ಹಾಂಕಾಂಗ್‌ ಹೋರಾಟ ಹತ್ತಿಕ್ಕಲು ಮೊದಲ ಬಾರಿ ಚೀನಾ ಸೇನೆ ರವಾನೆ!

By Web DeskFirst Published Nov 17, 2019, 4:49 PM IST
Highlights

ಹಾಂಕಾಂಗ್‌ ಹೋರಾಟ ಹತ್ತಿಕ್ಕಲು ಮೊದಲ ಬಾರಿ ಚೀನಾ ಸೇನೆ ರವಾನೆ| ದೇಶಭ್ರಷ್ಟರನ್ನು ಚೀನಾಕ್ಕೆ ಹಸ್ತಾಂತರಿಸುವ ಹಾಂಕಾಂಗ್‌ ಸರ್ಕಾರದ ಪ್ರಸ್ತಾಪಿತ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ

ಬೀಜಿಂಗ್‌[ನ.17]: 5-6 ತಿಂಗಳ ಹಿಂದೆ ಹಾಂಕಾಂಗ್‌ನಲ್ಲಿ ಆರಂಭವಾದ ಪ್ರಜಾಪ್ರಭುತ್ವದ ಪರವಾದ ಅತಿದೊಡ್ಡ ಹೋರಾಟವನ್ನು ಹತ್ತಿಕ್ಕಲು ಇದೇ ಮೊದಲ ಬಾರಿ ಚೀನಾ ತನ್ನ ಪಡೆಯನ್ನು ನಿಯೋಜಿಸಿದೆ.

ಚೀನಾ ವಿರುದ್ಧ ಪುಟ್ಟ ರಾಷ್ಟ್ರದ ಕ್ರಾಂತಿ; ಏನಿದು ಸ್ವಾತಂತ್ರ್ಯ ಹೋರಾಟ?

ದೇಶಭ್ರಷ್ಟರನ್ನು ಚೀನಾಕ್ಕೆ ಹಸ್ತಾಂತರಿಸುವ ಹಾಂಕಾಂಗ್‌ ಸರ್ಕಾರದ ಪ್ರಸ್ತಾಪಿತ ಮಸೂದೆ ವಿರೋಧಿಸಿ ಕಳೆದ 5ಕ್ಕಿಂತ ಹೆಚ್ಚು ತಿಂಗಳಿಂದ ರಸ್ತೆಗಳನ್ನು ತಡೆದು ಭಾರೀ ದೊಡ್ಡ ಪ್ರಮಾಣದ ಹೋರಾಟ ನಡೆಸುತ್ತಿರುವ ಪ್ರತಿಭಟನಾಕಾರರನ್ನು ತೆರವುಗೊಳಿಸಲು ವಿಶ್ವದ ಅತಿದೊಡ್ಡ ಸೇನಾ ಪಡೆಗಳಲ್ಲಿ ಒಂದಾಗಿರುವ ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಸೇನೆ ಕಾರ್ಯಪ್ರವೃತ್ತವಾಗಿದೆ.

ಹಾಂಕಾಂಗ್‌ ಬೀದಿಗಳಲ್ಲಿ ಹೋರಾಟಗಾರರ ಪ್ರವಾಹ!

ಈ ಬಗ್ಗೆ ಪ್ರತಿಕ್ರಿಯಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ‘ಹಾಂಕಾಂಗ್‌ನಲ್ಲಿ ಎದುರಾಗಿರುವ ಹಿಂಸಾಚಾರಕ್ಕೆ ತಡೆ ಹೇರಿ, ರಾಜಕೀಯ ಅಸ್ಥಿರತೆ ತೊಡೆದು ಹಾಕುವುದು ನಮ್ಮ ಜವಾಬ್ದಾರಿ. ಇದೇ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದ್ದಾರೆ.

click me!