18 ಗಂಟೆ ಕೆಲಸ ಮಾಡಿದ ಉದ್ಯೋಗಿಗೆ ಇದೀಗ ವರ್ಷಕ್ಕೆ 29 ಲಕ್ಷ ರೂ ಸೈಡ್ ಇನ್‌ಕಮ್, ನಿವೃತ್ತಿಗೆ ಘೋಷಣೆ

Published : Nov 10, 2026, 08:32 PM IST
work from home

ಸಾರಾಂಶ

ವಯಸ್ಸು ಕೇವಲ 30. ಆದರೆ ಈಗಲೇ ಕೆಲಸಕ್ಕೆ ರಾಜೀನಾಮೆ ನೀಡಿ ವಿಶ್ರಾಂತಿಗೆ ಪ್ಲಾನ್ ಮಾಡಿದ್ದಾನೆ. ಪ್ರತಿ ದಿನ 18 ಗಂಟೆ ಕೆಲಸ ಮಾಡಿ ಬಂದ ವೇತನದಲ್ಲಿ ಭಿನ್ನವಾಗಿ ಪ್ಲಾನ್ ಮಾಡಿದ್ದಾನೆ. ಇದೀಗ ಸೈಡ್ ಇನ್‌ಕಮ್ ವಾರ್ಷಿಕ 29 ಲಕ್ಷ ರೂ ಬರುತ್ತಿದೆ.

ಸ್ಯಾಲರಿ ಪಡೆಯುವ ಉದ್ಯೋಗಿಗಳ ಜೀವನ ಆರಕ್ಕೇರಲ್ಲ ಮೂರಕ್ಕಿಳಿಯಲ್ಲ ಅನ್ನೋ ಮಾತಿದೆ. ಆದರೆ ಸದ್ಯ ಸೂಕ್ತ ಸಮಯ, ಸೂಕ್ತ ಸ್ಥಳದಲ್ಲಿ ಹೂಡಿಕೆ ಮಾಡಿದರೆ ಮುಂದಿನ ಜೀವನ ಸುಖಕರವಾಗಿರಲಿದೆ ಅನ್ನೋದು ಮತ್ತೆ ಸಾಬೀತಾಗಿದೆ.ಇಲ್ಲೊಬ್ಬನ ವಯಸ್ಸು ಕೇವಲ 30. ಇದೀಗ ರಿಟೈರ್‌ಮೆಂಟ್‌ಗೆ ನಿರ್ಧರಿಸಿದ್ದಾನೆ. ಕೆಲಸದ ವೇಳೆ ಪ್ರತಿ ದಿನ 18 ಗಂಟೆ ಕೆಲಸ ಮಾಡಿ ವೇತನ ಪಡೆದುಕೊಂಡಿದ್ದಾರೆ. ಇದೇ ವೇಳೆ ಈ ಸ್ಯಾಲರಿ ಮೊತ್ತವನ್ನು ಸದುಪಯೋಗ ಪಡಿಸಿಕೊಂಡ ಈತ ಇದೀಗ ಸೈಡ್ ಇನ್‌ಕಮ್ ಆಗಿ 29 ಲಕ್ಷ ರೂಪಾಯಿ ಪಡೆಯುತ್ತಿದ್ದಂತೆ ಈತ ಪ್ಲಾನ್ ಬದಲಿಸಿ ಮತ್ತಷ್ಟು ಆದಾಯಗಳಿಸುತ್ತಿದ್ದಾನೆ. ಇದೀಗ. ಇದೇ ಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾನೆ.

ಕೆಲಸಕ್ಕೆ ಸೇರಿದ ಕೆಲವೇ ದಿನದಲ್ಲಿ ಸುದೀರ್ಘ ದುಡಿಮೆ

ಉದ್ಯೋಗಕ್ಕೆ ಸೇರಿಕೊಂಡ ಬಳಿಕ ಈತ ಸತತವಾಗಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿದ್ದಾನೆ. ಪ್ರತಿ ದಿನ 18 ಗಂಟೆಗಳ ಕಾಲ ಕೆಲಸ ಮಾಡಿ ಇದೀಗ ವಿಶ್ರಾಂತಿ ಜೀವನಕ್ಕೆ ಪ್ಲಾನ್ ಮಾಡಿರುವ ಯುವಕ ಚೀನಾದ ಚಾಂಗ್‌ಶ ನಿವಾಸಿ ಫ್ಯನಾ. ಪ್ರತಿ ದಿನ ಈತನಿಗೆ ಗಂಟೆ ಲೆಕ್ಕ ಸಂಬಳ. 21ರ ಹರೆಯಕ್ಕೆ ಕೆಲಸಕ್ಕೆ ಸೇರಿಕೊಂಡ. ಕೆಲಸಕ್ಕೇ ಸೇರಿದ ಆರೇ ತಿಂಗಳಿಗೆ ಕೆಲಸ ಕಲಿತು ದಿನಕ್ಕೆ 12 ಗಂಟೆ, 14 ಗಂಟೆ ಕೆಲಸ ಮಾಡಲು ಆರಂಬಿಸಿದೆ.ಕೆಲವೇ ದಿನಗಳಲ್ಲಿ ಪ್ರತಿ ದಿನ 18 ಗಂಟೆ ಕೆಲಸ ಮಾಡಲು ನಿರ್ಧರಿಸಿದ್ದ.

ಹಳೇ ಫ್ಲ್ಯಾಟ್ ಖರೀದಿಸಿದ ಯುವಕ

ಹೆಚ್ಚು ಗಂಟೆ ಕೆಲಸದಿಂದ ಹೆಚ್ಚು ಸಂಬಳ ಪಡೆಯಲು ಆರಂಭಿಸಿದೆ. ಈ ಹಣವನ್ನು ಚೀನಾದ ಕೆಲ ಭಾಗದಲ್ಲಿರುವ ಹಳೇ ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದಾನೆ. ಇದೇ ರೀತಿ 14 ಹಳೆಯ ಫ್ಲ್ಯಾಟ್‌ ಖರೀದಿಸಿದ್ದಾನೆ. ಡೌನ್‌ಟೌನ್ ಭಾಗದಲ್ಲಿದ್ದ ಹಳೆಯ, ಆದರೆ ಕೈಗೆಟುಕುವ ಬೆಲೆಯ ಫ್ಲ್ಯಾಟ್‌ಗಳನ್ನು ಖರೀದಿಸಿದ್ದಾನೆ. ಹಲವರು ಈ ಹಳೇ ಫ್ಲ್ಯಾಟ್ ಖರೀದಿಗೆ ಹಿಂದೇಟು ಹಾಕುತ್ತಾರೆ. 14 ಫ್ಲ್ಯಾಟ್‌ಗಳನ್ನು ಸುಮಾರು 3,00,000 ಯುವಾನ್ (ಅಂದಾಜು ₹36 ಲಕ್ಷ) ವೆಚ್ಚದಲ್ಲಿ ಖರೀದಿಸಿ ರಿಪೇರಿ ಮಾಡಿದ್ದಾನೆ.

ವಾರ್ಷಿಕ 29 ಲಕ್ಷ ರೂಪಾಯಿ ಆದಾಯ

ಸದ್ಯ 14 ಫ್ಲ್ಯಾಟ್‌ಗಳನ್ನು ಬಾಡಿಗೆ ನೀಡಿದ್ದಾನೆ. ಇದೀಗ ವಾರ್ಷಿಕವಾಗಿ 29 ಲಕ್ಷ ರೂಪಾಯಿ ಬಾಡಿಗೆ ರೂಪದಲ್ಲಿ ಪಡೆಯಲು ಆರಂಭಿಸಿದ್ದಾನೆ. ಆದರೆ ಬಾಡಿಗೆ, ರಿಯಲ್ ಎಸ್ಟೇಟ್ ಕಿರಿಕಿರಿ ಬೇಡ ಎಂದು ಎಲ್ಲಾ ಫ್ಲ್ಯಾಟ್ ಮಾರಾಟ ಮಾಡಿದ್ದಾನೆ. ಬಳಿಕ ಬಂಡವಾಳವನ್ನು ಷೇರು ಮಾರುಕಟ್ಟೆಯ ಡಿವಿಡೆಂಡ್ ಫಂಡ್‌ಗಳು (Dividend Stocks & Funds) ಹಾಗೂ ಸ್ಥಿರ ನಿರಂತರ ಆದಾಯ ತರುವ ಹೂಡಿಕೆಗಳಿಗೆ ವರ್ಗಾಯಿಸಲು ತೀರ್ಮಾನಿಸಿದ್ದಾನೆ. ರಿಯಲ್ ಎಸ್ಟೇಟ್‌ಗಿಂತ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ನಷ್ಟದ ಅಪಾಯವಿದ್ದರೂ, ಮಾನಸಿಕ ನೆಮ್ಮದಿಗಾಗಿ ಈ ನಿರ್ಧಾರ ತಳೆದಿರುವುದಾಗಿ ಹೇಳಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೊಫೈಲ್​ ಡಿಲೀಟ್​ ಮಾಡದೇ ಸಿಕ್ಕಿಬಿದ್ರಾ ಜಿರಳೆ ನಾಯಕ ಅಶುತೋಷ್ ರಾಂಕಾ? ಪಾಕ್​ ಜೊತೆ ಲಿಂಕ್​ ವೈರಲ್​
ಹಿಟ್ಟು ಬಣ್ಣ ಹೂವು ಅಲ್ಲ, 6.5ಕೆಜಿ ಚಿನ್ನ, 380 ಕ್ಯಾರೆಟ್ ವಜ್ರದಿಂದ ದೀಪಾವಳಿ ರಂಗೋಲಿ