‘ಆಪರೇಷನ್‌ ದೇವಿಶಕ್ತಿ’: ಅಪ್ಘಾನ್‌ನಿಂದ ಭಾರತೀಯರನ್ನು ಕರೆತರುವ ಸಾಹಸಕ್ಕೆ ಮರುನಾಮಕರಣ!

Published : Aug 25, 2021, 08:36 AM ISTUpdated : Aug 25, 2021, 09:02 AM IST
‘ಆಪರೇಷನ್‌ ದೇವಿಶಕ್ತಿ’: ಅಪ್ಘಾನ್‌ನಿಂದ ಭಾರತೀಯರನ್ನು ಕರೆತರುವ ಸಾಹಸಕ್ಕೆ ಮರುನಾಮಕರಣ!

ಸಾರಾಂಶ

* ಆಫ್ಘನ್‌ ರಕ್ಷಣಾ ಕಾರ‍್ಯ ‘ಆಪರೇಷನ್‌ ದೇವಿಶಕ್ತಿ’ * ಭಾರತೀಯರನ್ನು ಕರೆತರುವ ಸಾಹಸಕ್ಕೆ ಹೆಸರು ನಾಮಕರಣ * ಸರ್ಕಾರದಿಂದ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ * ಹಿಂದೂ, ಸಿಖ್ಖರನ್ನು ಕರೆತರುವ ಕಾರ‍್ಯ

ನವದೆಹಲಿ(ಆ.25): ತಾಲಿಬಾನ್‌ ಉಗ್ರರ ಕೈವಶವಾದ ಬಳಿಕ ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು ಹಾಗೂ ಆಫ್ಘನ್‌ನ ಹಿಂದೂ ಮತ್ತು ಸಿಖ್‌ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಗೆ ‘ಆಪರೇಷನ್‌ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ. ಆಗಸ್ಟ್‌ 16ರಿಂದ ಮಂಗಳವಾರದವರೆಗೆ ಭಾರತೀಯರು ಸೇರಿದಂತೆ ಸಂಕಷ್ಟದಲ್ಲಿದ್ದ 800 ಜನರನ್ನು ಭಾರತಕ್ಕೆ ಈ ಕಾರಾರ‍ಯಚರಣೆ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

‘ಆಪರೇಷನ್‌ ದೇವಿ ಶಕ್ತಿ’ ನಾಮಕರಣದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

‘ಆಪರೇಷನ್‌ ದೇವಿ ಶಕ್ತಿ ಮುಂದುವರಿದಿದೆ. 78 ಮಂದಿ ಕಾಬೂಲ್‌ನಿಂದ ದುಶಾಂಬೆ ಮೂಲಕ ದೆಹಲಿಗೆ ಮಂಗಳವಾರ ಆಗಮಿಸಿದ್ದಾರೆ. ಭಾರತೀಯ ವಾಯುಸೇನೆ, ಏರ್‌ ಇಂಡಿಯಾಗೆ ಸಲ್ಯೂಟ್‌’ ಎಂದು ಜೈಶಂಕರ್‌ ಹೇಳಿದ್ದಾರೆ.

ಈ ಹಿಂದೆ 2015ರಲ್ಲಿ ಆಂತರಿಕ ಯುದ್ಧಪೀಡಿತ ಯೆಮೆನ್‌ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಗೆ ‘ಆಪರೇಷನ್‌ ರಾಹತ್‌’ ಎಂದು ಭಾರತ ಹೆಸರಿಟ್ಟಿತ್ತು. ಆಗ 4,640 ಭಾರತೀಯರು ಹಾಗೂ 900 ವಿದೇಶೀಯರನ್ನು ಭಾರತ ರಕ್ಷಿಸಿ ಸ್ವದೇಶಕ್ಕೆ ಕರೆತಂದಿತ್ತು. ಅಂದಿನ ವಿದೇಶಾಂಗ ಖಾತೆ ರಾಜ್ಯ ಸಚಿವ ಜ| .ಕೆ. ಸಿಂಗ್‌ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

‘ದೇವಿ ಶಕ್ತಿ’ ಹೆಸರೇಕೆ?

ದುರ್ಗೆಯು ರಾಕ್ಷಸರಿಂದ ಅಮಾಯಕ ಜನರನ್ನು ರಕ್ಷಿಸುತ್ತಾಳೆ. ಹೀಗಾಗಿಯೇ ತಾಲಿಬಾನ್‌ ರಕ್ಕಸರಿಂದ ಅಮಾಯಕರನ್ನು ಪಾರು ಮಾಡುವ ಈ ಕಾರಾರ‍ಯಚರಣೆಗೆ ‘ಆಪರೇಷನ್‌ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
ಸುಂಟರಗಾಳಿಯ ಹೊಡೆತಕ್ಕೆ ತಲೆಕೆಳಗಾಗಿ ಬಿದ್ದ ಸ್ಟ್ಯಾಚು ಆಫ್ ಲಿಬರ್ಟಿ: ವೀಡಿಯೋ