ಹಿಂದೂಜಾ ಕುಟುಂಬಕ್ಕೆ ಸಿಬ್ಬಂದಿಗಿಂತ, ಸಾಕು ನಾಯಿಗಳೇ ಮುಖ್ಯ; ಸರ್ಕಾರಿ ವಕೀಲರಿಂದ ಆರೋಪಗಳ ಸುರಿಮಳೆ

By Mahmad Rafik  |  First Published Jun 18, 2024, 9:35 PM IST

ಇವರ ಬಳಿ ಖರ್ಚು ಮಾಡಲು ಸ್ವಿಸ್ ಹಣವಿಲ್ಲ. ಕಾರ್ಮಿಕರು ಅನುಮತಿ ಇರದೇ ಮನೆಗೆ ಹೋಗಲು ಬಿಡುತ್ತಿರಲಿಲ್ಲ.  ಕಾರ್ಮಿಕರಿಂದ ಅವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು ಎಂದು ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದಾರೆ.


ಲಂಡನ್: ಬ್ರಿಟನ್ ಶ್ರೀಮಂತ ಹಿಂದೂಜಾ ಕುಟುಂಬ (Hinduja Family) ಸಂಕಷ್ಟದಲ್ಲಿದ್ದು, ಸ್ವಿಸ್ ನ್ಯಾಯಾಲಯದಲ್ಲಿ (Swiss Criminal Court) ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ಹಿಂದೂಜಾ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಶ್ರೀಮಂತ ಕುಟುಂಬ ತಮ್ಮ ಸೇವಕರಗಿಂತ ಸಾಕು ನಾಯಿಗಳಿಗಾಗಿ ಹೆಚ್ಚು ಖರ್ಚು ಮಾಡುತ್ತೆ ಎಂದು ವಾದ ಮಂಡಿಸಿದರು. ಹಿಂದೂಜಾ ಕುಟುಂಬ ಮಹಿಳಾ ಸರ್ವೆಂಟ್‌ಗೆ ವಾರಕ್ಕೆ ಏಳು ದಿನ ಕೆಲಸ ಮಾಡಿಸಿಕೊಂಡಿದೆ. ಪ್ರತಿದಿನ 18 ಗಂಟೆ ಕೆಲಸ ಮಾಡಿದ್ದಕ್ಕೆ ಕೇವಲ 7 ಸ್ವಿಸ್‌ ಫ್ರಾಂಕ್‌ (ಅಂದಾಜು 650 ರೂಪಾಯಿ) ಪಾವತಿಸಿದೆ. ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಾಲು ಸಾಲು ಆರೋಪಗಳನ್ನು ಸರ್ಕಾರಿ ವಕೀಲರು ಮಾಡಿದ್ದಾರೆ. ಹಿಂದೂಜಾ ಕುಟುಂಬ ಸಾಕು ನಾಯಿಗಳಿಗೆ ವಾರ್ಷಿಕವಾಗಿ 8,584 ಸ್ವಿಸ್ ಖರ್ಚು ಮಾಡ್ತಾರೆ.

ನೌಕರರ ಮೇಲೆ ಶೋಷಣೆ ನಡೆಸಿದ್ದು, ಕಳ್ಳತನದ ಆರೋಪಗಳನ್ನು ಮಾಡಿದ್ದಾರೆ. ಉದ್ಯೋಗಿಗಳಿಗೆ ನಿಗದಿತ ಕೆಲಸ ಅವಧಿ ಫಿಕ್ಸ್ ಮಾಡಿಲ್ಲ. ಸಿಬ್ಬಂದಿಗೂ ವಾರದ ರಜೆ ಸಹ ನೀಡಿಲ್ಲ. ಉದ್ಯೋಗಿಗಳ ಪಾಸ್‌ಪೋರ್ಟ್‌ ಕಿತ್ತುಕೊಳ್ಳಲಾಗಿದೆ. ಸೇವಕರಿಗೆ ಭಾರತೀಯ ಕರೆನ್ಸಿಯಲ್ಲಿ ಸಂಬಳ ಪಾವತಿಸಲಾಗಿದೆ. ಇವರ ಬಳಿ ಖರ್ಚು ಮಾಡಲು ಸ್ವಿಸ್ ಹಣವಿಲ್ಲ. ಕಾರ್ಮಿಕರು ಅನುಮತಿ ಇರದೇ ಮನೆಗೆ ಹೋಗಲು ಬಿಡುತ್ತಿರಲಿಲ್ಲ.  ಕಾರ್ಮಿಕರಿಂದ ಅವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು ಎಂದು ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದಾರೆ.

Tap to resize

Latest Videos

undefined

ಅಜಯ್ ಹಿಂದುಜಾ ಮತ್ತು ಪತ್ನಿ ನಮ್ರತಾ ಅವರನ್ನು ಜೈಲಿಗೆ ಕಳುಹಿಸಬೇಕು. ಹಿಂದೂಜಾ ಕುಟುಂಬ ನ್ಯಾಯಾಲಯದ ವೆಚ್ಚಕ್ಕಾಗಿ 1 ಮಿಲಿಯನ್ ಸ್ವಿಸ್ ಫ್ರಾಂಕ್‌ ಮತ್ತು ಉದ್ಯೋಗಿಗಳ ನಿಧಿಗೆ 3.5 ಮಿಲಿಯನ್ ಫ್ರಾಂಕ್‌ ನೀಡಬೇಕು ಎಂದು ವಾದಿಸಿದ್ದಾರೆ.

ಹಿಂದುಜಾ ಕುಟುಂಬದ ಹೇಳಿಕೆ

ಹಿಂದೂಜಾ ಕುಟುಂಬ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ನಮ್ಮ ಕುಟುಂಬದ ಜೊತೆ ಕೆಲಸ ಮಾಡುವ ಕೆಲವರು ತಮ್ಮನ್ನು ಚೆನ್ನಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ವೇತನ ಸೇರಿದಂತೆ ಎಲ್ಲಾ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ನಮ್ಮ ಸಿಬ್ಬಂದಿಗೆ ಊಟ ಸಹಿತ ವಸತಿಯನ್ನು ನೀಡಲಾಗಿತ್ತು. ಆದ್ರೆ ಸರ್ಕಾರಿ ವಕೀಲರು ಈ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ ಎಂದು ಹಿಂದೂಜಾ ಕುಟುಂಬ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಇಲ್ಲಿ ಅತಿಥಿಗಳ ಜೊತೆ ಹೆಂಡ್ತಿಯನ್ನು ಮಲಗಿಸಿ, ಗಂಡ ಹೊರಗೆ ಮಲಗ್ತಾರೆ!

ಬಡವರಿಗೆ ಸಹಾಯ ಮಾಡಲು, ಶ್ರೀಮಂತರನ್ನು ಶಿಕ್ಷಿಸೋದು ಅಲ್ಲ

18 ಗಂಟಗಳ ಕಾಲ ಕೆಲಸ ಮಾಡಿಸಲಾಗಿದೆ ಎಂದು ಉತ್ಪ್ರೇಕ್ಷೆ ಮಾಡಲಾಗುತ್ತಿದೆ. ಯಾರಾದರೂ ಮಕ್ಕಳೊಂದಿಗೆ ಕುಳಿತು ಸಿನಿಮಾ ನೋಡುತ್ತಿದ್ದರೆ ಅದನ್ನು ಕೆಲಸ ಎನ್ನಲಾಗದು. ನ್ಯಾಯಾಲಯದ ನಿರ್ಧಾರ ನ್ಯಾಯದ ಆಧಾರದ ಮೇಲೆ ಇರಬೇಕೇ ಹೊರತು, ಬಡವರಿಗೆ ಸಹಾಯ ಮಾಡಲು ಶ್ರೀಮಂತರನ್ನು ಶಿಕ್ಷಿಸುವುದು ಎಂದರ್ಥ ಅಲ್ಲ ಎಂದು ಹಿಂದೂಜಾ ಕುಟುಂಬದ ಪರ ವಕೀಲರು ಹೇಳಿದ್ದಾರೆ.

ಫೋರ್ಬ್ಸ್ ಪ್ರಕಾರ, ಹಿಂದುಜಾ ಸಮೂಹದ ನಿವ್ವಳ ಮೌಲ್ಯ 20 ಶತಕೋಟಿ ಡಾಲರ್ (ಸುಮಾರು 17 ಲಕ್ಷ ಕೋಟಿ ರೂ.) ಆಗಿದೆ. ಹಿಂದೂಜಾ  ಕುಟುಂಬ ಅನೇಕ ವ್ಯಾಪರಗಳನ್ನು ಹೊಂದಿದೆ. ಹಿಂದೂಜಾ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಹಿಂದೂಜಾ ಕುಟುಂಬವು ಬ್ಯಾಂಕಿಂಗ್, ವಾಹನ, ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ಮಾಧ್ಯಮ ಕಂಪನಿಗಳಲ್ಲಿ ಪ್ರಮುಖ ಪಾಲನ್ನು ಹೊಂದಿದೆ.

ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು

click me!