ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ

Published : Mar 24, 2026, 12:00 PM IST
Dogs Escape a Moving Truck

ಸಾರಾಂಶ

ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ, 7 ನಾಯಿಗಳು ದಾರಿ ಮೂಲಕ ನಡೆದುಕೊಂಡು ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಪುಟ್ಟ ಕಾರ್ಗಿ ತಳಿಯ ನಾಯಿ ಇತರ ನಾಯಿಗಳಿಗೆ ದಾರಿ ತೋರಿಸಿದೆ. 

ಬೀಜಿಂಗ್ (ಮಾ.24) ಮಾಲೀಕರ ಮನೆಯಲ್ಲಿ ನಾಯಿಗಳು ಹಾಯಾಗಿತ್ತು. ಆದರೆ ಅಪಹರಣಕಾರರು 7 ನಾಯಿಗಳನ್ನು ಅಪಹರಿಸಿದ್ದಾರೆ. ಟ್ರಕ್ ಮೂಲಕ ನಾಯಿಗಳನ್ನು ಅಪಹರಿಸಿದ್ದಾರೆ. ಅಪಹರಣಕಾರರು ಮಾಂಸಕ್ಕಾಗಿ ಈ ನಾಯಿಗಳನ್ನು ಕಿಡ್ನಾಪ್ ಮಾಡಿದ್ದರು. ಆದರೆ ದಾರಿ ಮಧ್ಯ ಟ್ರಕ್‌ನಿಂದ 7 ನಾಯಿಗಳು ಚಾಣಾಕ್ಷತನದಿಂದ ತಪ್ಪಿಸಿಕೊಂಡಿದೆ. ಬಳಿಕ ಬರೋಬ್ಬರಿ 17 ಕಿಲೋಮೀಟರ್ ಹೆದ್ದಾರಿ ಮೂಲಕ ನಡೆದುಕೊಂಡೇ ಮರಳಿ ಮನೆ ಸೇರಿದ ಘಟನೆ ಚೀನಾದಲ್ಲಿ ನಡೆದಿದೆ. ನಾಯಿಗಳು ದಾರಿಯಲ್ಲಿ ಒಂದರ ಹಿಂದೆ ಒಂದರಲ್ಲಿ ನಡೆದುಕೊಂಡು ಸಾಗುತ್ತಿರುವ ದೃಶ್ಯ ಸೆರೆಯಾಗಿದೆ.

ಗೋಲ್ಡನ್ ರಿಟ್ರೈವರ್ ಸೇರಿ ಉತ್ತಮ ತಳಿಯ ನಾಯಿಗಳು

ಚೀನಾದ ಚಂಗ್‌ಚುನ್ ಪ್ರಾಂತ್ಯದಲ್ಲಿ ಮಾಲೀಕರೊಬ್ಬರು 7 ನಾಯಿಗಳನ್ನು ಸಾಕಿದ್ದರು.ಗೋಲ್ಡನ್ ರಿಟ್ರೈವರ್, ಜರ್ಮನ್ ಶೆಫರ್ಡ್ ಸೇರಿದಂತೆ ಉತ್ತಮ ತಳಿಯ ನಾಯಿಗಳನ್ನು ಮುದ್ದಾಗಿ ಸಾಕಿದ್ದರು. ನಾಯಿಯ ಆರೈಕೆ, ಪಾಲನೆಯಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು. ಇತ್ತ ನಾಯಿಗಳು ಮಾಲೀಕನ ಜೊತೆ ಆತ್ಮೀಯವಾಗಿತ್ತು. ಇದರ ನಡುವೆ ಕಳ್ಳರ ತಂಡ ಈ ಮಾಲೀಕನ ಮನೆಗೆ ಕನ್ನ ಹಾಕಿತ್ತು. ಚೀನಾಜಲ್ಲಿ ನಾಯಿ ಮಾಂಸಕ್ಕೆ ಬೇಡಕೆ ಇದೆ. ಹೀಗಾಗಿ ಮನೆಯಲ್ಲಿದ್ದ 7 ನಾಯಿಗಳನ್ನು ಅಪರಹರಣ ಮಾಡಿದ್ದಾರೆ. ಟ್ರಕ್‌ಗೆ ನಾಯಿಗಳನ್ನು ತುಂಬಿಸಿ ಅಪಹರಿಸಿದ್ದಾರೆ.

17 ಕಿಲೋಮೀಟರ್ ನಡೆದುಕೊಂಡು ಮರಳಿ ಮನೆ ತಲುಪಿದ ಶ್ವಾನಗಳು

ಅಪಹರಣಕಾರರು ದಾರಿ ಮದ್ಯ ಟ್ರಕ್ ನಿಲ್ಲಿಸಿದ್ದಾರೆ. ಇದರ ನಡುವೆ 7 ನಾಯಿಗಳು ಚಾಣಾಕ್ಷತನದಿಂದ ಟ್ರಕ್‌ನಿಂದ ತಪ್ಪಿಸಿಕೊಂಡಿದೆ. ಹೀಗೆ ಕಳ್ಳರ ಕೈಯಿಂದ ತಪ್ಪಿಸಿಕೊಂಡ ನಾಯಿಗಳು ದಾರಿಯಲ್ಲಿ ಸಾಲಾಗಿ ನಡೆಯಲು ಆರಂಭಿಸಿದೆ. 7 ನಾಯಿಗಳ ಪೈಕಿ ಕಾರ್ಗಿ ತಳಿಯ ಪುಟ್ಟ ನಾಯಿ ಇತರ ನಾಯಿಗಳಿಗೆ ಮನೆಯ ದಾರಿ ತೋರಿಸಿದೆ. ಕಾರ್ಗಿ ತಳಿಯ ನಾಯಿ ತೋರಿಸಿಕೊಟ್ಟ ದಾರಿಯಲ್ಲಿ ನಾಯಿಗಳು ಬರೋಬ್ಬರಿ 17 ಕಿಲೋಮೀಟರ್ ನಡೆದುಕೊಂಡೇ ಸಾಗಿದೆ. ಸತತವಾಗಿ ನಡೆದುಕೊಂಡು ಸಾಗಿದ ನಾಯಿಗಳು ಕೊನೆಗೂ ಮನೆಗೆ ತಲುಪಿದೆ.

ನಾಯಿಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಸ್ಥಳೀಯರ ಪೊಲೀಸರಿಗೆ ಮಾಲೀಕ ದೂರು ನೀಡಿದ್ದ. ಇತ್ತ ಪ್ರಾಣಗಳ ಸಂಘಟನೆಗ ಸೂಚಿಸಿದ್ದರು. ಹೀಗಾಗಿ ಪ್ರಾಣಿ ಸಂಘಟನೆ ಸದಸ್ಯರು ಡ್ರೋನ್ ಮೂಲಕ ಹುಡುಕಾಟ ಆರಂಭಿಸಿದ್ದರು. ಈ ವೇಳೆ 7 ನಾಯಿಗಳು ದಾರಿಯಲ್ಲಿ ಸಾಗಿ ಬರುತ್ತಿರುವುದು ಗಮನಿಸಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ನಾಯಿಗಳು ಪತ್ತೆಯಾಗುತ್ತಿದ್ದಂತೆ ಪ್ರಾಣಿ ಸಂಘದ ಸದಸ್ಯರು ನಾಯಿಗಳ ಸುರಕ್ಷಿತವಾಗಿ ಮನೆ ತಲುಪುವಂತೆ ನೋಡಿಕೊಂಡಿದ್ದಾರೆ.

ಮುದ್ದಿನ ನಾಯಿಗಳು ಮರಳಿ ಬಂದಿದ್ದು ನೋಡಿ ಮಾಲೀಕ ಅತೀವ ಸಂತಸಗೊಂಡಿದ್ದಾನೆ. ನಾಯಿಗಳ ಒಗ್ಗಟ್ಟು, ಬುದ್ದಿವಂತಿಕೆಯಿಂದ ಮರಳಿ ಮನೆಗೆ ಬಂದಿದೆ. ಶ್ವಾನಗಳ ಪ್ರೀತಿಗೆ ಮಾಲೀಕ ಭಾವುಕನಾಗಿದ್ದಾನೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ
Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!