ಮೆಕ್ಸಿಕೋ ತಲುಪಿದ ಜೆನ್‌ - ಝಿ ಕಿಚ್ಚು

Kannadaprabha News   | Kannada Prabha
Published : Nov 17, 2025, 05:39 AM IST
MEXICO

ಸಾರಾಂಶ

ಇತ್ತೀಚೆಗೆ ಬಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರವನ್ನೇ ಉರುಳಿಸಿದ್ದ ಜೆನ್‌-ಝಿ ಪ್ರತಿಭಟನೆಯ ಕಿಚ್ಚು ಇದೀಗ ಮೆಕ್ಸಿಕೋಗೂ ಹರಡಿದೆ. ನ.1ರಂದು ನಡೆದ ಉರುಪನ್‌ನ ಮೇಯರ್‌ ಆಗಿದ್ದ ಮಾಂಜೊ ಅವರ ಹತ್ಯೆಯಿಂದ ಉದ್ರಿಕ್ತರಾಗಿರುವ ಯುವಕರು ಸರ್ಕಾರ ವಿರೋಧಿ ಪ್ರತಿಭಟನೆಗಿಳಿದಿದ್ದಾರೆ.

ಮೆಕ್ಸಿಕೋ ಸಿಟಿ: ಇತ್ತೀಚೆಗೆ ಬಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರವನ್ನೇ ಉರುಳಿಸಿದ್ದ ಜೆನ್‌-ಝಿ ಪ್ರತಿಭಟನೆಯ ಕಿಚ್ಚು ಇದೀಗ ಮೆಕ್ಸಿಕೋಗೂ ಹರಡಿದೆ. ನ.1ರಂದು ನಡೆದ ಉರುಪನ್‌ನ ಮೇಯರ್‌ ಆಗಿದ್ದ ಮಾಂಜೊ ಅವರ ಹತ್ಯೆಯಿಂದ ಉದ್ರಿಕ್ತರಾಗಿರುವ ಯುವಕರು ಸರ್ಕಾರ ವಿರೋಧಿ ಪ್ರತಿಭಟನೆಗಿಳಿದಿದ್ದಾರೆ.

ಇದಕ್ಕೆ ವಿಪಕ್ಷಗಳು ಮತ್ತು ಮಾಜಿ ಅಧ್ಯಕ್ಷರಿಂದ ಬೆಂಬಲ

ಇದಕ್ಕೆ ವಿಪಕ್ಷಗಳು ಮತ್ತು ಮಾಜಿ ಅಧ್ಯಕ್ಷರಿಂದ ಬೆಂಬಲ ವ್ಯಕ್ತವಾಗುತ್ತಿದೆ. ‘ಮಾಂಜೊ ಸಾಯಲಿಲ್ಲ, ಅವರನ್ನು ಕೊಲ್ಲಲಾಯಿತು. ಭ್ರಷ್ಟಾಚಾರ ಮತ್ತು ಹಿಂಸಾತ್ಮಕ ಅಪರಾಧಗಳಿಗೆ ಶಿಕ್ಷೆಯ ವಿನಾಯಿತಿಯಂತಹ ವ್ಯವಸ್ಥಿತ ಸಮಸ್ಯೆಗಳಿಂದ ನಾವು ಹತಾಶರಾಗಿದ್ದೇವೆ.

ಭದ್ರತೆ ಬೇಕು ಹಾಗೂ ದೇಶ ಭ್ರಷ್ಟಾಚಾರ ಮುಕ್ತವಾಗಬೇಕು

ನಮಗೆ ಭದ್ರತೆ ಬೇಕು ಹಾಗೂ ದೇಶ ಭ್ರಷ್ಟಾಚಾರ ಮುಕ್ತವಾಗಬೇಕು. ಆರೋಗ್ಯ ವ್ಯವಸ್ಥೆಗೆ ಇನ್ನಷ್ಟು ಅನುದಾನ ಸಿಗಬೇಕು’ ಎಂದು ಯುವಕರು ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಅಧ್ಯಕ್ಷೆಯ ನಿವಾಸಕ್ಕೂ ನುಗ್ಗಿದ್ದು, ಅವರನ್ನು ನಿಗ್ರಹಿಸಲು ಅಶ್ರುವಾಯು ಬಳಸಿದ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ. ಘಟನೆಯಲ್ಲಿ 100 ಪೊಲೀಸರು ಗಾಯಗೊಂಡಿದ್ದಾರೆ. 20 ನಾಗರಿಕರ ಸ್ಥಿತಿಯೂ ಗಂಭೀರವಾಗಿದ್ದು, 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!