ಸಹಾಯ ಬರುತ್ತಿದೆ, ಹೋರಾಟ ಬಿಡಬೇಡಿ: ಇರಾನಿಯರಿಗೆ ಟ್ರಂಪ್‌

Kannadaprabha News   | Kannada Prabha
Published : Jan 14, 2026, 06:54 AM IST
Donald Trump

ಸಾರಾಂಶ

ಇರಾನಿ ಸರ್ವಾಧಿಕಾರಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ದಂಗೆ ಎದ್ದಿರುವ ಜನತೆಯನ್ನು ಬೆಂಬಲಿಸಿ, ಇರಾನ್‌ ಮೇಲೆ ದಾಳಿಯ ಸುಳಿವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಂಗಳವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ

ವಾಷಿಂಗ್ಟನ್‌: ಇರಾನಿ ಸರ್ವಾಧಿಕಾರಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ದಂಗೆ ಎದ್ದಿರುವ ಜನತೆಯನ್ನು ಬೆಂಬಲಿಸಿ, ಇರಾನ್‌ ಮೇಲೆ ದಾಳಿಯ ಸುಳಿವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಂಗಳವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ‘ಪ್ರತಿಭಟನಾಕಾರರ ದಮನ ನಿಲ್ಲುವವರೆಗೂ ಇರಾನ್‌ ಆಡಳಿತದ ಜತೆ ನಾನು ಮಾತುಕತೆ ಮಾಡಲ್ಲ. ದಮನಕಾರಿ ನೀತಿ ಅನುಸರಿಸುವವರು ದೊಡ್ಡ ಬೆಲೆ ತೆರಬೇಕಾಗುತ್ತದೆ. ನಿಮಗೆ ಸಹಾಯ ತಲುಪುತ್ತಿದೆ’ ಎಂದಿದ್ದಾರೆ.

ಅದೇನು ಸಹಾಯ ಎಂಬುದನ್ನು ಅವರು ನೇರವಾಗಿ ಹೇಳಿಲ್ಲ. ಆದರೆ ಅವರ ಮಾತಿನ ಅರ್ಥ ನೋಡಿದರೆ ಇರಾನ್‌ ಮೇಲೆ ಅಮೆರಿಕ ದಾಳಿ ಮಾಡಬಹುದೆ ಎಂಬ ಅನುಮಾನ ಎದುರಾಗಿದೆ.

ಟ್ರೂತ್‌ ಸೋಷಿಯಲ್‌ನಲ್ಲಿ ಪೋಸ್ಟ್‌

ತಮ್ಮದೇ ಆದ ಸಾಮಾಜಿಕ ಮಾಧ್ಯಮ ಟ್ರೂತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಇರಾನಿನ ದೇಶಭಕ್ತರೇ, ಪ್ರತಿಭಟನೆ ಮುಂದುವರಿಸಿ. ನಿಮ್ಮ ದೇಶದ ಸಂಸ್ಥೆಗಳನ್ನು ನಿಮ್ಮದಾಗಿಸಿಕೊಳ್ಳಿ!!! (ವಶಪಡಿಸಿಕೊಳ್ಳಿ). ಕೊಲೆಗಾರರು ಮತ್ತು ದುರುಪಯೋಗ ಮಾಡುವವರ ಹೆಸರುಗಳನ್ನು ಬರೆದಿಟ್ಟುಕೊಳ್ಳಿ. ಅವರು ದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ರತಿಭಟನಾಕಾರರ ಅರ್ಥಹೀನ ಹತ್ಯೆ ನಿಲ್ಲುವವರೆಗೂ ನಾನು ಇರಾನಿನ ಅಧಿಕಾರಿಗಳೊಂದಿಗಿನ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದೇನೆ. ಸಹಾಯವು ತನ್ನ ಹಾದಿಯಲ್ಲಿದೆ’ ಎಂದಿದ್ದಾರೆ.

ಸೋಮವಾರದವರೆಗೆ ದಾಳಿಯ ಮಾತನಾಡುತ್ತಿದ್ದ ಟ್ರಂಪ್ ಅವರ ಜತೆ ಮಾತುಕತೆ ನಡೆಸುವ ಆಫರ್‌ ಅನ್ನು ಇರಾನ್‌ ನೀಡಿತ್ತು. ಇದರ ಬೆನ್ನಲ್ಲೇ ಸೋಮವಾರ ರಾತ್ರಿ ಶ್ವೇತಭವನ ವಕ್ತಾರೆ ಕ್ಯಾರೋಲಿನ್ ಲೀವಿಟ್‌ ಅವರು, ‘ಇರಾನ್ ಸರ್ಕಾರ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಬೇರೆ. ನಮ್ಮ ಸರ್ಕಾರವು ಖಾಸಗಿಯಾಗಿ ಸ್ವೀಕರಿಸುತ್ತಿರುವ ಸಂದೇಶಗಳೇ ಬೇರೆ. ಎರಡೂ ಭಿನ್ನವಾಗಿವೆ. ನಮ್ಮ ಅಧ್ಯಕ್ಷರು (ಟ್ರಂಪ್) ಆ ಸಂದೇಶಗಳನ್ನು ಅನ್ವೇಷಿಸುವಲ್ಲಿ ಆಸಕ್ತಿ ಹೊಂದಿದ್ದಾರೆ’ ಎಂದಿದ್ದರು. ಈ ಮೂಲಕ ಮಾತುಕತೆಯ ಇರಾದೆಯನ್ನು ಅಧ್ಯಕ್ಷ ಹೊಂದಿದ್ದಾರೆ ಎನ್ನುವ ಮೂಲಕ ದಾಳಿ ಸದ್ಯಕ್ಕಿಲ್ಲ ಎಂಬ ಸುಳಿವು ನೀಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಟ್ರಂಪ್‌ ತಮ್ಮ ನಿಲುವು ಬದಲಿಸಿದ್ದು. ‘ದಂಗೆಕೋರರ ದಮನ ನಿಲ್ಲುವವರೆಗೂ ಇರಾನ್‌ ಆಡಳಿತದ ಜತೆ ನಾನು ಮಾತುಕತೆ ಮಾಡಲ್ಲ. ಎಲ್ಲ ಸಭೆ ರದ್ದು ಮಾಡಿದ್ದೇನೆ. ನಿಮಗೆ ಸಹಾಯ ಮಾಡುವೆ’ ಎಂದಿದ್ದಾರೆ. ಇದು ಯುದ್ಧಭೀತಿ ಸೃಷ್ಟಿಸುವಂತೆ ಮಾಡಿದೆ.

ಇರಾನಲ್ಲಿ 2000 ಜನರು ಸಾವು

ಟೆಹ್ರಾನ್‌: ಇರಾನ್‌ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇದರೊಂದಿಗೆ ಮಾಧ್ಯಮಗಳ ವರದಿಯನ್ನು ಮೊದಲ ಬಾರಿ ಇರಾನ್‌ ಖಚಿತಪಡಿಸಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ರಾನ್ಸ್‌ : 350 ಟ್ರಾಕ್ಟರ್‌ ಜತೆ ಸಂಸತ್ತಿಗೆ ರೈತರ ಮುತ್ತಿಗೆ
ಶಕ್ಸ್‌ಗಂ ಕಣಿವೆ ನಮ್ಮದು : ಚೀನಾ ಪುನರುಚ್ಚಾರ