ಅತೀ ಹೆಚ್ಚು ಕೊರೋನಾ ಲಸಿಕೆ ಖರೀದಿಸಿದ ದೇಶ ಭಾರತ, ಅಧ್ಯಯನ ವರದಿ ಬಹಿರಂಗ!

By Suvarna NewsFirst Published Dec 4, 2020, 9:56 PM IST
Highlights

ಕೊರೋನಾ ವೈರಸ್‌ನಿಂದ ಜನರನ್ನು ಪಾರು ಮಾಡಲು ಲಸಿಕೆಯೊಂದೆ ಮಾರ್ಗ. ಹೀಗಾಗಿ ಎಲ್ಲಾ ದೇಶಗಳು ಲಸಿಕೆಗಾಗಿ ಕಾಯುತ್ತಿದೆ. ಇದರ ನಡುವೆ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಕೊರೋನಾ ಲಸಿಕೆ ಖರೀದಿಸಿದ ದೇಶ ಅನ್ನೋದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ನವದೆಹಲಿ(ಡಿ.04) ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿ ದೇಶ ತೆಗೆದುಕೊಳ್ಳವು ನಿರ್ಧಾರ ಭಾರಿ ಮಹತ್ವ ಪಡೆಯುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಅತೀ ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆಯೂ ಇದೆ. ಈ ಸಂದರ್ಭದಲ್ಲಿ ಭಾರತ ಕೊರೋನಾ ಲಸಿಕೆ ಕುರಿತು ಗಂಭೀರವಾಗಿ ಚಿಂತಿಸಿದೆ. ಭಾರತದಲ್ಲಿ ಕೊರೋನಾ ಲಸಿಕೆ ಅಭಿವೃದ್ಧಿ ಇತರ ದೇಶಗಳಿಂದ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದರ ನಡುವೆ ಭಾರತ ಮತ್ತೊಂದು ಸಾಧನೆ ಮಾಡಿದೆ. ವಿಶ್ವದಲ್ಲಿ ಭಾರತ ಗರಿಷ್ಠ ಕೊರೋನಾ ಲಸಿಕೆ ಖರೀದಿಸಿದ ದೇಶ ಎಂಬುದು ಅಧ್ಯಯನದಿಂದ ಬಯಲಾಗಿದೆ.

1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ: ಸರ್ವ ಪಕ್ಷ ಸಭೆಯಲ್ಲಿ ನಿರ್ಧಾರ!.

ಗ್ಲೋಬಲ್ ಅನಾಲಿಸ್ ಪ್ರಕಾರ ಭಾರತ 1.6 ಬಿಲಿಯನ್ ಡೋಸೇಜ್ ಭಾರತ ಖರೀದಿಸಿದೆ. ಇದು ಸರಿ ಸುಮಾರು 800 ಮಿಲಿಯನ್ ಜನಸಂಖ್ಯೆಗೆ ಸಾಕಾಗಲಿದೆ. ಅಂದರೆ ದೇಶದೆ ಶೇಕಡಾ 60 ರಷ್ಟು ಮಂದಿಗೆ ಭಾರತ ಸದ್ಯ ಖರೀದಿಸಿರುವ ಕೊರೋನಾ ಲಸಿಕೆ ಸಾಕಾಗಲಿದೆ ಎಂದು ಗ್ಲೋಬಲ್ ಅನಾಲಿಸಿಸ್ ವರದಿಯಲ್ಲಿ ಹೇಳಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಆಸ್ಟ್ರಾಝೆಂಕಾ ಕೊರೋನಾ ಲಸಿಕೆಯನ್ನು ಭಾರತ 500 ಮಿಲಿಯನ್ ಡೋಸೇಜ್ ಖರೀದಿಸಿದೆ. ಅಮೆರಿಕದಿಂದ 1 ಮಿಲಿಯನ್ ನೋವಾಕ್ಸ್  ಡೋಸೇಜ್ ಹಾಗೂ ರಷ್ಯಾದಿಂದ 100 ಮಿಲಿಯನ್ ಸ್ಪಟ್‌ನಿಕ್ ವಿ ಡೋಸೇಜ್ ಖರೀದಿಸಿದೆ.  ಲಸಿಕೆ ಖರೀದಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಯೂರೋಪ್ ಯುನಿಯನ್ 2ನೇ ಸ್ಥಾನದಲ್ಲಿದೆ. 

ಕೊರೋನಾದಿಂದ ತಲ್ಲಣಗೊಂಡಿರುವ ಅಮೆರಿಕ ಇದುವರೆಗೆ 1 ಬಿಲಿಯನ್ ಡೋಸೇಜ್ ಮಾತ್ರ ಖರೀದಿಸಿದೆ.  ಇನ್ನು ಭಾರತದಲ್ಲಿ 2021ರ ಜುಲೈ ಆಗಸ್ಟ್ ವೇಳೆಗೆ 25 ರಿಂದ 30 ಕೋಟಿ ಜನರಿಗೆ ಸಾಧ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

click me!