
ಬೈರೂತ್(ಅ.23): ಲೆಬನಾನ್‌ನ ಬೈರೂತ್ ನಗರದ ಅಲ್ ಸಹೇಲ್ ಆಸ್ಪತ್ರೆ ಕೆಳಗೆ ಹಿಜ್ಜುಲ್ಲಾ ಸಂಗ್ರಹಿಸಿಟ್ಟಿದ್ದ 4200 ಕೋಟಿ ರು. ಮೌಲ್ಯದ ನಗ, ನಗದು ಮತ್ತು ಚಿನ್ನ ಸಂಗ್ರಹ ಪತ್ತೆ ಆಗಿದೆ. ಇದನ್ನು ತನ್ನ ಕಾರ್ಯಾಚರಣೆಗಾಗಿ ಹಿಜ್ಜುಲ್ಲಾ ಉಗ್ರರು ಸಂಗ್ರಹಿಸಿಟ್ಟಿದ್ದರು ಎಂದು ಇಸ್ರೇಲ್ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನೆಯ ವಕ್ತಾರ ಡೇನಿಯಲ್ ಹಗರಿ, 'ಬೈರೂತ್‌ನ ಆಸ್ಪತ್ರೆಯ ತಳಭಾಗದಲ್ಲಿ ನಿರ್ಮಿಸಿರುವ ಸುರಂಗದಲ್ಲಿ ಹಿಜ್ಜುಲ್ಲಾ ಉಗ್ರರು ಸಂಗ್ರಹಿಸಿದ್ದ ಭಾರೀ ಪ್ರಮಾಣದ ನಗದು ಮತ್ತು ಚಿನ್ನದ ಕುರಿತ ರಹಸ್ಯ ಮಾಹಿತಿಯನ್ನು ಇದೀಗ ಬಹಿರಂಗಪಡಿಸುತ್ತಿದ್ದೇವೆ. ಇದನ್ನು ಕೆಲ ದಿನಗಳ ಹಿಂದೆ ಹತನಾದ ಹಿಟ್ಟುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸಂಗ್ರಹಿಸಿ ಇಟ್ಟಿದ್ದ. ಆದರೆ ಈ ಮಾಹಿತಿ ಸಿಕ್ಕ ಹೊರತಾಗಿಯೂ ನಾವಿನ್ನೂ ಅದರ ಮೇಲೆ ದಾಳಿ ನಡೆಸಿಲ್ಲ. ಇದನ್ನು ಹೊರತೆಗೆದು ಲೆಬನಾನ್‌ನ ಪುನರ್ ನಿರ್ಮಾಣಕ್ಕೆ ಬಳಸಬಹುದಾಗಿದೆ' ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ಪ್ರಧಾನಿ ಮೋದಿ ಮತ್ತೆ ಶಾಂತಿ ಮಂತ್ರ: ಉಕ್ರೇನ್ ಬಿಕ್ಕಟ್ಟು ಇತ್ಯರ್ಥಕ್ಕೆ ಭಾರತದಿಂದ ಎಲ್ಲ ನೆರವು
ಈ ನಡುವೆ ಇಸ್ರೇಲಿ ಸೇನಾಪಡೆಗಳು ಸಿರಿಯಾದಲ್ಲಿರುವ ಹಿಜ್ಜುಲ್ಲಾಗಳಿಗೆ ಹಣಕಾಸು ನೆರವಿನ ಕೇಂದ್ರ ಸ್ಥಾನವೆಂದು ಪರಿಗಣಿಸಲಾದ ಯುನಿಟ್ 4400 ಎಂಬ ಕೇಂದ್ರದ ಮೇಲೂ ಸೋಮವಾರ ದಾಳಿ ನಡೆಸಿವೆ. ಈ ಮೂಲಕ ಇರಾನ್‌ನಿಂದ ಹಿಜ್ಜುಲ್ಲಾಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು ಎಂದು ಇಸ್ರೇಲ್ ಆರೋಪಿಸಿದೆ.
ಸದ್ಯಕ್ಕೆ ಹಮಾಸ್‌ಗೆ ಹೊಸ ಬಾಸ್ ಇಲ್ಲ
ಜೆರುಸಲೆಂ: ತನ್ನ ನಾಯಕರಾದ ಇಸ್ಲಾಯಿಲ್ ಹನಿಯೇ ಮತ್ತು ಯಾಹ್ಯಾ ಸಿನ್ವರ್ ಹತ್ಯೆಯಿಂದ ತತ್ತರಿಸಿರುವ ಪ್ಯಾಲೆಸ್ತೀನ್ ಮೂಲದ ಹಮಾಸ್ ಉಗ್ರ ಸಂಘಟನೆ, ಸದ್ಯಕ್ಕೆ ಸಂಘಟನೆಗೆ ಯಾವುದೇ ಮುಖ್ಯಸ್ಥರನ್ನು ನೇಮಕ ಮಾಡದೇ ಇರಲು ನಿರ್ಧರಿಸಿದೆ. ಸದ್ಯಕ್ಕೆ ದೋಹಾ ಮೂಲದ ಐವರು ಸದಸ್ಯರ ಆಡಳಿತ ಸಮಿತಿಯೇ ಸಂಘಟನೆಯನ್ನು ಮುನ್ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ