Emotional video: ಕಷ್ಟದ ನಡುವೆಯೂ ಉದಾರತೆ ತೋರಿದ ಕುಟುಂಬ..

By Suvarna NewsFirst Published Dec 30, 2021, 12:54 PM IST
Highlights
  • ತಮ್ಮ ಕಷ್ಟದ ನಡುವೆಯೂ ಅಪರಿಚಿತನ ಹೊಟ್ಟೆ ತುಂಬಿಸಲು ಮುಂದಾದ ಕುಟುಂಬ
  • ಪರ್ಸ್‌ ಮರೆತು ಬಂದವನಿಗೆ 20 ಡಾಲರ್ ನೀಡಿದ ಮಹಿಳೆ
  • ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದ ಮಗು

(ಡಿ.30): ಇಂದು ಇಂಟರ್‌ನೆಟ್‌ನಲ್ಲಿ ಮತ್ತೊಬ್ಬರಿಗೆ ಸ್ಫೂರ್ತಿಯಾಗುವ, ದಯೆ, ಕರುಣೆ, ಮಾನವೀಯತೆ ಮೆರೆದಂತಹ ಸುದ್ದಿಗಳಿಗೆ ಯಾವುದೇ ಕೊರತೆ ಇಲ್ಲ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ಪ್ರಾಣಿಗಳ ವೀಡಿಯೊಗಳಿಂದ ಹಿಡಿದು ಮುದ್ದಾಗಿ ಕೆಲಸಗಳನ್ನು ಮಾಡುವ ಮಕ್ಕಳವರೆಗೂ ತರಹೇವಾರಿ  ವೀಡಿಯೊಗಳು ನಮ್ಮನ್ನು ನಗಿಸುತ್ತವೆ. ಸೆಳೆಯುತ್ತವೆ. ಆದರೆ ಈಗ ನಾವು ನಿಮಗೆ ಹೇಳ ಹೊರಟಿರುವುದು ಅಪರಿಚಿತರೊಬ್ಬರು ಕರುಣೆ ಹಾಗೂ ದಯೆ ತೋರಿದ ವಿಡಿಯೋ ಬಗ್ಗೆ. ಇನ್ಸ್ಟಾಗ್ರಾಮ್‌ನ (Instagram) ನಲ್ಲಿ ಡಿಲೈಟ್‌ಫುಲ್‌ನೆಸ್‌( @delightfulnews) ಎಂಬ ಖಾತೆಯಿಂದ ಈ ವಿಡಿಯೋ  ಅಪ್‌ಲೋಡ್  ಆಗಿದೆ. 

ಶಾಪಿಂಗ್‌ ಮಾಲ್‌ವೊಂದರಲ್ಲಿ ಒಬ್ಬ ವ್ಯಕ್ತಿಯೊಬ್ಬರು ಅಲ್ಲಿದ್ದ ಅಪರಿಚಿತ  ಕುಟುಂಬವೊಂದರ ಬಳಿ ತಾವು ಪರ್ಸ್‌ ಮರೆತು ಬಂದಿರುವುದರಿಂದ ತಮಗೆ ಮಧ್ಯಾಹ್ನದ ಊಟ ನೀಡಬಹುದೇ ಎಂದು ಕೇಳುತ್ತಾರೆ. ಈ ವೇಳೆ ಪ್ರತಿಕ್ರಿಯಿಸುವ ಮಹಿಳೆ ಖಂಡಿತ ನೀಡಬಹುದು. ಅದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಾಳೆ. ಬಳಿಕ ಆತನಿಗೆ 20 ಡಾಲರ್ ಹಣವನ್ನು ನೀಡುತ್ತಾಳೆ.   ನಂತರ ಆ ವ್ಯಕ್ತಿ ಈ ಕುಟುಂಬದ ಉದಾರತೆಗೆ ಕರಗಿ  ಆತನೇ ಅವರಿಗೆ 500 ಡಾಲರ್‌ ಹಣವನ್ನು ನೀಡುತ್ತಾರೆ. ಬಳಿಕ ಇಷ್ಟು ದಯೆ ತೋರಿದ ಕುಟುಂಬವನ್ನು ತಾನು ಇದುವರೆಗೆ ನೋಡಿಲ್ಲ ಎನ್ನುತ್ತಾನೆ. ಅಲ್ಲದೇ ಆ ಕುಟುಂಬಕ್ಕೆ ಕ್ರಿಸ್‌ಮಸ್ ಗಿಫ್ಟ್ ನೀಡಲು ಬಯಸುತ್ತಾನೆ. ಇದಕ್ಕೆ ಕಾರಣ ಆ ಕುಟುಂಬದ ಪರಿಸ್ಥಿತಿ ಹಾಗೂ ಆ ಸಂದರ್ಭದಲ್ಲೂ ಅವರ ಉದಾರತೆ.

 
 
 
 
 
 
 
 
 
 
 
 
 
 
 

Latest Videos

A post shared by Daily Good News! (@delightfulnews)

 

ಏಕೆಂದರೆ ವ್ಯಕ್ತಿಯೊಬ್ಬರಿಗೆ ಮಧ್ಯಾಹ್ನದ ಈ ಊಟ ಪಡೆಯುವುದಕ್ಕಾಗಿ ಹಣ ಕೊಟ್ಟ ಕುಟುಂಬಕ್ಕೂ ಕಷ್ಟವಿತ್ತು. ಈ ಕುಟುಂಬದ ಮಹಿಳೆಯ ಮಗಳು ವಿರಳವಾದ ಮೆದುಳಿನ ಸಮಸ್ಯೆ ಹಾಗೂ ಸೆರೆಬ್ರಲ್ ಪಾಲ್ಸಿ (cerebral palsy) ಸಮಸ್ಯೆಯಿಂದ ಬಳಲುತ್ತಿದ್ದಳು.  ಆದಾಗ್ಯೂ ಅವರು ತಮ್ಮ ಕಷ್ಟವನ್ನು ಮರೆತು ಮತ್ತೊಬ್ಬನಿಗೆ ಊಟಕ್ಕಾಗಿ ಹಣ ನೀಡಲು ಮನಸ್ಸು ಮಾಡಿದ್ದರು. ಈ ವಿಡಿಯೋವನ್ನು ಮೂಲತಃ @isaiahgarza ಹೆಸರಿನ ಇನ್ಸ್ಟಾಗ್ರಾಮ್‌ ಖಾತೆ ಇರುವವರು ನಿರ್ಮಿಸಿದ್ದಾರೆ.

ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದಾಗಿನಿಂದ, ಅದನ್ನು 5.8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  4 ಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಬಟನ್‌ ಒತ್ತಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದು, ತನಗೆ ಕಷ್ಟವಿದ್ದರೂ ಮತ್ತೊಬ್ಬರ ಬಗ್ಗೆ ಕರುಣೆ ತೋರಿದ ಈ ಪುಟ್ಟ ಕುಟುಂಬದ ಉದಾರತೆಗೆ ಶಹಭಾಷ್‌ ಅಂದಿದ್ದಾರೆ. ತುಂಬಾ ಇರುವವರಿಗಿಂದ ಯಾವಾಗಲೂ ಕಡಿಮೆ ಇರುವವರು ತಮ್ಮಲ್ಲಿ ಇದ್ದುದರಲ್ಲಿ ಸ್ವಲ್ಪವನ್ನು ಮತ್ತೊಬರಿಗೆ ಕೊಡಲು ಸದಾ ಬಯಸುತ್ತಾರೆ. ಈ ವಿಡಿಯೋ ನನ್ನನ್ನು ಅಳುವಂತೆ ಮಾಡುತ್ತಿದೆ ಎಂದೆಲ್ಲಾ  ವೀಕ್ಷಕಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

click me!