ಇಸ್ಲಾಂ ಮೂಲಭೂತವಾದಕ್ಕೆ ಬ್ರೇಕ್ ... ಇನ್ಮುಂದೆ ಮಸೀದಿ ಶಿಕ್ಷಣ ಬ್ಯಾನ್!

By Suvarna NewsFirst Published Dec 11, 2020, 5:07 PM IST
Highlights

ಇಸ್ಲಾಂ ಮೂಲಭೂತವಾದ ತಡೆಯಲು ಫ್ರಾನ್ಸ್ ನಲ್ಲಿ ಕಠಿಣ ಕಾನೂನು/ ಮನೆ ಮತ್ತು ಮಸೀದಿಯಲ್ಲಿ ಶಿಕ್ಷಣಕ್ಕೆ ಬ್ರೇಕ್/ ಶಿಕ್ಷಣ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ/ ಪ್ಯಾರೀಸ್ ಘಟನೆಯಿಂದ ಎಚ್ಚೆತ್ತುಕೊಂಡ ಸರ್ಕಾರ

ಪ್ಯಾರೀಸ್(ಡಿ. 11) ಇಸ್ಲಾಂ ಮೂಲಭೂತವಾದಿಗಳ ದಾಳಿಯಿಂದ ಫ್ಸಾನ್ಸ್  ಅನೇಕ ಸಂಕಷ್ಟ ಅನುಭವಿಸಿತ್ತು. ಅದರಿಂದ ಹೊರಬರಲು ಇದೀಗ ಕಠಿಣ ಕಾನೂನು ಜಾರಿ ಮಾಡಿದೆ.

ಮೂರು ವರ್ಷ ಮೇಲ್ಪಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯ. ಮನೆಯಲ್ಲಿ ಪಾಠದ ಆಯ್ಕೆ ಇರುವುದಿಲ್ಲ. ಅಂಥ ವಿಶೇಷ ಪ್ರಕರಣಗಳಲ್ಲಿ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದು ಎಲ್ಲ ಧರ್ಮದವರಿಗೂ ಅನ್ವಯವಾಗಲಿದೆ.

ಕಾನೂನು ಬಾಹಿರವಾಗಿ ನಡೆಯುತ್ತಿರುವ ಶಾಲೆಗಳ ಮೇಲೆ ಕಠಿಣ ಕ್ರಮಕ್ಕೆ ಈ ಕಾನೂನು ನೆರವಾಗಲಿದೆ.  ಒಂದು ಅಜೆಂಡಾ ಇಟ್ಟುಕೊಂಡು ಶಾಲೆ ನಡೆಸುತ್ತಿರುವ ಎಲ್ಲ ಪ್ರಕ್ರಿಯೆಗೆ ಬ್ರೇಕ್ ಬೀಳಲಿದೆ.

ಭಯೋತ್ಪಾದನೆ ವಿರುದ್ಧ ಹೋರಾಟ.. ಭಾರತ ಫ್ರಾನ್ಸ್ ಜಂಟಿ ಸಹಭಾಹಿತ್ವ

ಪ್ರೇಂಚ್ ಪ್ರೆಸಿಡೆಂಟ್ ಇಮ್ಯಾನುಯೆಲ್ ಮ್ಯಾಕ್ರೋನ್,  ಈ ಬಿಲ್ ಮೂಲಕ ಮಕ್ಕಳಲ್ಲಿ ಕೆಟ್ಟ ಭಾವನೆ ಹುಟ್ಟಿಸುವ ಶಿಕ್ಷಣಕ್ಕೆ ಬ್ರೇಕ್ ಬೀಳಲಿದೆ ಎಂದಿದ್ದಾರೆ.  ಪ್ಯಾರೀಸ್ ನಲ್ಲಿ ಉಗ್ರ ದಾಳಿಯ ನಂತರ ಆಡಳಿತ ಎಚ್ಚರಿಕೆ ಹೆಜ್ಜೆ ಇಟ್ಟಿದೆ.  ಪಾಕಿಸ್ತಾನ ಮತ್ತು ಟರ್ಕಿ ಪ್ರಾಯೋಜಿತ ಭಯೋತ್ಪಾದಕರ ನಿಯಂತ್ರಣ ಮಾಡಲೇಬೇಕಿದೆ ಎಂದಿದ್ದಾರೆ.

ಮನೆ ಮತ್ತು ಮಸೀದಿಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಈ ಬಿಲ್ ನಿರ್ಬಂಧಿಸುತ್ತದೆ.  ರಾಷ್ಟ್ರ ವಿರೋಧಿ ಐಡಿಯಾಲಜಿಯನ್ನು ಮಕ್ಕಳಿಗೆ ತಲುಪಿಸುವುದಕ್ಕೆ ಈ ಬಿಲ್ ತಡೆಯಾಗಲಿದೆ ಎಂದು ಅಧ್ಯಕ್ಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಸೀದಿಯನ್ನು ಪ್ರಾರ್ಥನೆ ಮಾಡುವುದಕ್ಕೆ ನಿರ್ಮಾಣ ಮಾಡಿಕೊಂಡಿದ್ದು ಅವು ಆ ಕೆಲಸ ಮಾಡಿದರೆ ಸಾಕು. ಶಿಕ್ಷಣ ನೀಡುವ ಕೆಲಸವನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದಿದ್ದಾರೆ. 

click me!