ಕಾಬೂಲ್‌ನಿಂದ ಉಕ್ರೇನ್ ವಿಮಾನ ಹೈಜಾಕ್, 2 ದಿನ ಬಳಿಕ ಸತ್ಯ ಬಿಚ್ಚಿಟ್ಟ ಸಚಿವ!

By Suvarna News  |  First Published Aug 24, 2021, 2:30 PM IST

* ಅಪ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನ್

* ಏರ್‌ಲಿಫ್ಟ್‌ ಮಾಡಲು ಬಂದಿದ್ದ ಉಕ್ರೇನ್ ವಿಮಾನ ಹೈಜಾಕ್ ಎಂದ ಸಚಿವ

* ಇಂಧನ ತುಂಬಿಸಿ ವಿಮಾನ ಉಕ್ರೇನ್‌ಗೆವ ತೆರಳಿದೆ ಎಂದ ಇರಾನ್ ಸಚಿವ


ಕಾಬೂಲ್(ಆ.24): ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ, ಇತರ ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೀಗ ಈ ಏರ್‌ಲಿಫ್ಟ್‌ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಾಬೂಲ್‌ನಿಂದ ಉಕ್ರೇನ್‌ನ ಜನರನ್ನು ಏರ್‌ಲಿಫ್ಟ್‌ ಮಾಡಲು ಬಂದ ವಿಮಾನವನ್ನು ಅಪರಿಚಿತ ಶಸ್ತ್ರಸಜ್ಜಿತ ಮಂದಿ ಅಪಹರಿಸಿದ್ದಾರೆ. ಎರಡು ದಿನಗಳ ನಂತರ ಅಂದರೆ ಮಂಗಳವಾರದಂದು ಈ ಘಟನೆಯ ಮಾಹಿತಿ ಬೆಳಕಿಗೆ ಬಂದಿದೆ. 

ಉಕ್ರೇನ್‌ನ ವಿದೇಶಾಂಗ ಸಚಿವ ಯೆವ್ಗೇನಿ ಯೆನಿನ್ ಮಂಗಳವಾರ ಈ ಬಗ್ಗೆ ಮಾತನಾಡುತ್ತಾ"ಕಳೆದ ಭಾನುವಾರ ನಮ್ಮ ವಿಮಾನವನ್ನು ಕೆಲ ಜನರು ಹೈಜಾಕ್ ಮಾಡಿದ್ದಾರೆ. ಉಕ್ರೇನಿಯನ್ನರನ್ನು ಏರ್ ಲಿಫ್ಟ್ ಮಾಡುವ ಬದಲು, ವಿಮಾನದಲ್ಲಿದ್ದ ಕೆಲವರು ಅದನ್ನು ಇರಾನ್ ಗೆ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.

Latest Videos

undefined

ಇರಾನ್‌ನಿಂದ ಸಿಕ್ತು ಈ ಉತ್ತರ

ಹೀಗಿದ್ದರೂ, ಉಕ್ರೇನ್‌ನ ಸಚಿವರ ಹೇಳಿಕೆ ಬಳಿಕ, ಇರಾನ್‌ನ ಮಂತ್ರಿ ಅಬ್ಬಾಸ್ ಅಸ್ಲಾನಿ ಈ ವಿಮಾನ ಈಶಾನ್ಯ ಇರಾನ್‌ನ ಮಶಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದಿದ್ದಾರೆ. ಆದರೆ ಅಲ್ಲಿಂದ ಇಂಧನ ತುಂಬಿಸಿ, ಅವರು ಉಕ್ರೇನ್ಗೆ ತೆರಳಿದ್ದಾರೆ. ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಇಳಿಯುವಿಕೆಯ ಮಾಹಿತಿಯೂ ಇದೆ. ಇರಾನ್‌ನ ಈ ಹೇಳಿಕೆಯ ನಂತರ, ವಿಮಾನವನ್ನು ಅಪಹರಿಸಿದ ಘಟನೆ ಭಾರೀ ಅನುಮಾನ ಮೂಡಿಸಿದೆ.

100 ಉಕ್ರೇನಿಯನ್ ನಾಗರಿಕರು ಅಫ್ಘಾನಿಸ್ತಾನವನ್ನು ತೊರೆಯಲು ಕಾಯುತ್ತಿದ್ದಾರೆ

ಭಾನುವಾರ, 31 ಉಕ್ರೇನಿಯನ್ ಪ್ರಜೆಗಳು ಸೇರಿದಂತೆ 83 ಜನರನ್ನು ಹೊತ್ತ ಮಿಲಿಟರಿ ವಿಮಾನ ಅಫ್ಘಾನಿಸ್ತಾನದಿಂದ ಕೀವ್‌ಗೆ ತೆರಳಿದೆ ಎಂಬುವುದು ಉಲ್ಲೇಖನೀಯ. ಉಕ್ರೇನ್‌ನ ಅಧ್ಯಕ್ಷೀಯ ಕಚೇರಿಯ ಪ್ರಕಾರ, ವಿಮಾನದಲ್ಲಿ 12 ಉಕ್ರೇನಿಯನ್ ಸೇನಾ ಸಿಬ್ಬಂದಿ ಕೂಡ ಇದ್ದರು. ಅಫ್ಘಾನಿಸ್ತಾನದಲ್ಲಿ ಇನ್ನೂ 100 ಉಕ್ರೇನಿಯನ್ ನಾಗರಿಕರು ಸಿಲುಕಿದ್ದಾರೆ ಎಂದಿದ್ದಾರೆ. 

click me!