ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ, ಇದು ದ್ವೀಪ ರಾಷ್ಟ್ರದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆರ್ಥಿಕತೆಯು ಪತನದ ಹಾದಿಯಲ್ಲಿದೆ.
ಕೊಲಂಬೊ (ಏ. 5): ಪ್ರಧಾನಿ ರಾಜಪಕ್ಷೆ (Rajapaksa government ) ಸರ್ಕಾರವು ದೇಶದ ಎಲ್ಲವನ್ನೂ ಚೀನಾ (China) ಸರ್ಕಾರಕ್ಕೆ ಮಾರಾಟ ಮಾಡಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಏನೂ ಇಲ್ಲ. ವಿದೇಶಗಳಿಂದ ಎಲ್ಲವನ್ನೂ ಸಾಲದ ಮೇಲೆಯೇ ಎಲ್ಲವನ್ನೂ ಖರೀದಿಸಲಾಗಿದೆ ಎಂದು ಶ್ರೀಲಂಕಾದ ಆಹಾರ ವ್ಯಾಪಾರಿಗಳು ( Food vendors ) ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ (economic and political crises) ನಡುವೆ ಶ್ರೀಲಂಕಾದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳು ಗಗನಕ್ಕೇರುತ್ತಿವೆ. 3 ರಿಂದ 4 ತಿಂಗಳ ಹಿಂದೆ ಸೇಬು ಕೆ.ಜಿಗೆ ₹ 500ಕ್ಕೆ ಮಾರಾಟವಾಗುತ್ತಿತ್ತು, ಈಗ ₹ 1000ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ₹ 700ಕ್ಕೆ ಮಾರಾಟವಾಗುತ್ತಿದ್ದ ಪೇರಳೆ ಕಾಯಿ ಕೆಜಿಗೆ ₹ 1500ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಫಾರೂಖ್. ಎಷ್ಟೇ ಆದರೂ ಜನರಲ್ಲಿ ಕೊಳ್ಳಲು ಮಾತ್ರ ಹಣವಿಲ್ಲ ಎನ್ನುತ್ತಾರೆ.
"ಶ್ರೀಲಂಕಾ ಸರ್ಕಾರ ಎಲ್ಲವನ್ನೂ ಚೀನಾಕ್ಕೆ ಮಾರಿದೆ. ಅದು ದೊಡ್ಡ ಸಮಸ್ಯೆಯಾಗಿದೆ. ಶ್ರೀಲಂಕಾದಲ್ಲಿ ಹಣವಿಲ್ಲ, ಏಕೆಂದರೆ ಅದು ಚೀನಾಕ್ಕೆ ಎಲ್ಲವನ್ನೂ ಮಾರಾಟ ಮಾಡಿದೆ. ಅದು ಇತರ ದೇಶಗಳಿಂದ ಸಾಲದ ಮೇಲೆ ಎಲ್ಲವನ್ನೂ ಖರೀದಿಸುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದು, ತಮ್ಮ ಬಳಿ ಹಣವಿಲ್ಲ ಎಂದು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಬ್ಬ ಆಹಾರ ಮಾರಾಟಗಾರ ರಾಜಾ, "ಯಾವುದೇ ವ್ಯಾಪಾರವಿಲ್ಲ, ಗೋಟಾಬಯ್ಯ (Gotabaya) ಒಳ್ಳೆಯವನಲ್ಲ ಮತ್ತು ಅವನನ್ನು ಹೊರಹಾಕಬೇಕಾಗಿದೆ' ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಕಾರ್ಯಕಾರಿ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದಾರೆ. "ಸುಮಾರು 20 ವರ್ಷಗಳ ಕಾಲ ಪ್ರತಿಯೊಬ್ಬ ನಾಯಕರೂ ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ರದ್ದುಪಡಿಸುವುದಾಗಿ ಭರವಸೆ ನೀಡಿದರು ಆದರೆ ಈವರೆಗೂ ಅದನ್ನು ಬಲಪಡಿಸಿದ್ದಾರೆ ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ" ಎಂದು ಪ್ರೇಮದಾಸ ಮಂಗಳವಾರ ಸಂಸತ್ತಿನಲ್ಲಿ ಮಾಡಿದಿ ಪ್ರಖರ ಭಾಷಣದಲ್ಲಿ ಹೊಸ ಚುನಾವಣಾ ವ್ಯವಸ್ಥೆಯನ್ನು ಪರಿಚಯಿಸುವ ಅಗತ್ಯತೆಯ ಬಗ್ಗೆ ಸಂಸದರಿಗೆ ನೆನಪಿಸಿದರು. ಈ ನಡುವೆ ಹೊಸದಾಗಿ ನೇಮಕಗೊಂಡ ಹಣಕಾಸು ಸಚಿವ ಅಲಿ ಸಬ್ರಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
Sri Lanka Crisis ಆರ್ಥಿಕ ಬಿಕ್ಕಟ್ಟಿನಿಂದ ಲಂಕಾದಲ್ಲಿ ವಾಹನ ಉತ್ಪಾದನೆ ಸ್ಥಗಿತ!
ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ, ಇದು ದ್ವೀಪ ರಾಷ್ಟ್ರದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆರ್ಥಿಕತೆಯು ಪತನದ ಹಾದಿಯಲ್ಲಿದೆ.
Sri Lanka Economic Crisis ದೇಶ ದಿವಾಳಿಯಾದದ್ದು ಹೇಗೆ? ಆ ಒಂದು ಕುಟುಂಬ ರಾಜಕೀಯದ ಕಥೆ!
ಶ್ರೀಲಂಕಾ ವಿದೇಶಿ ವಿನಿಮಯ ಕೊರತೆಯನ್ನು (foreign exchange shortage) ಕೂಡ ಎದುರಿಸುತ್ತಿದೆ, ಇದರಿಂದಾಗಿ, ಆಹಾರ (Food) ಮತ್ತು ಇಂಧನವನ್ನು (Oil) ಆಮದು (Import) ಮಾಡಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ, ಇದು ದೇಶದಲ್ಲಿ ವಿದ್ಯುತ್ ಕಡಿತಕ್ಕೆ (Power Cut) ಕಾರಣವಾಗಿದೆ. ಅಗತ್ಯ ವಸ್ತುಗಳ ಕೊರತೆಯಿಂದಾಗಿ ಶ್ರೀಲಂಕಾ ಸ್ನೇಹಪರ ದೇಶಗಳಿಂದ ಸಹಾಯ ಪಡೆಯಲು ಮುಂದಾಗುವಂತೆ ಮಾಡಿದೆ. ಭಾನುವಾರ, ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕ ಕೋಪದ ನಡುವೆ 26 ಸದಸ್ಯರ ಶ್ರೀಲಂಕಾ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ಸಲ್ಲಿಸಿದರು. ಶ್ರೀಲಂಕಾದಲ್ಲಿ ಶನಿವಾರ ಸಂಜೆ 6 ಗಂಟೆಗೆ ವಿಧಿಸಲಾಗಿದ್ದ 36 ಗಂಟೆಗಳ ಸುದೀರ್ಘ ಕರ್ಫ್ಯೂ ಅನ್ನು ಸೋಮವಾರ ಬೆಳಿಗ್ಗೆ 6 ಗಂಟೆಗೆ ತೆಗೆದುಹಾಕಲಾಯಿತು ಆದರೆ ದೇಶವು ಇನ್ನೂ ತುರ್ತು ಪರಿಸ್ಥಿತಿಯಲ್ಲಿದೆ.