
ಲಂಡನ್(ಜ.21): ಪ್ರಧಾನಿ ಮೋದಿ ಕುರಿತು ಬಿಬಿಸಿ ಪ್ರಸಾರ ಮಾಡಿದ ಗುಜರಾತ್ ಗಲಭೆ ಸಾಕ್ಷ್ಯಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬ್ರಿಟನ್ ಸಂಸತ್ತಿನಲ್ಲಿ ಪಾಕಿಸ್ತಾನ ಮೂಲದ ಸಚಿವ ಈ ಸಾಕ್ಷ್ಯ ಚಿತ್ರ ಉಲ್ಲೇಖಿಸಿ ಮೋದಿ ವಿರುದ್ಧ ಟೀಕೆ ಮಾಡಿದ್ದರು. ಇದನ್ನು ಖಂಡಿಸಿದ ಬ್ರಿಟನ್ ಪ್ರಧಾನಿ ರಿಷ್ ಸುನಕ್, ಮೋದಿ ವಿರುದ್ಧ ಟೀಕೆ ಸಹಿಸಲ್ಲ ಎಂದಿದ್ದರು. ಇದಾದ ಬಳಿಕ ಭಾರತ ಈ ಸಾಕ್ಷ್ಯ ಚಿತ್ರ ಪ್ರಚಾರದ ಸರಕು ಎಂದು ತಿರುಗೇಟು ನೀಡಿದೆ. ಇದೀಗ ಬ್ರಿಟನ್ ಸಂಸತ್ತಿನಲ್ಲಿ ಸಚಿವನೊಬ್ಬ ಪ್ರಧಾನಿ ಮೋದಿ ಕುರಿತು ಮಾತನಾಡಿದ್ದಾರೆ. ಜಗತ್ತಿನ ಅತ್ಯಂತ ಪ್ರಬಲ ನಾಯಕ ನರೇಂದ್ರ ಮೋದಿ. ಮೋದಿ ಪ್ರಧಾನಿಯಾದ ಬಳಿಕ ಇದೀಗ ಭಾರತದ ಬಳಿ ಎಲ್ಲವೂ ಇದೆ. ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ಮುಂದಿನ 25 ವರ್ಷದಲ್ಲಿ ಜಗತ್ತಿನ 2ನೇ ಆರ್ಥಿಕತೆಯಾಗುವ ಗುರಿ, ಅತ್ಯಂತ ವೇಗದ ರೈಲು, ಜಿ20 ಅಧ್ಯಕ್ಷತೆ ಸೇರಿದಂತೆ ಸಾಲು ಸಾಲು ಸಾಧನೆಗಳಿವೆ. ಹೀಗಾಗಿ ಯುನೈಟೆಡ್ ಕಿಂಗ್‌ಡಮ್ ಭಾರತದ ಆಪ್ತ ಗೆಳೆಯ ಹಾಗೂ ಜೊತೆಗಾರನಾಬೇಕು ಎಂದಿದ್ದಾರೆ.
ಬ್ರಿಟನ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನದ ಮೂಲದ ನಾಯಕ ಟೀಕಿ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬ್ರಿಟನ್‌ನಲ್ಲಿ ಮೋದಿ ಪರವಾಗಿ ಆಂದೋಲನವೇ ಶುರುವಾಗಿದೆ. ರಿಷಿ ಸುನಕ್, ಮೋದಿ ಪರವಾಗಿ ಬ್ಯಾಟ್ ಬೀಸಿದ ಬೆನ್ನಲ್ಲೇ ಇದೀಗ ಯುಕೆ ಸಚಿವ ಲಾರ್ಡ್ ಕರಣ್ ಬಿಲಿಮೊರಿಯಾ, ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಮೋದಿ ವಿರುದ್ಧ ಸಾಕ್ಷ್ಯಚಿತ್ರಕ್ಕೆ ಬಿಬಿಸಿಗೆ ಪತ್ರ, ನಿವೃತ್ತಿ ಜಡ್ಜ್, ಸೇನಾಧಿಕಾರಿಗಳು ಸೇರಿ 302ರ ದಿಗ್ಗಜರ ಸಹಿ!
ಬ್ರಿಟನ್ ಸಂಸತ್ತಿನ ಚರ್ತೆಯಲ್ಲಿ ಲಾರ್ಡ್ ಕರಣ್ ಈ ಮಾತನ್ನು ಹೇಳಿದ್ದಾರೆ. ನಾವು ಭಾರತದ ಕೋಪಕ್ಕೆ ತುತ್ತಾಗುವುದು ಸೂಕ್ತವಲ್ಲ. ಭಾರತದ ಜೊತೆ ಆತ್ಮೀಯ ಸಂಬಂಧ ಬ್ರಿಟನ್‌ಗೆ ಹೆಚ್ಚು ಸೂಕ್ತ. ಯಾಕೆಂದರೆ ಸದ್ಯ ವಿಶ್ವದ ಪ್ರಬಲ ನಾಯಕ ಪ್ರಧಾನಿ ನರೇಂದ್ರ ಮೋದಿ. ಭಾರತದ ಬಳಿ ಎಲ್ಲವೂ ಇವೆ. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ, ವಿಶ್ವಭೂಪಟದಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ದೊತೆ ಆತ್ಮೀಯವಾಗಿದ್ದರೆ, ಇದರ ಉತ್ತಮ ಫಲಿತಾಂಶ ಬ್ರಿಟನ್‌ಗೆ ಆಗಲಿದೆ ಎಂದು ಲಾರ್ಡ್ ಕರಣ ಹೇಳಿದ್ದಾರೆ.
;
ಆರ್ಥಿಕತೆಯಲ್ಲಿ ಭಾರತ ಈಗಾಗಲೇ ಬ್ರಿಟನ್ ಹಿಂದಿಕ್ಕಿದೆ. ಇಷ್ಟೇ ವಿಶ್ವದ 5ನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇಷ್ಟೇ ಅಲ್ಲ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತ ಹಾಗೂ ಯುಕೆ ವಾಣಿಜ್ಯ ವ್ಯವಹಾರ ಉತ್ತಮವಾಗಿದೆ. ಸದ್ಯ ಯುಕೆಯ 12ನೇ ಜೊತೆಗಾರ ಭಾರತ. ಆದರೆ ಈ ಪ್ರಾಮುಖ್ಯತೆಯನ್ನು ಬದಲಿಸಿದರ ಯುಕೆಗೆ ಒಳಿತಾಗಲಿದೆ ಎಂದಿದ್ದಾರೆ.
ಬ್ರಿಟನ್ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್
ಭಾರತ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಿದೆ. ಹೀಗಾಗಿ ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತ ಯುವ ದೇಶ. ಕಳೆದ ವರ್ಷ ಭಾರತದ ಆರ್ಥಿಕ ಅಭಿವೃದ್ಧಿ ಶೇಕಡಾ 8.7. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಕ್ಷೇತ್ರ ಪ್ರತಿಯೊಂದು ವಿಚಾರದಲ್ಲಿ ಭಾರತ ಸ್ವಾವಲಂಬಿಯಾ , ಸಶಕ್ತವಾಗಿ ಹೆಜ್ಜೆ ಇಡುತ್ತಿದೆ. ಕೋವಿಡ್ ಸಮಯದಲ್ಲಿ ಲಸಿಕೆ ಅಭಿವೃದ್ಧಿ ಮಾಡಿ ದೇಶದ ಜನರಿಗೆ ಉಚಿತವಾಗಿ ನೀಡಲಾಗಿದೆ. ಇಷ್ಟೇ ಅಲ್ಲ ಸಮರ್ಥವಾಗಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದೆ. ಹೀಗಾಗಿ ಭಾರತದ ವಿರೋಧ ಕಟ್ಟಿಕೊಳ್ಳುವುದರಿಂದ ಭಾರತಕ್ಕೇನು ನಷ್ಟವಿಲ್ಲ ಎಂದು ಲಾರ್ಡ್ ಕರಣ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ