ಇಸ್ರೇಲ್‌ನಲ್ಲಿ ಮ್ಯೂಸಿಕ್ ಹಬ್ಬವೊಂದರಲ್ಲಿ ಭಾಗಿಯಾಗಿದ್ದ ಯುವತಿಯನ್ನು ಕೂಡ ಹಮಾಸ್ ಉಗ್ರರು ಅಪಹರಿಸಿ ಬೈಕ್‌ನಲ್ಲಿ ಕೂರಿಸಿಕೊಂಡು ಗಾಜಾಪಟ್ಟಿಯತ್ತ ಎಳೆದುಕೊಂಡು ಹೋಗುತ್ತಿರುವ ವೀಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಜೆರುಸಲೇಂ: ಇಸ್ರೇಲ್‌ನಲ್ಲಿ ಮ್ಯೂಸಿಕ್ ಹಬ್ಬವೊಂದರಲ್ಲಿ ಭಾಗಿಯಾಗಿದ್ದ ಯುವತಿಯನ್ನು ಕೂಡ ಹಮಾಸ್ ಉಗ್ರರು ಅಪಹರಿಸಿ ಬೈಕ್‌ನಲ್ಲಿ ಕೂರಿಸಿಕೊಂಡು ಗಾಜಾಪಟ್ಟಿಯತ್ತ ಎಳೆದುಕೊಂಡು ಹೋಗುತ್ತಿರುವ ವೀಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ನಿನ್ನೆ ಇಸ್ರೇಲ್ ಮೇಲೆ ಏಕಾಏಕಿ ರಾಕೆಟ್ ದಾಳಿ ನಡೆಸಿದ ನಂತರ ಭೂಮಿ ಆಗಸ ಸಮುದ್ರ ಮಾರ್ಗಗಳ ಮೂಲಕ ಇಸ್ರೇಲ್ ಪ್ರವೇಶಿಸಿದ್ದ ಹಮಾಸ್ ಉಗ್ರರು ಇಸ್ರೇಲ್‌ನ ಹಲವರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದಾರೆ.
ಈ ವೀಡಿಯೋವನ್ನು @HenMazzig ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅಪಹರಣಕ್ಕಾದ ಯುವತಿಯನ್ನು ನೋವಾ ಎಂದು ಉಲ್ಲೇಖಿಸಿದ್ದಾರೆ. ದಕ್ಷಿಣ ಇಸ್ರೇಲ್‌ನ ಫೀಸ್ ಮ್ಯೂಸಿಕ್ ಹಬ್ಬದಲ್ಲಿ ನೋವಾ ಭಾಗವಹಿಸಿದ್ದ ವೇಳೆ ಹಮಾಸ್ ಉಗ್ರರು ಆಕೆಯನ್ನು ಕಿಡ್ನಾಪ್ ಮಾಡಿ ಇಸ್ರೇಲ್‌ನಿಂದ ಗಾಜಾಕ್ಕೆ ಎಳೆದುಕೊಂಡು ಹೋಗಿದ್ದಾರೆ. ಈಗ ಆಕೆಯನ್ನು ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿರಿಸಿದ್ದಾರೆ. ಅವಳು ನಿಮ್ಮ ಮಗಳು, ಸಹೋದರಿ, ಗೆಳತಿಯೂ ಆಗಿರಬಹುದು ಎಂದು ಬರೆದು ವೀಡಿಯೋ ಪೋಸ್ಟ್ ಮಾಲಾಗಿದೆ.
ಹಮಾಸ್ ಉಗ್ರರಿದ್ದ ಬಹುಮಹಡಿ ಕಟ್ಟಡ ಹೊಡೆದುರುಳಿಸಿದ ಇಸ್ರೇಲ್ ಸೇನೆ: ವೀಡಿಯೋ ವೈರಲ್
ಈ ಪೋಸ್ಟನ್ನು ಈ ಇಸ್ರೇಲ್‌ನ ಅಧಿಕೃತ ಟ್ವಿಟ್ಟರ್ ಖಾತೆಯೂ ರೀಪೋಸ್ಟ್ ಮಾಡಿದ್ದು, ಹಮಾಸ್= ಐಸಿಸ್, ನೋವಾಳನ್ನು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿದೆ. ನಮ್ಮ ಕುಟುಂಬವನ್ನು ವಾಪಸ್ ಕರೆತನ್ನಿ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಿದೆ. ಇಸ್ರೇಲ್ ಶೇರ್ ಮಾಡಿರುವ ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಓರ್ವ ಬೈಕ್ ಚಾಲನೆ ಮಾಡುತ್ತಿದ್ದಾರೆ . ಯುವತಿ ನೋವಾಳನ್ನು ಮಧ್ಯದಲ್ಲಿ ಕುಳ್ಳಿರಿಸಿಕೊಂಡು ಆಕೆಯ ಹಿಂದೆ ಮತ್ತೊಬ್ಬ ಕುಳಿತುಕೊಂಡು ಹೋಗುತ್ತಿದ್ದು, ಯುವತಿ ಕಾಪಾಡುವಂತೆ ಬೊಬ್ಬಿಡುತ್ತಿದ್ದಾಳೆ. ಇದೇ ವೀಡಿಯೋದಲ್ಲಿ ಇನ್ನಿಬ್ಬರು ಯುವಕರನ್ನು ಕೂಡ ಹಮಾಸ್ ಉಗ್ರರು (Terrorist) ಎಳೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ.
ವೀಡಿಯೋ ನೋಡಿದ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರಿಗೆ ನೈತಿಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇಸ್ರೇಲ್‌ಗಾಗಿ ಪ್ರಾರ್ಥಿಸುವಂತೆ ಅನೇಕರು ಮನವಿ ಮಾಡಿದ್ದಾರೆ. ಮಹಿಳೆ ಮಕ್ಕಳ ಮೇಲೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ (Israel) ಕೂಡ ಪ್ರತಿದಾಳಿ ನಡೆಸಿದ್ದು, ಈ ಯುದ್ಧದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಜನ ಮಡಿದಿದ್ದಾರೆ. ನಿನ್ನೆ ಅತ್ಯಂತ ಯೋಜಿತ ರೀತಿಯಲ್ಲಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಗೆ ‘ಆಪರೇಷನ್ ಅಲ್ ಅಕ್ಸಾ ಸ್ಟಾರ್ಮ್’ ಎಂಬ ಹೆಸರು ನೀಡಿದ್ದಾರೆ. ಬೆಳಗ್ಗೆ 6.30ರಿಂದಲೇ 7000ಕ್ಕೂ ಹೆಚ್ಚು ರಾಕೆಟ್‌ಗಳನ್ನು ತಮ್ಮ ವಶದಲ್ಲಿರುವ ಗಾಜಾದಿಂದ ಇಸ್ರೇಲ್‌ನತ್ತ ಹಾರಿಸಿದ ಹಮಾಸ್ ಉಗ್ರರು, ಗಡಿಯಲ್ಲಿ ಇಸ್ರೇಲ್ ನಿರ್ಮಿಸಿದ್ದ ಬೇಲಿಯನ್ನು ಕಿತ್ತೆಸೆದಿದ್ದಾರೆ. ಪ್ಯಾರಾಗ್ಲೈಡಿಂಗ್ ಮಾಡಿಕೊಂಡು ವಾಯುಮಾರ್ಗದಲ್ಲಿ ಇಸ್ರೇಲ್ ಪ್ರವೇಶಿಸಿದ್ದಾರೆ. ಮತ್ತೊಂದೆಡೆ ಸಮುದ್ರ ಮಾರ್ಗದ ಮೂಲಕವೂ ಇಸ್ರೇಲ್‌ಗೆ ನುಗ್ಗಿದ್ದಾರೆ. ಸದ್ಯ 7 ಸ್ಥಳಗಳಲ್ಲಿ ಉಗ್ರರು- ಇಸ್ರೇಲ್ ಯೋಧರ ನಡುವೆ ಕಾಳಗ ನಡೆಯುತ್ತಿದೆ.
ಇಸ್ರೇಲ್- ಪ್ಯಾಲೆಸ್ತೀನ್ ಉಗ್ರರ ನಡುವೆ ಘೋರ ಸಂಘರ್ಷಗಳು ನಡೆದಿವೆಯಾದರೂ ಇಷ್ಟೊಂದು ತೀವ್ರತೆಯ ಉಗ್ರ ದಾಳಿಯನ್ನು ಇಸ್ರೇಲ್ ಇತ್ತೀಚಿನ ವರ್ಷಗಳಲ್ಲಿ ಕಂಡೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಮಾಸ್ ಉಗ್ರರು ನಡೆಸಿದ ರಾಕೆಟ್ ದಾಳಿಯ ಪರಿಣಾಮ ಹಲವು ನಗರಗಳಲ್ಲಿ ಕಟ್ಟಡಗಳು, ವಾಹನಗಳಿಗೆ ಬೆಂಕಿ ಬಿದ್ದು ಭಾರೀ ಪ್ರಮಾಣದಲ್ಲಿ ಹೊಗೆ ಮೇಲೆದ್ದ ದೃಶ್ಯಗಳು ಭೀಕರತೆಯನ್ನು ಸಾರಿ ಹೇಳಿವೆ.
ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು
ಹಮಾಸ್ ಉಗ್ರರು ಇಸ್ರೇಲ್ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿರುವ, ಜನರತ್ತ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡುತ್ತಿರುವ, ಇಸ್ರೇಲ್ ಸೇನೆಯ ವಾಹನ ಕದ್ದು ಓಡಾಡುತ್ತಿರುವ, ಇಸ್ರೇಲ್ ಯೋಧರನ್ನು ಥಳಿಸಿ ಅವರನ್ನು ಒತ್ತೆ ಹಿಡಿದು ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಸ್ರೇಲ್‌ಗೆ ಉಗ್ರರು ನುಗ್ಗಿರುವ ವಿಷಯ ತಿಳಿದು ಪ್ಯಾಲೆಸ್ತೀನಿ ನಾಗರಿಕರು ರಸ್ತೆಗೆ ಇಳಿದು ಸಂಭ್ರಮಾಚರಣೆ ಮಾಡಿದ್ದಾರೆ.
ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು
Hamas = ISIS
Noa is held hostage by Hamas.
She could be your daughter, sister, friend. https://t.co/6AWitwoWko