ದುಬೈಯಲ್ಲಿ ಭಾರೀ ಮಳೆ: ಹೊಳೆಯಂತಾದ ರಸ್ತೆಗಳು, ಹಲವು ವಿಮಾನಗಳ ಹಾರಾಟ ರದ್ದು

By Kannadaprabha NewsFirst Published Nov 19, 2023, 11:39 AM IST
Highlights

ಯುನೈಟೆಡ್‌ ಅರಬ್‌ ಎಮಿರೇಟ್ಸ್ (ಯುಎಇ)ನ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದುಬೈ ನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್ (ಯುಎಇ)ನ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದುಬೈ ನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹೀಗಾಗಿ ಸಮುದ್ರ ತೀರ ಮತ್ತು ಇತರ ಪ್ರವಾಹ ಪೀಡಿತ ಪ್ರದೇಶಗಳ ಬಳಿ ಹೋಗದಂತೆ ಹಾಗೂ ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ಜನರಿಗೆ ಆಡಳಿತವು ಎಚ್ಚರಿಕೆ ನೀಡಿದೆ. ಯುಎಇ ಹವಮಾನ ಇಲಾಖೆಯು ಹಲವು ಪ್ರದೇಶಗಳಲ್ಲಿ ಯೆಲ್ಲೋ ಮತ್ತು ಆರೆಂಜ್‌ ಅಲರ್ಟ್‌ ಘೋಷಿಸಿದೆ.

ದುಬೈಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಹಾಗೂ ಇತರ ಸಮುಚ್ಛಯಗಳು ಜಲಾವೃತಗೊಂಡಿರುವ ಮತ್ತು ಕಾರುಗಳು ಬಹುತೇಕ ನೀರಿನಲ್ಲಿ ತೇಲುತ್ತಿರುವಂತಹ ದೃಶ್ಯಗಳ ಅನೇಕ ವಿಡಿಯೋ ಮತ್ತು ಫೋಟೋಗಳನ್ನು ಅಲ್ಲಿನ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯ ವಿಡಿಯೋವೊಂದರಲ್ಲಿ ದುಬೈನ ಜಲಾವೃತ ರಸ್ತೆಯಲ್ಲಿ ವ್ಯಕ್ತಿಯೋರ್ವ ದೋಣಿಯಲ್ಲಿ ಸಾಗುತ್ತಿರುವ ವಿಡಿಯೋ ವೈರಲ್‌ ಆಗಿದೆ.

Yesterday morning's heavy rain in Dubai, UAE wasn't natural; it was the successful result of a 2010 $11 million USD cloud seeding project by weather authorities, creating artificial rain in the deserts of Dubai and Abu Dhabi. 💦 Boom! Look at the technology! 🌧️🌍 pic.twitter.com/UnPGhdw0gp

— Mazi chiagoziem (@Mazichiagoziem)

Multiple Flights cancelled/delayed at Dubai intl. airport after heavy rain and thunderstorms.

🎥Arab_Storms pic.twitter.com/BVvuZQ62Cp

— FL360aero (@fl360aero)

 

ಅಹಮದಾಬಾದ್‌ನಲ್ಲಿ ಹೋಟೆಲ್‌ ರೂಂಗೆ 2 ಲಕ್ಷ!

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್‌ ಫೈನಲ್‌ ಪಂದ್ಯ ನಡೆಯಲಿದ್ದು, ಇದರ ಪರಿಣಾಮ ನಗರದ ಹೋಟೆಲ್‌ ಹಾಗೂ ವಿಮಾನ ದರ ಗಗನಕ್ಕೇರಿದೆ. ನಗರದಲ್ಲಿ ಕೆಲ ಫೈವ್‌ಸ್ಟಾರ್‌ ಹೋಟೆಲ್‌ಗಳ ಒಂದು ರಾತ್ರಿಯ ದರ ಬರೋಬ್ಬರಿ ₹2 ಲಕ್ಷಕ್ಕೂ ಹೆಚ್ಚಿದೆ. ಅಹಮದಾಬಾದ್‌ ಮಾತ್ರವಲ್ಲದೇ ಸಮೀಪದ ನಗರಗಳಲ್ಲೂ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಸ್ಟಾರ್‌ ಅಲ್ಲದ ಸಾಧಾರಣ ಹೋಟೆಗಳ ದರ ಕೂಡಾ ಒಂದು ರಾತ್ರಿಗೆ 20 ಸಾವಿರ ರು. ವರೆಗೆ ಹೆಚ್ಚಳವಾಗಿದೆ.

‘ದುಬೈ, ಆಸ್ಟ್ರೇಲಿಯಾ, ದ.ಆಫ್ರಿಕಾದಿಂದಲೂ ಅಭಿಮಾನಿಗಳು ಬರುತ್ತಾರೆ. ಸುಮಾರು 30ರಿಂದ 40 ಸಾವಿರ ಮಂದಿ ಹೊರಗಿನಿಂದ ಬರುವ ನಿರೀಕ್ಷೆಯಿದೆ. ಹೀಗಾಗಿ ದರ 5ರಿಂದ 7 ಪಟ್ಟು ಹೆಚ್ಚಳವಾಗಿದೆ’ ಎಂದು ಹೋಟೆಲ್‌ ಮಾಲಕರೊಬ್ಬರು ತಿಳಿಸಿದ್ದಾರೆ. ಇನ್ನು ನಗರಕ್ಕೆ ಆಗಮಿಸುವ ವಿಮಾನ ದರದಲ್ಲೂ ಭಾರೀ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸರಾಸರಿ 5000-6000 ಇರುವ ವಿಮಾನ ದರ ಶನಿವಾರಕ್ಕೆ ಬರೋಬ್ಬರಿ 25000ರಿಂದ 33000 ರು. ವರೆಗೂ ಇದೆ.
 

About Today at Burj Khalifa Rain Day and Cool Weather 🌆⛈️ pic.twitter.com/augzwLIVyY

— Ḿr Soн (@soh_khan5)

 

click me!