
ತಕ್ಕ ಸಮಯಕ್ಕೆ ಕಚೇರಿಗೆ ಕೆಲಸಕ್ಕೆ ಹಾಜರ್, ಕಂಪನಿ ಹೇಳಿದಂತೆ ಎಲ್ಲಾ ಜವಾಬ್ದಾರಿ ಹೊತ್ತು ಕೆಲಸ, ಮ್ಯಾನೇಜರ್ ಸೇರಿದಂತೆ ಬಾಸ್ ಉಗಿದರೂ ನಗುಮುಖದಲ್ಲೇ ಕೆಲಸ ಮಾಡುವ ಪದ್ಧತಿ ಜೆನ್‌ಝಿ ಸಮೂಹ ಪಾಲಿಸಲ್ಲ. ಇದಕ್ಕೆ ಹಲವು ಉದಾಹರಣೆಗಳಿವೆ. ರಜೆ ಕ್ಯಾನ್ಸಲ್ ಮಾಡಿದ್ದಕ್ಕೆ ಕಾಲ್ ಮಾಡಿ ಬಾಸ್‌ಗೆ ಉಗಿದ ಉದ್ಯೋಗಿ ಸೇರಿದಂತೆ ಹಲವು ಘಟನೆಗಳಿವೆ. ಇದೀಗ ತಮಾಷೆ ಘಟನೆಯೊಂದು ನಡೆದಿದೆ. ಕಚೇರಿ ವಿಡಿಯೋ ಕಾಲ್ ಮೀಟಿಂಗ್‌ನಲ್ಲಿ ಜೆನ್‌ಝಿ ಉದ್ಯೋಗಿ ಮುಖಕ್ಕೆ ಫೇಸಿಯಲ್ ಪ್ಯಾಕ್ ಹಾಕಿ, ಜ್ಯೂಸ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾಳೆ. ಬಾಸ್‌ಗೆ ಜೋಕ್ ಮಾಡಲು ಹೋದ ಉದ್ಯೋಗಿಯೇ ಅಚ್ಚರಿಕೊಂಡ ಘಟನೆ ನಡೆದಿದೆ.
ವರ್ಕ್ ಫ್ರಂ ಹೋಮ್ ಶುರುವಾದ ಮೇಲೆ ಆಫೀಸ್ ಮೀಟಿಂಗ್‌ಗಳು ಮನೆಯ ಲಿವಿಂಗ್ ರೂಮ್, ಕಿಚನ್‌ಗಳಿಗೂ ಶಿಫ್ಟ್ ಆಗಿವೆ. ಆದರೆ, RemoteStar Ltd. ಕಂಪನಿಯ ಯುವತಿಯೊಬ್ಬಳು ಈ ಎಲ್ಲಾ ಚೌಕಟ್ಟುಗಳನ್ನು ಮೀರಿ ಮೀಟಿಂಗ್‌ಗೆ ಹಾಜರಾಗಿದ್ದಾಳೆ. ಮುಖಕ್ಕೆ ದಪ್ಪವಾಗಿ ಬೇವಿನ ಫೇಸ್ ಪ್ಯಾಕ್, ತಲೆಗೆ ದೊಡ್ಡ ಟವಲ್ ಸುತ್ತಿಕೊಂಡು, ಆಕೆ ತನ್ನ ಪ್ರಾಜೆಕ್ಟ್ ವಿವರಗಳನ್ನು ಸಿಇಒ ಮುಂದೆ ವಿವರಿಸಿದ್ದಾಳೆ. ಆಕೆಯ ಸಹೋದ್ಯೋಗಿಗಳು ನಗು ತಡೆಯಲು ಹರಸಾಹಸ ಪಡುತ್ತಿದ್ದರು. ಆಕೆ ಮಾತ್ರ ಏನೂ ಆಗೇ ಇಲ್ಲ ಎಂಬಂತೆ, ಮಧ್ಯೆ ಮಧ್ಯೆ ಗ್ಲಾಸ್‌ನಿಂದ ನೀರು ಕುಡಿಯುತ್ತಾ ಸಖತ್ ಕೂಲ್ ಆಗಿ ಮಾತನಾಡುತ್ತಿದ್ದಳು.
ಅಸಲಿಗೆ, ಇದು ಬಾಸ್‌ಗೆ ಒಂದು ಪ್ರಾಕ್ಟಿಕಲ್ ಜೋಕ್ ಮಾಡಲು ಎಲ್ಲಾ ಉದ್ಯೋಗಿಗಳು ಸೇರಿ ಮಾಡಿದ ಪ್ಲಾನ್ ಆಗಿತ್ತು. ಆದರೆ, ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಆ ಕಂಪನಿಯ ಸಿಇಒ ಅವರ ಪ್ರತಿಕ್ರಿಯೆ. ಯುವತಿ ತನ್ನ ಪ್ರಾಜೆಕ್ಟ್ ವಿವರಣೆ ಮುಗಿಸಿದಾಗ, ಸಿಇಒ ಕೋಪಗೊಳ್ಳುವ ಬದಲು, ತುಂಬಾನೇ ಶಾಂತವಾಗಿ, 'ಇದು ಯಾವ ಫೇಸ್ ಮಾಸ್ಕ್? ಬ್ಲ್ಯಾಕ್ ಸೀವೀಡ್ (Seaweed) ಮಾಸ್ಕಾ ಅಥವಾ ಬೇರೆನಾ?' ಎಂದು ಕೇಳಿದರು. ತಕ್ಷಣ ಯುವತಿ ನಗುತ್ತಾ, 'ಇದು ಬೇವಿನ ಫೇಸ್ ಪ್ಯಾಕ್, ನೀವೂ ಟ್ರೈ ಮಾಡಿ' ಎಂದು ಉತ್ತರಿಸಿದಳು. ಬಾಸ್‌ಗೆ ತಮಾಷೆ ಮಾಡಲು ಹೋದ ಉದ್ಯೋಗಿಗಳಿಗೆ, ಅವರ ಈ ಕೂಲ್ ಉತ್ತರ ದೊಡ್ಡ ಸರ್ಪ್ರೈಸ್ ನೀಡಿತ್ತು. 'ನಾವು ಬಾಸ್‌ಗೆ ಪ್ರಾಕ್ಟಿಕಲ್ ಜೋಕ್ ಮಾಡಲು ನೋಡಿದೆವು, ಆದರೆ ಅವರೇ ನಮಗಿಂತ ಹೆಚ್ಚು ಎಂಜಾಯ್ ಮಾಡಿದರು' ಎಂದು ಕಂಪನಿ ವಿಡಿಯೋ ಜೊತೆ ಬರೆದುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, 80 ಲಕ್ಷಕ್ಕೂ ಹೆಚ್ಚು ಜನ ಇದನ್ನು ನೋಡಿದ್ದಾರೆ. ಸಿಇಒ ಅವರ ವರ್ತನೆಯನ್ನು ಹೊಗಳಿ ಅನೇಕರು ಕಾಮೆಂಟ್ ಮಾಡಿದ್ದಾರೆ. 'ಇಂತಹ ಕೂಲ್ ಬಾಸ್ ಸಿಗೋದು ಅದೃಷ್ಟ', 'Gen Z ಉದ್ಯೋಗಿಗಳಿಗಿಂತ ಈ ಮಿಲೇನಿಯಲ್ ಬಾಸ್ ಹೆಚ್ಚು ಕೂಲ್' ಎಂದೆಲ್ಲಾ ಜನ ಬರೆದುಕೊಂಡಿದ್ದಾರೆ.
ಇನ್ನೊಂದು ಕಡೆ ಕೆಲವರು ಇದನ್ನು ಟೀಕಿಸಿದ್ದಾರೆ. ಆಫೀಸ್ ಮೀಟಿಂಗ್‌ಗಳಲ್ಲಿ ಇರಬೇಕಾದ ಗಂಭೀರತೆ ಇಲ್ಲಿ ಕಾಣಿಸುತ್ತಿಲ್ಲ, ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಮಾಡಿದ ನಾಟಕ ಎಂದು ವಾದಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ, ಕಂಪನಿ ಮೀಟಿಂಗ್‌ನ ಎರಡನೇ ಭಾಗವನ್ನೂ ಬಿಡುಗಡೆ ಮಾಡಿದೆ. ಅದರಲ್ಲಿ ಬಾಸ್, 'ಇನ್ನು ಮುಂದೆ ಯಾರಾದರೂ ಕ್ಯಾಮೆರಾ ಆಫ್ ಮಾಡಿದರೆ, ಅವರು ಏನು ಮಾಡುತ್ತಿದ್ದಾರೆಂದು ನನಗೆ ಗೊತ್ತಾಗುತ್ತದೆ' ಎಂದು ತಮಾಷೆಯಾಗಿ ಹೇಳುವುದನ್ನು ನೋಡಬಹುದು.
ಕೋವಿಡ್ ನಂತರದ ಹೈಬ್ರಿಡ್ ವರ್ಕ್ ಕಲ್ಚರ್‌ನಲ್ಲಿ 'ಪ್ರೊಫೆಷನಲಿಸಂ' ಪದದ ಅರ್ಥವೇ ಬದಲಾಗುತ್ತಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಉಡುಗೆ-ತೊಡುಗೆಗಿಂತ ಮಾಡುವ ಕೆಲಸದ ಗುಣಮಟ್ಟ ಮುಖ್ಯ ಎನ್ನುವ Gen Z ಧೋರಣೆಯನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಆದರೂ, ಅಧಿಕೃತ ಮೀಟಿಂಗ್‌ಗಳಲ್ಲಿ ಇಂತಹ ತಮಾಷೆಗಳು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಯೂ ಜೋರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ