ಗಾಯಗೊಂಡರೆ ತಲೆಗೆ ಗುಂಡಿಕ್ಕಿ ಆದರೆ ತಾಲಿಬಾನ್‌ಗೆ ಶರಣಾಗಲ್ಲ;ಸಿಬ್ಬಂದಿಗೆ ಅಮರುಲ್ಲಾ ಸಲೇಹ್ ಸೂಚನೆ!

By Suvarna NewsFirst Published Sep 5, 2021, 6:47 PM IST
Highlights
  • ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ರಣಕಹಳೆ ಊದಿದ ಧೀರ ಅಮರುಲ್ಲಾ ಸಲೇಹ್
  • ತಾಲಿಬಾನ್ ಅಟ್ಟಹಾಸ ಹಾಗೂ  ಹಂಗಾಮಿ ಅಧ್ಯಕ್ಷನ ಹೋರಾಟ ಹಾದಿ ಬಹಿರಂಗ
  • ದೇಶ ತೊರೆಯಲ್ಲ, ತಾಲಿಬಾನ್‌ಗೆ ಎಂದಿಗೂ ಶರಣಗಾಲ್ಲ, ಪರಿಸ್ಥಿತಿ ಎದುರಾದರೆ ಗುಂಡಿಕ್ಕಿ
  • ಭದ್ರತಾ ಸಿಬ್ಬಂಧಿಗಳಿಗೆ ಅಮರುಲ್ಲಾ ಸಲೇಹ್ ಸೂಚನೆ,

ಪಂಜಶೀರ್(ಸೆ.04): ಆಫ್ಘಾನಿಸ್ತಾನದಲ್ಲಿ ಅಮಾಯಕರು, ಸೈನಿಕರು, ಪೊಲೀಸರು ಒಬ್ಬೊಬ್ಬರ ಕತೆ ಕರುಣಾಜನಕವಾಗಿದೆ. ದೇಶ ಸಂಪೂರ್ಣವಾಗಿ ತಾಲಿಬಾನ್‌ಗೆ ಶರಣವಾಗಿದೆ. ಶರಣಾಗದಿದ್ದರೆ ತಾಲಿಬಾನ್ ಕ್ರೌರ್ಯಕ್ಕೆ ಬಲಿಯಾಗಬೇಕು. ಆದರೆ ಇದರ ನಡುವೆ ಮಾಜಿ ಉಪಾಧ್ಯಕ್ಷ,  ಹಂಗಾಮಿ ಅಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಹೋರಾಟ ನಿಜಕ್ಕೂ ಮೆಚ್ಚಲೇಬೇಕು. ತಾಲಿಬಾನ್ ವಿರುದ್ಧ ರಣಕಹಳೆ ಮೊಳಗಿಸಿರುವ ಅಮರುಲ್ಲಾ ಸಲೇಹ್, ನಾನು ಹೋಗುವ ದಾರಿಯಲ್ಲಿ ಗಾಯಗೊಂಡು ನನ್ನನ್ನು ತಾಲಿಬಾನ್ ಉಗ್ರರು ಎಳೆದೊಯ್ದು ಶರಣಾಗುವಂತ ಮಾಡಲು ಅವಕಾಶ ನೀಡಬಾರದು. ತಾಲಿಬಾನ್ ಉಗ್ರರ ಮೊದಲು ತಲೆಗೆ ಎರಡು ಗುಂಡಿಕ್ಕಿ ಸಾಯಿಸಿ, ಆದರೆ  ಎಂದಿಗೂ ತಾಲಿಬಾನ್‌ಗಳಿಗೆ ಶರಣಾಗುವುದಿಲ್ಲ ಎಂದು ಭದ್ರತಾ ಸಿಬ್ಬಂದಿಗಳಿಗೆ ಸಲೇಹ್ ಸೂಚನೆ ನೀಡಿದ್ದಾರೆ.

ಆಫ್ಘಾನಿಸ್ತಾನ ತೊರೆದಿಲ್ಲ, ಪಾಕಿಸ್ತಾನ, ತಾಲಿಬಾನ್ ವಿರುದ್ಧ ಗುಡುಗಿದ ಅಮರುಲ್ಲಾ ಸಲೇಹ್

ಯುಕೆಯ ಖ್ಯಾತ ಡೈಲಿ ಮೇಲ್ ಪತ್ರಿಕೆಗೆ ಕಾಬೂಲ್ ಮೇಲೆ ತಾಲಿಬಾನ್ ದಾಳಿ ಹಾಗೂ ಅಮರುಲ್ಲಾ ಸಲೇಹ್ ನಡೆಸಿದ ಪ್ರಯತ್ನದ ಕುರಿತು ಬರೆದುಕೊಂಡಿದ್ದಾರೆ. 48ರ ಹರೆಯದ ಅಮರುಲ್ಲಾ ಸಲೇಹ್ ಕನಿಷ್ಠ ಕಾಬೂಲ್‌ನಿಂದ ತಾಲಿಬಾನ್ ಹೊರಗಿಡಲು ನಡೆಸಿದ ಪ್ರಯತ್ನ, ತಾಲಿಬಾನ್ ಕೈಗೆ ಸಿಗದೆ ಪಂಜಶೀರ್ ಕಣಿವೆ ಸೇರಿ ಉಗ್ರರ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿದ ರೀತಿಯನ್ನು ಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕಾಬೂಲ್ ಕೈವಶ ಮಾಡಲು ರಾಜಧಾನಿಯತ್ತ ನುಗ್ಗಿಬಂದ ತಾಲಿಬಾನ್ ಉಗ್ರರ ವಿರುದ್ಧ ಹೋರಾಡುವ ಬದಲು ಸರ್ಕಾರ, ಅಧಿಕಾರಿಗಳು, ಪೊಲೀಸ್, ಸೇನೆ ಅಡಗಿಕುಳಿತುಕೊಂಡಿತು. ಹೀಗಾಗಿ ಯಾವುದೇ ತೊಡಕಿಲ್ಲದೆ ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡಿದರು ಎಂದು ಅಮರುಲ್ಲಾ ಸಲೇಹ್ ಹೇಳಿದ್ದಾರೆ. ಉಗ್ರರು ವಿರುದ್ಧ ಹೋರಾಟ ಮಾಡದೇ ದೇಶ ತೊರೆದವರು ಆಫ್ಘಾನಿಸ್ತಾನಕ್ಕೆ ಮಾಡಿದ ದ್ರೋಹ ಎಂದು ಅಧ್ಯಕ್ಷ ಅಶ್ರಫ್ ಘನಿ ವಿರುದ್ಧವೂ ಹರಿಹಾಯ್ದಿದ್ದಾರೆ.

300 ತಾಲಿಬಾನ್‌ ಉಗ್ರರ ಹತ್ಯೆ?, ವಿರೋಧಿ ಬಣದಿಂದ ಉಗ್ರರ ಮಾರಣಹೋಮ!

ತಾಲಿಬಾನ್ ಉಗ್ರರು ಕಾಬೂಲ್‌ಗೆ ಆಗಮಿಸುತ್ತದ್ದಂತೆ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ, ಆತಂಕರಿಕ ಸಚಿವ, ಅವರ ಕಾರ್ಯಾಲಯಕ್ಕೆ ಕರೆ ಮಾಡಿದೆ. ತಕ್ಷಣ ತುರ್ತು ಪರಿಹಾರ ಹಾಗೂ ತಾಲಿಬಾನ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕರೆ ಮಾಡಿದ್ದೆ. ಆದರೆ ಯಾರೂ ಕೈಗೆ ಸಿಗಲಿಲ್ಲ. ತಕ್ಷಣಕ್ಕೆ ಸೇನೆ ನಿಯೋಜಿಸಲು ಮಾಡಿದ ನನ್ನ ಎಲ್ಲಾ ಪ್ರಯತ್ನಗಳು ಸಾಕಾರಗೊಳ್ಳಲಿಲ್ಲ. ಯಾರೂ ನನ್ನ ಕರೆ ಸ್ವೀಕರಿಸಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳುವ ಸಲುವಾಗಿ ಅಡಗಿಕುಳಿತುಕೊಂಡರು.

ಕಾಬೂಲ್ ಪೊಲೀಸ್ ಮುಖ್ಯಸ್ಥರಿಗೆ ಕರೆ ಮಾಡಿದಾಗ ಸ್ಪಂದನೆ ಸಿಕ್ಕಿತು. ತಾಲಿಬಾನ್ ಉಗ್ರರ ವಿರುದ್ಧ ಹೋರಾಟಡಲು ಪೊಲೀಸ್ ಮುಖ್ಯಸ್ಥರು ಸಜ್ಜಾಗಿದ್ದರು. ಆದರೆ ಇತರ ಪೊಲೀಸರು ಸ್ಥಳದಲ್ಲೇ ಇರಲಿಲ್ಲ. ಹೇಗಾದರು ಮಾಡಿ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಯನ್ನು ತನಗೆ ನೀಡಲು ಸಾಧ್ಯವೇ ಎಂದು ನನ್ನಲ್ಲಿ ಕೇಳಿದ್ದರು. ನನ್ನ ಎಲ್ಲಾ ಪ್ರಯತ್ನಗಳು ವಿಫಲವಾಯಿತು ಎಂದು ಸಲೇಹ್ ಹೇಳಿಕೊಂಡಿದ್ದಾರೆ.

ಉಗ್ರರಿಗೂ ಖಾತೆ ಹಂಚಿಕೆ ಬಿಕ್ಕಟ್ಟು: ತಾಲಿಬಾನ್‌-ಹಕ್ಕಾನಿ ಬಣಗಳ ಮಧ್ಯೆ ಪೈಪೋಟಿ!

ಅಧ್ಯಕ್ಷರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರನ ನೆರವು ಕೇಳಿದ್ದೆ. ಆದರೆ ಸಿಗಲಿಲ್ಲ. ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರನಿಗೆ ಸಂದೇಶ ಕಳುಹಿಸಿದೆ. ತಕ್ಷಣ ಬಂದ ಪ್ರತಿಕ್ರಿಯೆ ನನ್ನ ಪ್ರಯತ್ನಕ್ಕೆ ಸಿಕ್ಕಿದ ಮೊದಲ ರಿಯಾಕ್ಷನ್ ಆಗಿತ್ತು. ನಿಮ್ಮ ಜೊತೆ ನಾನಿದ್ದೇನೆ. ನೀವು ಏನು ನಿರ್ಧಾರ ತೆಗೆದುಕೊಳ್ಳುತ್ತೀರಿ ಅದನ್ನು ಅನುಸರಿಸುತ್ತೇನೆ ಎಂದು ಭದ್ರತಾ ಸಲಹೆಗಾರನ ಉತ್ತರವಾಗಿತ್ತು. 

ಕಾಬೂಲ್ ಉಳಿಸಲು ಯಾವುದೇ ದಾರಿ ಕಾಣಲಿಲ್ಲ. ಕೊನೆಯದಾಗಿ ಪಂಜಶೀರ್ ಹೋರಾಟಗಾರ, ನನ್ನ ಮಾರ್ಗದರ್ಶಿ ಮಸೂದ್ ಪುತ್ರ ಅಹಮ್ಮದ್ ಮಸೂದ್‌ಗೆ ಕರೆ ಮಾಡಿದಾಗ ಅಹಮ್ಮದ್ ಮಸೂದ್ ಕೂಡ ಕಾಬೂಲ್‌ನಲ್ಲಿರುವುದಾಗಿ ಹೇಳಿದ. ಇಷ್ಟೇ ಅಲ್ಲ ನಮ್ಮ ಕಮಾಂಡೋ ಪಡೆ ಸೇರಿಕೊಳ್ಳುವಂತೆ ಅಹಮ್ಮದ್ ಸೂಚಿಸಿದ.

ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

ತಕ್ಷಣವವೇ ಕಚೇರಿಯಿಂದ ಮನಗೆ ತೆರಳಿದೆ. ಮನೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳ ಫೋಟೋವನ್ನು ನಾಶ ಮಾಡಿದೆ. ಕೆಲ ವಸ್ತುಗಳನ್ನು ತೆಗೆದುಕೊಂಡೆ. ಕಂಪ್ಯೂಟರ್ ಹಾಗೂ ಖುರಾನ್ ಗ್ರಂಥವನ್ನು ನನ್ನ ಭದ್ರತಾ ಸಿಬ್ಬಂದಿಗೆ ನೀಡಿ ಒಂದು ಮಾತು ಹೇಳಿದೆ. ನಾವು ಪಂಜಶೀರ್‌ಗೆ ಹೊರಟ್ಟಿದ್ದೇವೆ. ನಾವು ತಾಲಿಬಾನ್ ವಿರುದ್ಧ ಹೋರಾಡುತ್ತೇವೆ. ಪಂಜಶೀರ್ ದಾರಿ, ದಾಟಬೇಕಿರುವ ಪ್ರಾಂತ್ಯಗಳೆಲ್ಲಾ ತಾಲಿಬಾನ್ ಕೈವಶವಾಗಿದೆ. ದಾರಿಯಲ್ಲಿ ನಮ್ಮ ಮೇಲೆ ದಾಳಿ ಮಾಡಿದರೆ ನಾನು ಶರಣಾಗುವುದಿಲ್ಲ. ಒಂದು ವೇಳೆ ಗುಂಡಿನ ದಾಳಿಯಲ್ಲಿ ಗಾಯಗೊಂಡು ನನ್ನನ್ನು ಶರಣಾಗುವಂತೆ ಮಾಡಿದರೆ ನನ್ನ ತಲೆಗೆ 2 ಗುಂಡಿಕ್ಕಿ ಸಾಯಿಸಿಬಿಡು. ಏನೇ ಆದರೂ ನಾನು ತಾಲಿಬಾನ್ ಉಗ್ರರಿಗೆ ಶರಣಾಗುವುದಿಲ್ಲ ಎಂದು ಭದ್ರತಾ ಸಿಬ್ಬಂದಿಗೆ ಅಮರುಲ್ಲಾ ಸಲೇಹ್ ಸೂಚನೆ ನೀಡಿ ಪಂಜಶೀರ್ ಕಣಿವೆಯತ್ತ ಪ್ರಯಾಣ ಬೆಳೆಸಿದರು.

ಬೆಂಗಾವಲು ವಾಹನ, ದಾಳಿ ವಿರೋಧಿ ಶಸ್ತ್ರಾಸ್ತ್ರ ವಾಹನ, ಕೆಲ ಕಮಾಂಡೋಗಳ ಜೊತೆ ಪಂಜಶೀರ್‌ಗೆ ನನ್ನ ಯಾತ್ರೆ ಆರಂಭಗೊಂಡಿತು. ದಾರಿ ಮಧ್ಯೆ 2 ಕಡೆ ತಾಲಿಬಾನ್ ಉಗ್ರರು ಆಕ್ರಮಣ ಮಾಡಿದರು. ನಾವು ಯುದ್ಧಕ್ಕೂ ಸಜ್ಜಾಗಿ ಬಂದಿರುವ ಮಾಹಿತಿ ಅವರಿಗಿರಲಿಲ್ಲ. ಆದರೆ ಸರ್ಕಾರದ ಯುದ್ಧ ಶಸ್ತ್ರಾಸ್ತ್ರ ವಾಹನ ನೋಡಿದ ತಾಲಿಬಾನ್‌ಗಳು ಏಕಾಏಕಿ ಗುಂಡಿನ ದಾಳಿ ಆರಂಭಿಸಿದರು. ಆದರೆ ನಮ್ಮ ಕಮಾಂಡೋಗಳು 2 ದಾಳಿಯನ್ನು ವಿಫಲಗೊಳಿಸಿ ಸಾಗಿದೆವು ಎಂದು ಸಲೇಹ್ ಡೈಲಿ ಮೇಲ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಲಿಬಾನಿಯರಿಂದ ರಕ್ಷಿಸಿಕೊಳ್ಳಲು ಮರುಭೂಮಿಯಲ್ಲಿ ಗರ್ಭಿಣಿ, ವೃದ್ಧರ ರೇಸ್!

ಪಂಜಶೀರ್ ತಲುಪಿದ ಬೆನ್ನಲ್ಲೇ ಸ್ಥಳೀಯರು ಮಸೀದಿಯೊಂದರಲ್ಲಿ ಸೇರಿದ್ದಾರೆ. ನಿಮ್ಮ ಜೊತೆ ಮಾತನಾಡಲು ಉತ್ಸುಕರಾಗಿದ್ದಾರೆ ಎಂಬ ಸಂದೇಶ ಬಂತು. ಹೀಗಾಗಿ ಮಸೀದಿಗೆ ತೆರಳಿದಾಗಿ ಕಣ್ಣು ಒದ್ದೆಯಾಗಿತ್ತು. ಸ್ಥಳೀಯರು ಗುಲಾಬಿ ಹೂವು ನೀಡಿ ನನ್ನ ಸ್ವಾಗತಿಸಿದರು. ನಿಮ್ಮ ಜೊತೆ ನಾವಿದ್ದೇವೆ, ಉಗ್ರರ ವಿರುದ್ಧ ಹೋರಾಟ ಇಲ್ಲಿಂದಲೆ ಆರಂಭಿಸೋಣ ಎಂದು ಧೈರ್ಯ ತುಂಬಿದರು.

ಮರುದಿನ ಅಹಮ್ಮದ್ ಮಸೂದ್ ಹೆಲಿಕಾಪ್ಟರ್ ಮೂಲಕ ಪಂಜಶೀರ್‌ಗೆ ಆಗಮಿಸಿದರು. ಅಂದು ರಾತ್ರಿ ಅಹಮ್ಮದ್ ಮಸೂದ್ ಜೊತೆ ಮೊದಲ ಮಹತ್ವದ ಮಾತುಕತೆ ನಡೆಸಿದೆ. ನಾವು ಅತ್ಯಂತ ಸಂಕಷ್ಟದ ಕ್ಲಿಷ್ಟ ಸಂದರ್ಭ ಎದುರಿಸುತ್ತಿದ್ದೇವೆ. ತಾಲಿಬಾನ್ ವಿರುದ್ಧ ಹೋರಾಟ ಸುಲಭವಲ್ಲ. ಕಾರಣ ಈಗಾಗಲೇ ಆಫ್ಘಾನಿಸ್ತಾನ ಅವರ ಕೈವಶವಾಗಿದೆ. ಆದರೆ ಅವರ ಮುಂದೆ ಮಂಡಿಯೂರಲು ತಯಾರಿಲ್ಲ. ಕೊನೆ ಉಸಿರಿನವರೆಗೆ ಹೋರಾಡುತ್ತೇನೆ ಎಂದು ಅಮರುಲ್ಲಾ ಸಲೇಹ್ ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾರೆ.

click me!