ನಿರ್ಲಕ್ಷದಿಂದ ಹೆಚ್ಚಾಯ್ತು ಕರೋನಾ; ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ!

Published : Dec 13, 2020, 08:24 PM ISTUpdated : Dec 13, 2020, 08:28 PM IST
ನಿರ್ಲಕ್ಷದಿಂದ ಹೆಚ್ಚಾಯ್ತು ಕರೋನಾ; ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ!

ಸಾರಾಂಶ

ಕೊರೋನಾ ವೈರಸ್ ವಿರುದ್ಧ ಲಸಿಕೆ ಪ್ರಯೋಗ ಆರಂಭಗೊಂಡಿದೆ. ಲಸಿಕೆ ಲಭ್ಯತೆ ಮಾಹಿತಿ ಸಿಗುತ್ತಿದ್ದಂತೆ ಜನರು ಕೊರೋನಾ ಕುರಿತು ಗಂಭೀರತೆ ಮರೆಯುತ್ತಿದ್ದಾರೆ. ಇದೀಗ  ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೂ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಕೊರೋನಾ ಅಲೆ ಹೆಚ್ಚಾಗುತ್ತಿದ್ದಂತೆ ಇದೀಗ ಜರ್ಮನಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.  

ಜರ್ಮನ್(ಡಿ.13): ಕೊರೋನಾಗೆ ಲಸಿಕೆಯೊಂದೇ ಪರಿಹಾರವಲ್ಲ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇತ್ತ ಲಸಿಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಇತ್ತ ಜನರು ಸಭೆ, ಸಮಾರಂಭ, ಹಬ್ಬಗಳಲ್ಲಿ ಕೊರೋನಾ ಮಾರ್ಗದರ್ಶನ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಕೊರೋನಾ ದೃಢ!

ಕ್ರಿಸ್ಮಸ್ ಹಾಗೂ ಹೊಸ ವರ್ಷ ಕಾರಣ ಜರ್ಮನಿಯಲ್ಲಿ ಲಾಕ್‌ಡೌನ್ ನಿಯಮ ಮತ್ತಷ್ಟು ಬಿಗಿಗೊಳಿಸಲಾಗಿದೆ. ಡಿಸೆಂಬರ್ 16 ರಿಂದ ಜರ್ಮನಿಯ ಎಲ್ಲಾ ಶಾಲೆಗಳನ್ನು, ಶಾಪಿಂಗ್ ಮಳಿಗೆ, ಡೇ ಕೇರ್ ಸೆಂಟರ್‌ಗಳನ್ನು ಮುಚ್ಚುವಂತೆ ಜರ್ಮನ್ ಚಾನ್ಸೆಲರ್ ಎಂಜಲಾ ಮಾರ್ಕೆಲ್ ಸೂಚಿಸಿದ್ದಾರೆ.

ಜರ್ಮನಿಯಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಆರಂಭಗೊಂಡಿದೆ. ಕೊರೋನಾ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ನೂತನ ಮಾರ್ಗಸೂಚಿ ಹಾಗೂ ನಿರ್ಬಂಧಗಳು ಜನವರಿ 10ವರೆಗೆ ಜಾರಿಯಲ್ಲಿರಲಿದೆ ಎಂದು ಮಾರ್ಕೆಲ್ ಹೇಳಿದ್ದಾರೆ.

ಹೊಸ ಮಾರ್ಗಸೂಚಿ:

  • ದಿನಸಿ, ಹಣ್ಣು, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿದರೆ ಇತರ ಎಲ್ಲಾ ಅಂಗಡಿ, ಮಳಿಗೆಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.
  • ಶಾಲಾ ಮಕ್ಕಳಿಗೆ ರಜೆ ನೀಡಲಾಗಿದೆ. ಕ್ರಿಸ್ಮಸ್ ರಜೆಯನ್ನು ಜನವರಿ 10ರ ವರೆಗೆ ವಿಸ್ತರಿಸಲಾಗಿದೆ. ಇನ್ನು ಆನ್‌ಲೈನ್ ಕ್ಲಾಸ್ ಮುಂದುವರಿಸಲು ಸೂಚಿಸಲಾಗಿದೆ. 
  • ಡೇಕೇರ್ ಸೆಂಟರ್ ಮುಚ್ಚಲು ಸೂಚಿಸಲಾಗಿದೆ.  ಇನ್ನು ಮಕ್ಕಳ ಪೋಷಕರು ವೇತನ ಸಹಿತ ರಜೆ ಪಡೆದು ಮಕ್ಕಳ ನೋಡಿಕೊಳ್ಳಲು ಸೂಚಿಸಲಾಗಿದೆ.
  • ಸಾಧ್ಯವಾದಷ್ಟು ಮನೆಯಿಂದ ಕೆಲಸ(ವರ್ಕ್ ಫ್ರಮ್ ಹೋಮ್) ಉತ್ತೇಜಿಸಲು ಹಾಗೂ ಮುಂದುವರಿಸಲು ಸೂಚಿಸಲಾಗಿದೆ
  • ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆಗೆ ಕಟ್ಟು ನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ನಿಯಮ ಉಲ್ಲಂಘಿಸಿದರೆ ಪ್ರಾರ್ಥನೆಗೆ ಅವಕಾಶವಿಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ