ನಮ್ಮನ್ನು ಎದುರು ಹಾಕಿಕೊಳ್ಳಬೇಡಿ, ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ: ಟ್ರಂಪ್ ಎಚ್ಚರಿಕೆ

Published : Feb 01, 2025, 08:40 AM IST
ನಮ್ಮನ್ನು ಎದುರು ಹಾಕಿಕೊಳ್ಳಬೇಡಿ, ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ: ಟ್ರಂಪ್ ಎಚ್ಚರಿಕೆ

ಸಾರಾಂಶ

ಡಾಲರ್ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ, ಶೇ.100ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ವಾಷಿಂಗ್ಟನ್‌: ಡಾಲರ್‌ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ನಮ್ಮನ್ನು ಎದುರು ಹಾಕಿಕೊಳ್ಳಬೇಡಿ. ಈ ರೀತಿ ಮಾಡುವುದಾದರೆ ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ. ಒಂದು ವೇಳೆ ಎದುರು ಹಾಕಿಕೊಂಡರೆ ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಶೇ.100ರಷ್ಟು ಸುಂಕವನ್ನು ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಿರುವ ಟ್ರಂಪ್, ‘ ಬ್ರಿಕ್ಸ್‌ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ. ನಾವು ನಿಂತು ನೋಡುತ್ತಿರುವುದು ಮುಗಿದಿದೆ. ಅಮೆರಿಕದ ಡಾಲರ್‌ ಬದಲಿಗೆ ಹೊಸ ಬ್ರಿಕ್ಸ್‌ ಕರೆನ್ಸಿಯನ್ನು ತರುವುದಿಲ್ಲ ಎನ್ನುವ ಬದ್ಧತೆ ತೋರಲಿ ಅಥವಾ ಶೇ.100ರಷ್ಟು ಸುಂಕವನ್ನು ಎದುರಿಸಲಿ. ಅವರು ಮತ್ತೊಂದು ಮುಟ್ಠಾಳ ರಾಷ್ಟ್ರವನ್ನು ಹುಡುಕಲಿ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಅಮೆರಿಕ ಡಾಲರ್‌ ಬದಲಿಸುವ ಯಾವುದೇ ಅವಕಾಶವಿಲ್ಲ. ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಬೇಕು ಎಂದರೆ ಅಮೆರಿಕಕ್ಕೆ ವಿದಾಯ ಹೇಳಬೇಕು ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆಯನ್ನೇ ರದ್ದು ಮಾಡಲು ಟ್ರಂಪ್ ತಯಾರಿ!

ಭಾರತದ ಸೇರಿದಂತೆ 10 ರಾಷ್ಟ್ರಗಳ ಸಂಘಟನೆಯಾಗಿರುವ ಬ್ರಿಕ್ಸ್‌ ಅಮೆರಿಕದ ಡಾಲರ್‌ ಬದಲಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತ್ಯೇಕ ಕರೆನ್ಸಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನದ ಬಾಲ ಕತ್ತರಿಸಿದ ಡೊನಾಲ್ಡ್ ಟ್ರಂಪ್; ಸರ್ಜಿಕಲ್ ಸ್ಟ್ರೈಕ್ ಅಂದ್ರು  ನೆಟ್ಟಿಗರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ