ಅಕ್ರಮವಾಗಿ ನುಸುಳಿರುವ ಅನ್ಯಗ್ರಹ ಜೀವಿ ಮಸ್ಕ್, ಗಡೀಪಾರಿಗೆ ಟ್ರಂಪ್ ಆಪ್ತರ ಆಗ್ರಹ

Published : Jun 06, 2025, 01:26 PM IST
Elon Musk net worth

ಸಾರಾಂಶ

ಎಲಾನ್ ಮಸ್ಕ್ ಅಮೆರಿಕಕ್ಕೆ ಅಕ್ರಮವಾಗಿ ನುಸುಳಿರು ಏಲಿಯನ್. ಆತನ ತಕ್ಷಣವೇ ಗಡೀಪಾರು ಮಾಡಬೇಕು ಎಂದು ಡೋನಾಲ್ಡ್ ಆಪ್ತರು ಆಗ್ರಹಿಸಿದ್ದಾರೆ. ಮಸ್ಕ್ ಇಮಿಗ್ರೇಶನ್ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್(ಜೂ.06) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉದ್ಯಮಿ ಎಲಾನ್ ಮಸ್ಕ್ ನಡುವಿನ ಜಗಳ ತಾರಕಕ್ಕೇರಿದೆ. ಟ್ರಂಪ್ ಸರ್ಕಾರದಿಂದ ಹೊರಬಂದ ಬಳಿಕ ಎಲಾನ್ ಮಸ್ಕ್ ಇದೀಗ ಸತತವಾಗಿ ಟ್ರಂಪ್ ಹಾಗೂ ಟ್ರಂಪ್ ಸರ್ಕಾರದ ನೀತಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ತನ್ನಿಂದಲೇ ಟ್ರಂಪ್ ಗೆದ್ದಿದ್ದಾರೆ ಎಂದು ಮಸ್ಕ್ ಹೇಳಿದ್ದಾರೆ.ಈ ಆರೋಪ-ಪ್ರತ್ಯಾರೋಪಗಳ ನಡುವೆ ಇದೀಗ ಎಲಾನ್ ಮಸ್ಕ್ ಸಂಕಷ್ಟ ತೀವ್ರಗೊಂಡಿದೆ. ಎಲಾನ್ ಮಸ್ಕ್ ಇಮಿಗ್ರೇಶನ್ ದಾಖಲೆ ಕುರಿತು ಡೋನಾಲ್ಡ್ ಟ್ರಂಪ್ ಆಪ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಎಲಾನ್ ಮಸ್ಕ್ ಅಕ್ರಮವಾಗಿ ಅಮೆರಿಕ ನುಸುಳಿದ ಅನ್ಯಗ್ರಹ ಜೀವಿ, ತಕ್ಷಣವೇ ಎಲಾನ್ ಮಸ್ಕ್ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಯಾಗಿ ಬಂದು ಸಿಟಿಜನ್‌ಶಿಪ್ ಪಡೆದುಕೊಂಡ ಮಸ್ಕ್

ಡೋನಾಲ್ಡ್ ಟ್ರಂಪ್ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಇದೀಗ ಮಸ್ಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಲಾನ್ ಮಸ್ಕ್ ವಿರುದ್ದ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ. ಎಲಾನ್ ಮಸ್ ಅಮೆರಿಕದಲ್ಲಿ ಉಳಿಯಲು ಸರಿಯಾದ ದಾಖಲೆಗಳಿಲ್ಲ. ಈ ಉದ್ಯಮಿ ಇಮಿಗ್ರೇಶನ್ ಸಮಸ್ಯೆಯಲ್ಲಿದೆ. ಎಲಾನ್ ಮಸ್ಕ್ ಮೂಲತಃ ಸೌತ್ ಆಫ್ರಿಕಾ. ಆದರೆ ಸೌತ್ ಆಫ್ರಿಕಾದಿಂದ ಕೆನಡಾಗೆ ವಲಸೆ ಹೋಗಿ ಬಳಿಕ ಅಮೆರಿಕಗೆ ಎಂಟ್ರಿಕೊಟ್ಟಿದ್ದಾರೆ. ಅಮೆರಿಕದ ಪೆನ್ಸೆಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡ ಎಲಾನ್ ಮಸ್ಕ್ 2002ರಲ್ಲಿ ಅಮೆರಿಕ ನಾಗರೀಕತ್ವ ಪಡೆದಿದ್ದಾರೆ ಎಂದು ಉಲ್ಲೇಖವಾಗಿದೆ. ಎಲಾನ್ ಮಸ್ಕ್ ಸಿಟಿಜನ್‌ಶಿಪ್, ಇಮಿಗ್ರೇಶನ್ ದಾಖಲೆಗಳು ಸೂಕ್ತವಾಗಿಲ್ಲ ಎಂದು ಸ್ಟೀವ್ ಬ್ಯಾನನ್ ಹೇಳಿದ್ದಾರೆ.

130 ದಿನಗಳ ಬಳಿ DOGE ಜವಾಬ್ದಾರಿಯಿಂದ ಹೊರಬಂದ ಮಸ್ಕ್

ಅಮೆರಿಕದಲ್ಲಿ ಟ್ರಂಪ್ ಸರ್ಕಾರ ರಚನೆಯಾದ ಬಳಿಕ ಸರ್ಕಾರಿ ದಕ್ಷತಾ ವಿಭಾಗ (DOGE)ದ ಮುಖ್ಯಸ್ಥನಾಗಿ ಎಲಾನ್ ಮಸ್ಕ್ ನೇಮಕಗೊಂಡಿದ್ದರು. ಟ್ರಂಪ್ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಮಸ್ಕ್‌ಗೆ ಪ್ರಮುಖ ಜವಾಬ್ದಾರಿ ನೀಡಿದ್ದರು. 130 ದಿನಗಳ ಬಳಿಕ ತಮ್ಮ ಜವಾಬ್ದಾರಿಯಿಂದ ಎಲಾನ್ ಮಸ್ಕ್ ಹೊರಬಂದಿದ್ದರು. ಅಧಿಕಾರವದಿ ಮುಗಿದ ಕಾರಣ ಮಸ್ಕ್ ಟ್ರಂಪ್ ಜವಾಬ್ದಾರಿಯಿಂದ ವಿಮುಖರಾಗಿದ್ದರು. ಆದರೆ ಟ್ರಂಪ್ ಸರ್ಕಾರದಿಂದ ಹೊರಬಂದ ಬಳಿಕ ಟ್ರಂಪ್ ಸರ್ಕಾರದ ವಿರುದ್ಧವೇ ಮಸ್ಕ್ ಹೇಳಿಕೆ ನೀಡಿ ಇದೀಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟ್ರಂಪ್-ಮಸ್ಕ್ ಜಗಳ

ಬಹಿರಂಗವಾಗಿ ಟ್ರಂಪ್ ಹಾಗೂ ಮಸ್ಕ್ ಜಗಳ ಶುರುಮಾಡಿದ್ದಾರೆ. ಎಲಾನ್ ಮಸ್ಕ್ ತಮ್ಮದೇ ಮಾಲೀಕತ್ವದ ಎಕ್ಸ್(ಟ್ವಿಟರ್) ಮೂಲಕ ಟ್ರಂಪ್ ಹಾಗೂ ಟ್ರಂಪ್ ಸರ್ಕಾರದ ವಿರುದ್ದ ಸತತ ವಾಗ್ದಾಳಿ ನಡೆಸುತ್ತಿದ್ದರೆ. ಇತ್ತ ಟ್ರಂಪ್ ಕೂಡ ಮಸ್ಕ್ ಜೊತೆಗಿನ ಉತ್ತಮ ಸಂಬಂಧ ಮುಂದುವರಿಯುವುದಿಲ್ಲ ಎಂದಿದ್ದಾರೆ. ಇವರಿಬ್ಬರ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಮಸ್ಕ್ ದಾಖಲೆಗಳ ಕುರಿತು ಹಲವು ಪ್ರಶ್ನೆ ಎದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!