
ವಾಶಿಂಗ್ಟನ್(ಜ.07) ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಹಲವು ಮೃತಪಟ್ಟಿದ್ದಾರೆ. ಏಕಾಏಕಿ ರಷ್ಯಾ ದಾಳಿ ಮಾಡಿದಾಗ ಭಾರತದ ವಿದ್ಯಾರ್ಥಿ ಮೃತಪಟ್ಟಿದ್ದ. 2022ರಲ್ಲಿ ಹಲವು ಅಮಾಯಕರು ಈ ದಾಳಿಯಲ್ಲಿಮೃತಪಟ್ಟಿದ್ದಾರೆ. ಮರಿಯಾಪೋಲ್ ಮೇಲೆ ರಷ್ಯಾ ದಾಳಿ ಮಾಡಿದಾಗ ಹಲವು ಕುಟುಂಬಗಳು ಪಲಾಯನ ಮಾಡಿತ್ತು. ಆದರೆ ಈ ಹೀಗೆ ಪಲಾಯನ ಮಾಡಿದ ಕುಟುಂಬದಲ್ಲಿ ಒಬ್ಬ ಇರಲಿಲ್ಲ. ಪಲಾಯನ ಮಾಡಿದ ಕೆಲ ಹೊತ್ತಲ್ಲೇ ಮನೆ ಸೇರಿದಂತೆ ಎಲ್ಲವೂ ನಾಶವಾಗಿತ್ತು. ಈ ದಾಳಿಯಲ್ಲಿ ಕುಟುಂಬ ಮಸ್ಸಿಂಗ್ ಯುವಕ ಕೂಡ ಮೃತಪಟ್ಟಿರುವುದಾಗಿ ಉಕ್ರೇನ್ ಹೇಳಿತ್ತು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಇದೀಗ ತಮ್ಮ ಪುತ್ರನ ಫೋಟೋ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ವೇಳೆ ಪುತ್ರ ಜೀವಂತವಾಗಿದ್ದಾನೆ ಅನ್ನೋದು ಪತ್ತೆಯಾಗಿದೆ. ಇದೀಗ ಕುಟುಂಬ ಮಗನನ್ನು ಮರಳಿ ತಮ್ಮ ಜೊತೆ ಕರೆತರಲು ಉಕ್ರೇನ್‌ಗೆ ತೆರಳಿದೆ.
ಫೆಬ್ರವರಿ 2022ರಲ್ಲಿ ಮರಿಯಾಪೋಲ್ ಮೇಲೆ ರಷ್ಯಾ ದಾಳಿ ಮಾಡಿತ್ತು. ಉಕ್ರೇನ್ ಸೇನೆ ಹೆಮ್ಮೆಟ್ಟಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ದಾಳಿ ಆರಂಭಗೊಳ್ಳುತ್ತಿದ್ದಂತೆ ಇಲ್ಲಿ ನಿವಾಸಿಗಳು ಸ್ಥಳ ಖಾಲಿ ಮಾಡಿದ್ದರು. ಆದರೆ ಬೈಲೆಟೆಸ್ಕಿ ಕುಟುಂಬ ಮರಿಯಾಪೋಲ್‌ನಿಂದ ಪಲಾಯನ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿತ್ತು. 6 ಮಕ್ಕಳ ಪೈಕಿ ಒಬ್ಬ ಮಾತ್ರ ಹೊರಗಡೆ ಹೋಗಿ ವಾಪಸ್ ಬಂದಿರಲಿಲ್ಲ. ಹೀಗಾಗಿ ಆತನಿಗಾಗಿ ಕಾಯುತ್ತಿದ್ದ ಕುಟುಂಬ ಸೇನೆಯ ಆದೇಶದ ಪ್ರಕಾರ ಸ್ಥಳ ಖಾಲಿ ಮಾಡಬೇಕಾಯಿತು.
ಬೈಲೆಟೆಸ್ಕಿ ಕುಟುಂಬ ಎಷ್ಟು ಕಾದರೂ ಮರಿಯಾಪೋಲ್ ನಗರದಲ್ಲಿ ಪ್ರತಿಭಟನೆ ಸಭೆಗೆ ತೆರಳಿದ್ದ ಮಗ ಮರಳಲಿಲ್ಲ. ಇತ್ತ ಅನಿವಾರ್ಯವಾಗಿ ಇತರ ಸದಸ್ಯರು ನೇರವಾಗಿ ಅಮೆರಿಕಾಗೆ ಪಲಾಯನ ಮಾಡಿದ್ದಾರೆ. ಕುಟುಂಬ ಮರಿಯಾಪೋಲ್‌ನಿಂದ ಹೊರಡುತ್ತಿದ್ದಂತೆ ಎಲ್ಲಾ ಕಡೆ ದಾಳಿಯಾಗಿದೆ. ಯಾರೆಲ್ಲಾ ಮರಿಯಾಪೋಲ್‌ನಲ್ಲಿ ಉಳಿದುಕೊಂಡಿದ್ದರೋ, ಅವರೆಲ್ಲಾ ಬಹುತೇಕ ಮೃತಪಟ್ಟಿದ್ದರು. ಈ ಪೈಕಿ ಬೈಲೆಟೆಸ್ಕಿ ಕುಟುಂಬದ ಪುತ್ರನೂ ಸೇರಿದ್ದ.
ಭಾರವಾದ ಮನಸ್ಸಿನೊಂದಿಗೆ ಕುಟುಂಬ ಅಮೆರಿಕದಲ್ಲಿ ಬಂದು ನೆಲೆಸಿತ್ತು. ಆದರೆ ಪುತ್ರನ ಕೊರಗು ಮಾತ್ರ ಕಾಡುತ್ತಲೇ ಇತ್ತು. ಹೀಗಿರುವಾಗ ಬರೋಬ್ಬರಿ 2 ವರ್ಷಗಳ ಬಳಿಕ ಸುದ್ದಿ ಪತ್ರಿ ನೋಡುತ್ತಿರುವಾಗ ಅಚ್ಚರಿಯಾಗಿದೆ. ಕಾರಣ ರಷ್ಯಾ ಬರೋಬ್ಬರಿ 2 ವರ್ಷಗಳ ಬಳಿಕ ಉಕ್ರೇನ್‌ನಿಂದ ಅರೆಸ್ಟ್ ಮಾಡಿದ್ದ ಸೈನಿಕರು ಸೇರಿದಂತೆ ನಾಗರೀಕರನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಮಾಡಿದವರ ಫೋಟೋಲ್ಲಿ ಬೈಲೆಟೆಸ್ಕಿ ಕುಟುಂಬದ ಪುತ್ರನ ಫೋಟೋ ಕೂಡ ಇತ್ತು. ಈ ಫೋಟೋ ನೋಡಿ ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಉಕ್ರೇನ್ ಸರ್ಕಾರವನ್ನು ಸಂಪರ್ಕಿಸಿರುವ ಕುಟುಂಬ ಮಗನನ್ನು ಅಮೆರಿಕೆ ಕರೆತರಲು ಪ್ರಯತ್ನಿಸಿದ್ದಾರೆ.
ಅಷ್ಟಕ್ಕೂ ಮೃತಪಟ್ಟ ಮಗ ಬದುಕಿದ್ದು ಹೇಗೆ?
ಮರಿಯಾಪೋಲ್‌ನಲ್ಲಿದ್ದ ಬೈಲೆಟೆಸ್ಕಿ ಕುಟುಂಬದ ಪುತ್ರನನ್ನು ರಷ್ಯಾ ಸೇನೆ ಬಂಧಿಸಿತ್ತು. ನಾಗರೀಕರನ್ನು ಉಳಿಸಲು ಪ್ರಯತ್ನಿಸಿದ, ರಷ್ಯಾ ಸೇನಾ ಕಾರ್ಯಾಚರಣೆಗೆ ಅಡ್ಡಪಡಿಸಿದ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ರಷ್ಯಾ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇತ್ತ ಮರಿಯಾಪೋಲ್‌ನಲ್ಲಿ ಭೀಕರ ದಾಳಿ ನಡೆಸಿ ಸರ್ವನಾಶ ಮಾಡಿತ್ತು. ಈ ದಾಳಿಯಲ್ಲಿ ಎಲ್ಲಾ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಕೆಲವರನ್ನು ರಷ್ಯಾ ಬಂಧಿಸಿತ್ತು. ಇದೀಗ ಕುಟುಂಬ ಉಕ್ರೇನ್‌ಗೆ ತೆರಳಿದೆ. ಮಗನನ್ನು ಉಕ್ರೇನ್‌ನಿಂದ ಅಮೆರಿಕಾಗೆ ಕರೆತರಲು ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ