
ವಾಷಿಂಗ್ಟನ್: ಭಾನುವಾರ ತಾವು ಭಾಗಿಯಾಗಿದ್ದ ಭೋಜನ ಕೂಟದಲ್ಲಿ ಗುಂಡಿನ ದಾಳಿ ನಡೆದದ್ದಕ್ಕೆ ಸಂಬಂಧಿಸಿದ್ದಂತೆ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾನು ಅತ್ಯಾ೧ಚಾರಿ ಅಲ್ಲ, ಶಿಶುಕಾಮಿಯೂ ಅಲ್ಲ’ ಎಂದು ಕೂಗಾಡಿದ್ದಾರೆ.
ದಾಳಿಕೋರ ಕೋಲ್ ಥಾಮಸ್ ಅಲೆನ್ ಬರೆದಿಟ್ಟಿದ್ದ ಪತ್ರದಲ್ಲಿ, ‘ಒಬ್ಬ ಅತ್ಯಾ೧ಚಾರಿ, ಶಿಶುಕಾಮಿ, ದ್ರೋಹಿಯು ಅಮೆರಿಕವನ್ನು ಆಳುವುದು ನನಗಿಷ್ಟವಿಲ್ಲ’ ಎಂದು ಉಲ್ಲೇಖಿಸಲಾಗಿತ್ತು. ಅದನ್ನು ಪತ್ರಕರ್ತೆಯೊಬ್ಬರು ಓದುತ್ತಿದ್ದಂತೆ ಕುಪಿತರಾದ ಟ್ರಂಪ್, ‘ನೀವಿದನ್ನು ಓದುತ್ತೀರಿ ಎಂದು ನನಗೆ ಗೊತ್ತಿತ್ತು. ಯಾಕೆಂದರೆ ನೀವೆಲ್ಲಾ ಭಯಾನಕ ಜನ. ಅವನು ಹಾಗೆ ಬರೆದಿರಬಹುದು. ಆದರೆ ನಾನು ಯಾರ ಮೇಲೂ ಅತ್ಯಾ೧ಚಾರಿ ಮಾಡಿಲ್ಲ. ನಾನು ಶಿಶುಕಾಮಿಯೂ ಅಲ್ಲ’ ಎಂದಿದ್ದಾರೆ. ಈ ಮೂಲಕ, ತಮಗೆ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜತೆ ನಂಟಿತ್ತು ಎಂಬುದನ್ನು ಮತ್ತೊಮ್ಮೆ ಅಲ್ಲಗಳೆಯುವ ಯತ್ನ ಮಾಡಿದ್ದಾರೆ.
ಮುಂದುವರೆದು ದಾಳಿ ಬಗ್ಗೆ ಮಾತನಾಡುತ್ತಾ, ‘ಆಗ ನನಗೆ ಭಯವಾಗಿರಲಿಲ್ಲ. ಬದಲಿಗೆ, ಅಲ್ಲೇನಾಗುತ್ತಿದೆ ಎಂದು ನೋಡುವ ಬಯಕೆಯಿತ್ತು. ನನ್ನನ್ನು ಸುತ್ತುವರೆದ ಭದ್ರತಾ ಸಿಬ್ಬಂದಿಯ ಬಳಿಯೂ ಹಾಗೇ ಹೇಳಿದ್ದೆ’ ಎಂದು ಟ್ರಂಪ್ ಹೇಳಿದ್ದಾರೆ.
ಭಾನುವಾರ ಶ್ವೇತಭವನದಲ್ಲಿ ನಡೆದ ಗುಂಡಿನ ದಾಳಿ ಆರೋಪಿ ಕೋಲ್ ಥಾಮಸ್ ಅಲೆನ್ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಹತ್ಯೆಗೆ ಯತ್ನ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.
ಆರೋಪಿ ಸೋಮವಾರ ಮೊದಲ ಬಾರಿ ಫೆಡರಲ್ ಕೋರ್ಟ್ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾನೆ. ತನಿಖಾಧಿಕಾರಿಗಳು ಆತ ಬರೆದಿದ್ದಾನೆ ಎನ್ನಲಾದ ಪತ್ರವನ್ನು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ