NRC ವಿರುದ್ಧ ಪ್ರತಿಭಟಿಸಿದ ಅನಿವಾಸಿ ಭಾರತೀಯರಿಗೆ ಶಾಕ್ ನೀಡಿದ ಸೌದಿ ಅರೇಬಿಯಾ!

Published : Dec 13, 2020, 07:21 PM IST
NRC ವಿರುದ್ಧ ಪ್ರತಿಭಟಿಸಿದ ಅನಿವಾಸಿ ಭಾರತೀಯರಿಗೆ ಶಾಕ್ ನೀಡಿದ ಸೌದಿ ಅರೇಬಿಯಾ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಚಯಿಸಿದ NRC ವಿರುದ್ಧ ದೇಶದಲ್ಲಿ ಹಲವು ಪ್ರತಿಭಟನೆಗಳು ನಡೆದಿದೆ. ಶಾಹೀನ್ ಭಾಗ್ ಪ್ರತಿಭಟನೆ ವಿಶ್ವದಲ್ಲೇ ಸದ್ದು ಮಾಡಿತ್ತು. ಸದ್ಯ ಭಾರತದಲ್ಲಿ ರೈತ ಪ್ರತಿಭಟನೆ ನಡೆಯುತ್ತಿದೆ. ಅತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರು NRC ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ NRC ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿ ಭಾರತೀಯರಿಗೆ ಸೌದಿ ಸರ್ಕಾರ ಬಿಗ್ ಶಾಕ್ ನೀಡಿದೆ.

ಸೌದಿ(ಡಿ.13): ರಾಷ್ಟ್ರೀಯ ಪೌರತ್ವ ನೋಂದಣಿ(NRC)ವಿರುದ್ಧ ದೇಶ ಉಗ್ರ ಪ್ರತಿಭಟನೆ ಎದುರಿಸಿದೆ. ಸದ್ಯ NRC ವಿವಾದ ತಣ್ಣಗಾಗಿದೆ. ಆದರೆ ಭಾರತದಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಅತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಮೋದಿ ಸರ್ಕಾರದ NRC ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸೌದಿ ಅರೇಬಿಯಾ ಸರ್ಕಾರ ಅನಿವಾಸಿ ಭಾರತೀಯರಿಗೆ ಶಾಕ್ ನೀಡಿದೆ.

ಫ್ರೀಡಂಪಾರ್ಕ್‌ನಲ್ಲಿ ದೇಶದ್ರೋಹಿ ಘೋಷಣೆ; ಅಮೂಲ್ಯ ಹಿಂದಿದೆ ಈ ಸಂಘಟನೆ!

NRC ವಿರುದ್ಧ ಸೌದಿ ಅರೇಬಿಯಾದಲ್ಲಿ ಪ್ರತಿಭಟನೆ ಆಯೋಜಿಸಿದ ಕೆಲ ಅನಿವಾಸಿ ಭಾರತೀಯರು ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ NRC ವಿರುದ್ಧ ಫಲಕ, ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಮೋದಿ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸೌದಿ ಅರೇಬಿಯಾ, ಪ್ರತಿಭಟನೆ ನಡೆಸಿದ ಅನಿವಾಸಿ ಭಾರತೀಯರನ್ನು ಬಂಧಿಸಿ ಗಡೀಪಾರು ಮಾಡಿದೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿದೆ.

ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನಿವಾಸಿ ಭಾರತೀಯರನ್ನು ಬಂಧಿಸಿದ್ದಾರೆ. ಬಳಿಕ ನಿಯಮ ಉಲ್ಲಂಘನೆ ಕಾರಣಕ್ಕೆ ಗಡೀಪಾರು ಮಾಡಲಾಗಿದೆ.  ಗಲ್ಫ್ ರಾಷ್ಟ್ರದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಪ್ರದರ್ಶನ ಹಾಗೂ ಒಗ್ಗಟ್ಟಾಗುವುದನ್ನು ನಿಷೇಧಿಸಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದವರಿಗೂ ಸಂಕಷ್ಟ ತಪ್ಪಿಲ್ಲ. ಗಲ್ಫ್ ನಿಯಮ ಉಲ್ಲಂಘಿಸಿದ ಅನಿವಾಸಿ ಭಾರತೀಯರನ್ನು ಅರೆಸ್ಟ್ ಮಾಡಿ ಗಡೀಪಾರು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ