊಳ್ಳಿ ಅಥವಾ ವಿಶ್ವಸಂಸ್ಥೆಯನ್ನು ವಿಸರ್ಜಿಸಿ:  ರಷ್ಯಾ ಉಕ್ರೇನ್‌ನಲ್ಲಿ ಹತ್ಯಾಕಾಂಡ ನಡೆಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ವಿಶ್ವಸಂಸ್ಥೆಯ ವಿರುದ್ಧ ಸಾಮಾನ್ಯ ಸಭೆಯ ಭಾಷಣದಲ್ಲೇ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಹರಿಹಾಯ್ದಿದ್ದಾರೆ. ರಷ್ಯಾ ನಡೆಸುತ್ತರುವ ಮಾರಣ ಹೋಮದ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಿ ಅಥವಾ ವಿಶ್ವಸಂಸ್ಥೆಯನ್ನು ವಿಸರ್ಜಿಸಿ ಎಂದು ಗುಡುಗಿದ್ದಾರೆ. ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ ತನ್ನ ವಿಟೋ ಅಧಿಕಾರ ಬಳಸಿಕೊಂಡು ಜಾಗತಿಕ ಮಾತುಕತೆಗಳನ್ನು ನಿರ್ಬಂಧಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕಿ ಸಾಧ್ಯವಾಗದಿದ್ದರೆ ವಿಶ್ವಸಂಸ್ಥೆಯನ್ನು ವಿಸರ್ಜಿಸಿ ಎಂದ ಅವರು ಹೇಳಿದ್ದಾರೆ.

 ರಷ್ಯಾ-ಉಕ್ರೇನ್ ಯುದ್ಧದ  ನಡುವೆ ಮಾನವರ ಸಂಕಷ್ಟಗಳಿಗೆ ಅಂತ್ಯವೇ ಇಲ್ಲ ಎಂದು ತೋರುತ್ತದೆ. ಯುದ್ಧ-ಹಾನಿಗೊಳಗಾದ ಉಕ್ರೇನ್‌ನಿಂದ ಪ್ರತಿದಿನವೂ ಭಯಾನಕ ವಿವರಗಳು ಹೊರಹೊಮ್ಮುತ್ತಿವೆ. ಇಂಗ್ಲೆಂಡ್ (England) ಮೂಲದ ಪತ್ರಿಕೆಯೊಂದರ ವರದಿಯ ಪ್ರಕಾರ, ಉಕ್ರೇನ್ ಸೆಕ್ಯುರಿಟಿ ಸರ್ವೀಸಸ್ (Ukrainian Security Services) (ಎಸ್ಎಸ್ ಯು) ರಷ್ಯಾದ ಸೈನಿಕರ  (Russian soldiers) ಆಡಿಯೋವನ್ನು ಇಂಟರ್ ಸೆಪ್ಟ್ ಮಾಡಿ ಪಡೆದುಕೊಂಡಿದ್ದು, ಇದರಲ್ಲಿ ಭಯಾನಕ ವಿವರಗಳು ಪ್ರಕಟವಾಗಿದ್ದವು. 

ಉಕ್ರೇನ್ ನೆಲದಲ್ಲಿ, "ಹದಿಹರೆಯದ ಹುಡುಗಿಯರ ಮೇಲೆ ಅತ್ಯಾಚಾರ  (Minor Girl Rape), ಹಾಗೂ ನಾಯಿಗಳನ್ನು (Dog Meat) ತಿಂದು ಬದುಕುತ್ತಿರುವ" ಬಗ್ಗೆ ಅವರು ಮಾತನಾಡಿದ್ದನ್ನು ಅಲ್ಲಿ ಕೇಳಬಹುದಾಗಿದೆ.  ರೇಡಿಯೊ ಸಂವಹನದಲ್ಲಿ, ಒಬ್ಬ ವ್ಯಕ್ತಿ ಹೇಳುವ ಮಾತುಗಳಲು ದಾಖಲಾಗಿದ್ದು, "ನಮ್ಮಲ್ಲಿ ಮೂರು ಟ್ಯಾಂಕ್‌ಗಳ ಹುಡುಗರಿದ್ದಾರೆ ಮತ್ತು ಅವರು ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾರೆ." ಎಂದು ಹೇಳಿದ್ದಾರೆ. ನಂತರ, "ಯಾರು ಮಾಡಿದರು" ಎಂದು ಕೇಳುವ ಮಹಿಳೆಯ ಧ್ವನಿ ಹೊರಹೊಮ್ಮಿದೆ. ಅದಕ್ಕೆ ಪ್ರತಿಕ್ರಿಯೆ ನೀಡುವ ವ್ಯಕ್ತಿ, "ಮೂರು ಟ್ಯಾಂಕರ್ ನಲ್ಲಿರುವ ಹುಡುಗರು,  ಆಕೆಗೆ 16 ವರ್ಷ." ಎಂದು ಹೇಳುತ್ತಾನೆ.

ಮಹಿಳೆ ನಂತರ "ನಮ್ಮ ಹುಡುಗರ" ಬಗ್ಗೆ ಮಾತನಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಆ ವ್ಯಕ್ತಿ 'ಹೌದು' ಎಂದು ಹೇಳುತ್ತಾನೆ. ನಂತರ ಮಹಿಳೆ ರಷ್ಯನ್ ಭಾಷೆಯಲ್ಲಿ ಪ್ರಮಾಣ ಮಾಡುವುದು ಅಲ್ಲಿ ದಾಖಲಾಗಿದ್ದು ಒಂದಷ್ಟು ಸುದ್ದಿಯಾಗಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?