ಒಂದೇ ದಿನ ನೇಪಾಳ, ಟಿಬೆಟ್ ಮತ್ತು ಇಂಡೋನೇಷ್ಯಾ, ಜಪಾನ್‌ನಲ್ಲಿ ಭಾರೀ ಭೂಕಂಪನ!

Published : May 23, 2025, 11:47 AM IST
ಒಂದೇ ದಿನ ನೇಪಾಳ, ಟಿಬೆಟ್ ಮತ್ತು ಇಂಡೋನೇಷ್ಯಾ, ಜಪಾನ್‌ನಲ್ಲಿ ಭಾರೀ ಭೂಕಂಪನ!

ಸಾರಾಂಶ

ನೇಪಾಳದಲ್ಲಿ ಗುರುವಾರ-ಶುಕ್ರವಾರ ಮಧ್ಯರಾತ್ರಿ ೪.೩ ತೀವ್ರತೆಯ ಭೂಕಂಪ ಸಂಭವಿಸಿತು. ಟಿಬೆಟ್‌ನಲ್ಲೂ ಶುಕ್ರವಾರ ಬೆಳಿಗ್ಗೆ ೪.೨ ತೀವ್ರತೆಯ ಭೂಕಂಪ ದಾಖಲಾಯಿತು. ಇಂಡೋನೇಷ್ಯಾದಲ್ಲಿ ೫.೯ ತೀವ್ರತೆಯ ಭೂಕಂಪ ಅನುಭವಿಸಲಾಯಿತು. ಈ ಮೂರು ಭೂಕಂಪಗಳಿಂದಲೂ ಪ್ರಾಣಹಾನಿ ವರದಿಯಾಗಿಲ್ಲ.

ತಡರಾತ್ರಿ, ಭಾರತದ ನೆರೆ ದೇಶವಾದ ನೇಪಾಳದಲ್ಲಿ ಭೂಕಂಪನ ಸಂಭವಿಸಿದ್ದು, ಹಿಮಾಲಯದ ಮಡಿಲಿನಲ್ಲಿ ನಿದ್ರಿಸುತಿದ್ದ ಜನರು ಭಯದಿಂದ ಎದ್ದು ಮನೆಯಿಂದ ಹೊರಬಂದರು. ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ (01:33 ಗಂಟೆಗೆ) 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು  ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ. ಇದು 29.36 N ಅಕ್ಷಾಂಶ ಮತ್ತು 80.44 E ರೇಖಾಂಶದಲ್ಲಿ ನಡೆಯಿತು. ಈ ಭೂಕಂಪ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು,   ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ತೀವ್ರ ನಷ್ಟವಾಗಿಲ್ಲ ಎಂದು ತಿಳಿದುಬಂದಿದೆ. ಭಾರತದಲ್ಲೂ ಇದರ ಅನುಭವವಾಗಿ ಎಂದು ವರದಿಯಾಗಿದೆ.

ಟಿಬೆಟ್‌ ನಲ್ಲೂ ಭೂಕಂಪ

ಶುಕ್ರವಾರ ಬೆಳಿಗ್ಗೆ 9:27 ಕ್ಕೆ (IST) ಟಿಬೆಟ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪವು 29.19 N ಅಕ್ಷಾಂಶ ಮತ್ತು 87.06 E ರೇಖಾಂಶದಲ್ಲಿ ಸಂಭವಿಸಿದೆ ಎಂದು NCS ತಿಳಿಸಿದೆ. ಟಿಬೆಟ್ ನಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ ಮೂರನೇ ಭೂಕಂಪನ ಇದಾಗಿದೆ.

ಇಂಡೋನೇಷ್ಯಾದಲ್ಲೂ 6.0 ತೀವ್ರತೆ ಭೂಕಂಪ

ಇದೇ ಸಮಯದಲ್ಲಿ ಇಂಡೋನೇಷ್ಯಾದಲ್ಲೂ 6.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ತಿಳಿಸಿದೆ. ಇಂಡೋನೇಷ್ಯಾದ ಪಶ್ಚಿಮ ಬೆಂಗ್ಕುಲು ಪ್ರಾಂತ್ಯದಲ್ಲಿ ಸಂಭವಿಸಿದ್ದು, ಕೇಂದ್ರಬಿಂದು ಬೆಂಗ್ಕುಲು ನಗರದ ನೈಋತ್ಯಕ್ಕೆ 47 ಕಿ.ಮೀ ದೂರದಲ್ಲಿ, ಸಮುದ್ರತಳದಿಂದ 84 ಕಿ.ಮೀ ಆಳದಲ್ಲಿದೆ. 

 ಶುಕ್ರವಾರ ಜಕಾರ್ತಾ ಸಮಯ 02:52 ಕ್ಕೆ ಕಂಪನ ಸಂಭವಿಸಿದ್ದು, ಪ್ರಾಂತೀಯ ರಾಜಧಾನಿ ಬೆಂಗ್ಕುಲು ನಗರದಲ್ಲಿ ಸುಮಾರು 33 ಮನೆಗಳು ಮತ್ತು ಒಂದು ಕಟ್ಟಡಕ್ಕೆ ಹಾನಿಯಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ. ಆದಾಗ್ಯೂ, ಬೆಂಗ್ಕುಲು ಪ್ರಾಂತ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಡೀ ಪ್ರದೇಶದಲ್ಲಿ ಭೂಕಂಪದ ಕಂಪನ ಅನುಭವವಾಗಿದೆ, ಆದರೆ ಇಲ್ಲಿಯೂ ಕೂಡ ಯಾವುದೇ ತಕ್ಷಣದ ನಷ್ಟದ ಮಾಹಿತಿ ಲಭ್ಯವಿಲ್ಲ. ನೆರೆದೇಶಗಳಲ್ಲಿ ಈ ರೀತಿಯ ಭೂಕಂಪಗಳು ಸಂಭವಿಸುತ್ತಿರುವುದರಿಂದ, ಭದ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಸರಕಾರಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸಜ್ಜಾಗಿದೆ.

ಜಪಾನ್‌ನಲ್ಲೂ ಭೂಕಂಪ

ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಶುಕ್ರವಾರ ಮುಂಜಾನೆ ಜಪಾನ್‌ನಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ . ಸ್ಥಳೀಯ ಸಮಯ ಬೆಳಿಗ್ಗೆ 6.28 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಹೊಕ್ಕೈಡೋ ಕರಾವಳಿಯ ಬಳಿ 50 ಕಿಲೋಮೀಟರ್ (31 ಮೈಲುಗಳು) ಆಳದಲ್ಲಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!