
ನವದೆಹಲಿ (ಫೆ.10): ಅಮೆರಿಕದ ನ್ಯೂಜೆರ್ಸಿಯಿಂದ (New Jersey ) ಲಂಡನ್‌ಗೆ (London) ತೆರಳುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ. ಪ್ರಕರಣದ ಆರೋಪಿಯನ್ನು ಬ್ರಿಟನ್‌ನಲ್ಲಿ ಬಂಧಿಸಲಾಗಿದ್ದು, ನಂತರ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ದಿ ಸನ್ (The Sun) ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಇತರ ಪ್ರಯಾಣಿಕರು ಮಲಗಿದ್ದರು ಎಂದು ಹೇಳಲಾಗಿದೆ. ಈ ಘಟನೆ ಯುನೈಟೆಡ್ ಏರ್‌ಲೈನ್ಸ್ (United Airlines) ವಿಮಾನದಲ್ಲಿ ಕಳೆದ ಸೋಮವಾರ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಸಂತ್ರಸ್ತ ಮಹಿಳೆ ಏರ್‌ಲೈನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನಯಾನ ಸಿಬ್ಬಂದಿ ಇಂಗ್ಲೆಂಡ್ ನ ಪೊಲೀಸರಿಗೆ (UK Police) ಮಾಹಿತಿ ನೀಡಿದರು. ನ್ಯೂಜೆರ್ಸಿಯಿಂದ ಲಂಡನ್‌ಗೆ ನೇರ ವಿಮಾನಯಾನ ಅಂದಾಜು 7 ಗಂಟೆಯದ್ದಾಗಿದೆ.
ವಿಮಾನವು ಇಂಗ್ಲೆಂಡ್ ನ ಹೀಥ್ರೂ (Heathrow Airport)ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಆಗಮಿಸಿದ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ರೇಪ್ ಕೌನ್ಸೆಲಿಂಗ್ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅಧಿಕಾರಿಗಳು ವಿಮಾನದ ವಿಧಿವಿಜ್ಞಾನ ಪರೀಕ್ಷೆಯನ್ನೂ ನಡೆಸಿದ್ದು, ಸಂತ್ರಸ್ಥ ಮಹಿಳೆ ಹಾಗೂ ಅರೋಪಿ ಇಬ್ಬರ ವಯಸ್ಸೂ 40 ಎಂದು ಹೇಳಲಾಗಿದೆ.
ಹಿಜಾಬ್ ವಿವಾದ, ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ರೇಣುಕಾಚಾರ್ಯ
"ಇತರರು ಮಲಗಿದ್ದ ವೇಳೆ ವಿಮಾನದಲ್ಲಿಯೇ ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ವಿಚಲಿತಗೊಂಡ ಮಹಿಳೆ ಕ್ಯಾಬಿನ್ ಸಿಬ್ಬಂದಿಗೆ ಇದರ ಮಾಹಿತಿ ನೀಡಿದ್ದಾಳೆ. ಇನ್ನು ಬ್ಯಾಬಿನ್ ಸಿಬ್ಬಂದಿಗಳು ಇಂಗ್ಲೆಂಡ್ ಪೊಲೀಸರಿಗೆ ಇದರ ಮಾಹಿತಿ ನೀಡಿದ್ದಾರೆ. ವಿಮಾನವು ಹೀಥ್ರೂ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರೋಪಿಯನ್ನು ಬಂಧನ ಮಾಡಲಾಗಿತ್ತು. ಇಬ್ಬರೂ ಬ್ರಿಟನ್ ನಿವಾಸಿಯಾಗಿದ್ದರೂ ಈ ಮೊದಲೇ ಪರಿಚಿತರಾಗಿರಲಿಲ್ಲ. ಆದರೆ ವಿಮಾನ ಹಾರಾಟಕ್ಕೂ ಮುನ್ನ ಹಾಗೂ ವಿಮಾನ ಪ್ರಯಾಣದ ವೇಳೆ ಪರಸ್ಪರ ಮಾತನಾಡುವುದನ್ನು ಇತರ ಪ್ರಯಾಣಿಕರು ಕಂಡಿದ್ದಾರೆ. ವಿಮಾನ ಪ್ರಯಾಣ ಮಾಡುವ ಮುನ್ನ ವಿಶ್ರಾಂತಿ ಸ್ಥಳದಲ್ಲಿಯೇ ಜೊತೆಯಲ್ಲಿಯೇ ಮದ್ಯಪಾನ ಮಾಡಿದ್ದರು ಎಂದೂ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿದ ಖ್ಯಾತ ಗಾಯಕ ಅರೆಸ್ಟ್!
ವಿಮಾನದ ಬ್ಯುಸಿನೆಸ್ ಕ್ಲಾಸ್ ನ ಎರಡು ಭಿನ್ನ ಸಾಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬ್ರಿಟನ್ ಪೊಲೀಸರು ಬಂಧನವನ್ನು ದೃಢಪಡಿಸಿದ್ದು, ಪ್ರಕರಣದಲ್ಲಿ ಇನ್ನೂ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ವಿಮಾನದಲ್ಲಿ ಲೈಂಗಿಕ ದೌರ್ಜನ್ಯದ ಘಟನೆಗಳು ಅಪರೂಪವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. "ನಮ್ಮ ಸಿಬ್ಬಂದಿಗೆ ಈ ವಿಷಯ ತಿಳಿದ ತಕ್ಷಣವೇ ಇದನ್ನು ಪೊಲೀಸರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ತನಿಖೆಯ ಯಾವುದೇ ಹಂತದಲ್ಲೂ ಸಹಾಯ ಮಾಡಲು ನಾವು ಸಿದ್ದ" ಎಂದು ಯುನೈಟೆಡ್ ಏರ್ ಲೈನ್ಸ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ