(ಜ.1): ಮನೆ ಇಲ್ಲದೇ ಬೀದಿಯಲ್ಲಿ ಮಲಗಿದ್ದ ನಿರ್ಗತಿಕನೋರ್ವನನ್ನು ನಾಯಿ ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುವಂತಿದೆ. ನಾಯಿಯೊಂದು ಅನಾಥನಿಗೆ ನೀ ಅನಾಥನಲ್ಲ, ನಿನಗೆ ನನ್ನಿದ್ದೇನೆ ಎಂದು ಹೇಳುವಂತಿದೆ ಈ ವಿಡಿಯೋ. ನಾಯಿ ಮನುಷ್ಯನ ಬೆಸ್ಟ್ ಫ್ರೆಂಡ್ ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಈ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಈ ವಿಡಿಯೋವನ್ನು ಡಿಸೆಂಬರ್ 30 ರಂದು Buitengebieden ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಕೇವಲ ಒಂದು ದಿನದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಮನೆ ಇಲ್ಲದ ನಿರ್ಗತಿಕನೋರ್ವ ಬೀದಿಯ ರಸ್ತೆ ಬದಿಯಲ್ಲಿ ಕುಳಿತಿರುತ್ತಾನೆ. ಎತ್ತಲೋ ನೋಡುತ್ತಾ ಕುಳಿತಿದ್ದ ಆತನ ಬಳಿ ಬರುವ ನಾಯಿ ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತದೆ. ನಂತರ ಅದರದ್ದೇ ಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಎರಡು ಕೈಗಳನ್ನು ಆತನ ಮೇಲಿಟ್ಟು ಆತನನ್ನು ಮುದ್ದಾಡಲು ನೋಡುತ್ತದೆ. ಅಲ್ಲದೇ ಅವನನ್ನು ಸಮಾಧಾನ ಪಡಿಸುತ್ತಿರುವಂತೆ ಕಾಣುತ್ತದೆ. ನಾಯಿಗೆ ಅದೇ ರೀತಿ ಸ್ಪಂದಿಸಿದ ಮನುಷ್ಯ ಅದಕ್ಕೆ ಪ್ರತಿಯಾಗಿ ತಾನು ಕೂಡ ನಾಯಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ.
This dog approaches a homeless man and seems to know what he needs.. 🥺 pic.twitter.com/uGWL351fCR
— Buitengebieden (@buitengebieden_)
undefined
Viral News: ಜೀವದ ಹಂಗು ತೊರೆದು, ರೈಲ್ವೇ ಹಳಿ ಮೇಲೆ ಮಲಗಿದ್ದ ಶ್ವಾನಗಳನ್ನು ರಕ್ಷಿಸಿದ ಯುವಕ!
ಈ ನಾಯಿ ಮನೆಯಿಲ್ಲದ ಮನುಷ್ಯನ ಬಳಿ ಬಂದು ಅವನಿಗೆ ಏನು ಬೇಕು ಎಂಬುದನ್ನು ತೋರಿಸುತ್ತದೆ ಎಂಬುದಾಗಿ ಈ ವಿಡಿಯೋಗೆ ಶಿರ್ಷಿಕೆ ನೀಡಲಾಗಿದೆ.
ಈ ಮುದ್ದಾದ ವಿಡಿಯೋ ನೆಟ್ಟಿಗರನ್ನು ಸೆಳೆಯುತ್ತಿದ್ದು, ಎಲ್ಲರೂ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಾಸ್ತವವಾಗಿ ಈ ವಿಡಿಯೋವನ್ನು ಎರಡು ಕಾರಣಕ್ಕಾಗಿ ನೋಡಬೇಕು. ಮೊದಲನೇಯದಾಗಿ ನಿರ್ಗತಿಕರು ಕೂಡ ಮನುಷ್ಯರೇ ಅವರಿಗೂ ಪ್ರೀತಿ ಹಾಗೂ ಕರುಣೆ ಬೇಕು ಎಂಬುದು ಹಾಗೂ ಎರಡನೇಯದಾಗಿ ಪ್ರಾಣಿಗಳು ಕೂಡ ಒಂದು ಅದ್ಭುತ ಹಾಗೂ ಅವುಗಳು ಯಾವುದೇ ನಿರೀಕ್ಷೆಗಳಿಲ್ಲದೇ ಪ್ರೀತಿಸುತ್ತವೆ ಎಂದು ವೀಕ್ಷಕರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನಾಯಿಗಳ ಪ್ರೀತಿಗೆ ನಾವು ಅರ್ಹರಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Woman Bites: ನಾಯಿ ವಿಚಾರವಾಗಿ ಜಗಳ... ಶ್ವಾನದ ಮಾಲಕಿಗೆ ಕಚ್ಚಿದ್ದು ನಾಯಿ ಅಲ್ಲ ಮಹಿಳೆ...!
ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ.
ಇತ್ತೀಚೆಗೆ ಜರ್ಮನಿಯಲ್ಲಿ ನಾಯಿ ವಿಚಾರವಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಮಹಿಳೆಯೊಬ್ಬರು ನಾಯಿಯ ಮಾಲಕಿಗೆ ಕಚ್ಚಿದ ವಿಚಿತ್ರ ಘಟನೆ ನಡೆದಿತ್ತು. ಪೂರ್ವ ಜರ್ಮನಿ (eastern Germany) ಯಲ್ಲಿ ಸಾಕು ನಾಯಿಗೆ ಶಿಸ್ತು ಕಲಿಸುವ ಬಗ್ಗೆ ಇಬ್ಬರು ಮಹಿಳೆಯ ಮಧ್ಯೆ ಕಲಹ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಗೆ ಹೊಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ 51 ವರ್ಷದ ಮಹಿಳೆಯೊಬ್ಬಳು ಆಕೆಗೆ ಕಚ್ಚಿದ್ದಾಳೆ. ಮೊಣಕಾಲಿನ ಕೆಳಗೆ ಕಾಲಿನ ಹಿಂಭಾಗ ಮಹಿಳೆ ಕಚ್ಚಿದ್ದು ಪರಿಣಾಮ 27 ವರ್ಷದ ಮಹಿಳೆ ಇದರಿಂದ ತೀವ್ರ ನೋವಿಗೊಳಗಾಗಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.