ಬಿಲಿಯನೇರ್‌ ಜಾರ್ಜ್ ಸೊರೋಸ್‌ ಮಾನವೀಯತೆಯನ್ನೇ ದ್ವೇಷಿಸುತ್ತಾರೆ: ಎಲಾನ್‌ ಮಸ್ಕ್‌ ಕಿಡಿ

Published : Nov 01, 2023, 11:48 AM IST
ಬಿಲಿಯನೇರ್‌ ಜಾರ್ಜ್ ಸೊರೋಸ್‌ ಮಾನವೀಯತೆಯನ್ನೇ ದ್ವೇಷಿಸುತ್ತಾರೆ: ಎಲಾನ್‌ ಮಸ್ಕ್‌ ಕಿಡಿ

ಸಾರಾಂಶ

ಜಾರ್ಜ್ ಸೊರೋಸ್‌ "ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ" ಎಂದು ಎಲಾನ್‌ ಮಸ್ಕ್‌ ಟೀಕಿಸಿದ್ದಾರೆ. ಹಾಗೂ ಸೊರೋಸ್‌ನ ಕ್ರಮಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. 

ವಾಷಿಂಗ್ಟನ್‌ ಡಿಸಿ (ನವೆಂಬರ್ 1, 2023): ಬಿಲಿಯನೇರ್ ಡೆಮೋಕ್ರಾಟ್ ದಾನಿ ಜಾರ್ಜ್ ಸೊರೋಸ್‌ ವಿರುದ್ಧ ಎಕ್ಸ್‌ ಮಾಲೀಕ ಹಾಗೂ ಸ್ಪೇಸ್‌ ಎಕ್ಸ್‌, ಟೆಸ್ಲಾ ಸ್ಥಾಪಕ ಎಲಾನ್‌ ಮಸ್ಕ್‌ ಕಿಡಿ ಕಾರಿದ್ದಾರೆ. ಮಂಗಳವಾರ ಬಿಡುಗಡೆಯಾದ ಜೋ ರೋಗನ್ ಅವರೊಂದಿಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ಮಾತನಾಡಿದ ಎಲಾನ್‌ ಮಸ್ಕ್‌ ಸೊರೋಸ್‌ ವಿರುದ್ಧ ಟೀಕೆ ಮಾಡಿದ್ದಾರೆ. 

ಜಾರ್ಜ್ ಸೊರೋಸ್‌ "ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ" ಎಂದು ಎಲಾನ್‌ ಮಸ್ಕ್‌ ಟೀಕಿಸಿದ್ದಾರೆ. ಹಾಗೂ ಸೊರೋಸ್‌ನ ಕ್ರಮಗಳ ಬಗ್ಗೆ ಎಲಾನ್‌ ಮಸ್ಕ್ ತನ್ನ ಕಳವಳ ವ್ಯಕ್ತಪಡಿಸಿದ್ದು, ಇದರಿಂದ ನಾಗರಿಕತೆಯ ಅಡಿಪಾಯವನ್ನು ನಾಶಪಡಿಸುತ್ತಿದೆ ಎಂದು ನಂಬಿರುವುದಾಗಿಯೂ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಹೇಳಿದ್ದಾರೆ. 

ಇದನ್ನು ಓದಿ: ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್‌ ಅಂಬಾನಿ!

ಇನ್ನೊಂದೆಡೆ, ಅಪರಾಧಗಳನ್ನು ವಿಚಾರಣೆ ಮಾಡಲು ನಿರಾಕರಿಸುವ ಜಿಲ್ಲಾ ವಕೀಲರನ್ನು  (District Attorneys) (ಡಿಎ) ಆಯ್ಕೆ ಮಾಡುವ ವಿಷಯವನ್ನು ಎಲಾನ್‌ ಮಸ್ಕ್‌ ಪ್ರಸ್ತಾಪಿಸಿದ್ದು, ಇದು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್‌ನಂತಹ ನಗರಗಳ ಮೇಲೆ ಪರಿಣಾಮ ಬೀರುವ ಸಮಸ್ಯೆ ಎಂದು ಅವರು ನೋಡುತ್ತಾರೆ. 

ಇನ್ನು, ಈ ಆತಂಕಗಳು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದೆಯೇ ಎಂದು ಎಲಾನ್‌ ಮಸ್ಕ್‌ ಅವರನ್ನು ಪ್ರಶ್ನೆ ಮಾಡಿದ್ದು, ಅದಕ್ಕೆ ಅವರು ಜಾರ್ಜ್‌ ಸೊರೋಸ್ ಇತರ ದೇಶಗಳಲ್ಲಿ ಸಹ ಇದೇ ರೀತಿಯ ಬದಲಾವಣೆಗಳನ್ನು ಪ್ರಭಾವಿಸುತ್ತಿದ್ದಾರೆ ಎಂದು ಅವರು ಸೂಚಿಸಿದ್ದಾರೆ. "ನನ್ನ ಅಭಿಪ್ರಾಯದಲ್ಲಿ, ಅವರು (ಸೊರೋಸ್) ಮೂಲಭೂತವಾಗಿ ಮಾನವೀಯತೆಯನ್ನು ದ್ವೇಷಿಸುತ್ತಾರೆ.. ಅವರು ನಾಗರಿಕತೆಯ ಚೌಕಟ್ಟನ್ನೇ ನಾಶಮಾಡುವ ಕೆಲಸ ಮಾಡುತ್ತಿದ್ದಾರೆ’’ ಎಂದೂ ಎಲಾನ್‌ ಮಸ್ಕ್ ಆರೋಪಿಸಿದರು.

ಇದನ್ನೂ ಓದಿ: ವಿಕಿಪೀಡಿಯಾ ತನ್ನ ಹೆಸರನ್ನು ಹೀಗೆ ಬದಲಾಯಿಸಿದ್ರೆ 1 ಬಿಲಿಯನ್ ಡಾಲರ್‌ ಕೊಡ್ತೀನಿ ಎಂದ ಎಲಾನ್‌ ಮಸ್ಕ್‌!

ಈ ಮಧ್ಯೆ, ಎಲಾನ್‌ ಮಸ್ಕ್ ಸೊರೋಸ್‌ನ ವಯಸ್ಸಿನ ಬಗ್ಗೆಯೂ ಪ್ರತಿಕ್ರಿಯಿದ್ದು, ಅವರು ಅನೇಕ ವರ್ಷಗಳಿಂದ ತಮ್ಮ ಕೆಲಸ ಮುಂದುವರಿಸಿದ್ದು, ಮತ್ತು ಸ್ವಲ್ಪ ವಯಸ್ಸಾದ ಲಕ್ಷಣಗಳನ್ನು ತೋರಿಸಿದ್ದಾರೆ. ಆದರೂ, ಜಾರ್ಜ್‌ ಸೊರೋಸ್‌ನ ಬುದ್ಧಿವಂತಿಕೆ ಮತ್ತು ಮಧ್ಯಸ್ಥಿಕೆಯಲ್ಲಿನ ಪರಾಕ್ರಮವನ್ನು ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಒಪ್ಪಿಕೊಂಡಿದ್ದಾರೆ.

ಅಲ್ಲದೆ, ಸೊರೋಸ್‌ನ ವಿಧಾನದ ಬಗ್ಗೆ ಮತ್ತಷ್ಟು ವಿವರಿಸಿದ ಎಲಾನ್‌ ಮಸ್ಕ್‌, ಜಾರ್ಜ್‌ ಸೊರೋಸ್‌ ಕಾನೂನನ್ನು ಅಗತ್ಯವಾಗಿ ಬದಲಾಯಿಸದೇ ಇರುವ ಪ್ರಾಮುಖ್ಯತೆಯನ್ನು ಗುರುತಿಸಿದರು. ಆದರೂ, ಅದನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬ ವಿಧಾನವನ್ನು ಬದಲಾಯಿಸಿದ್ದಾರೆ. ಕಾನೂನು ಜಾರಿಯ ಮೇಲೆ ಪ್ರಭಾವ ಬೀರುವ ಮೂಲಕ, ಕಾನೂನುಗಳನ್ನು ಸ್ವತಃ ಬದಲಾಯಿಸುವ ಅದೇ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಬಹುದು ಎಂದೂ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಕಿಪೀಡಿಯಾ ತನ್ನ ಹೆಸರನ್ನು ಹೀಗೆ ಬದಲಾಯಿಸಿದ್ರೆ 1 ಬಿಲಿಯನ್ ಡಾಲರ್‌ ಕೊಡ್ತೀನಿ ಎಂದ ಎಲಾನ್‌ ಮಸ್ಕ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ