
ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಸಂಘರ್ಷ ಒಂದಿಲ್ಲೊಂದು ರೀತಿಯಲ್ಲಿ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಲೇ ಇವೆ. ಅಷ್ಟಕ್ಕೂ ಪ್ರತಿಯೊಂದು ದೇಶಗಳೂ ಒಂದಕ್ಕೊಂದು ಒಂದಲ್ಲ ಒಂದು ರೀತಿಯಲ್ಲಿ ಕನೆಕ್ಟ್ ಆಗಿಯೇ ಇವೆ. ಪರಸ್ಪರ ಒಂದಿಲ್ಲೊಂದು ಸಾಮಗ್ರಿಗಳಿಗೆ ಡಿಪೆಂಡ್ ಆಗಿಯೇ ಇವೆ. ಇದೇ ಕಾರಣಕ್ಕೆ ಬೇರೆ ದೇಶಗಳ ಮೇಲೂ ಹೊಡೆತ ಬೀಳುವುದು ಸರ್ವೇ ಸಾಮಾನ್ಯ. ಅದೇ ರೀತಿ ಇದೀಗ ಇರಾನ್ ಯುದ್ಧದಿಂದ ದುಬೈನಲ್ಲಿ ಆಹಾರ ಬಿಕ್ಕಟ್ಟು ಆರಂಭವಾಗಿದೆ. ಅಲ್ಲಿಂದ ಬಂದಿರುವ ವರದಿಯ ಪ್ರಕಾರ, ದುಬೈನಲ್ಲಿ ಕೇವಲ 8-10 ದಿನಗಳ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಮಾತ್ರ ಉಳಿದಿವೆ ಎನ್ನಲಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮತ್ತು ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಪರಿಣಾಮ ಆಹಾರ ಬಿಕ್ಕಟ್ಟು ತೀವ್ರವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಜನರು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಪ್ರಪಂಚದ ಕೆಲವು ದೇಶಗಳು ಈ ಬಿಕ್ಕಟ್ಟಿನಿಂದಾಗಿ ಆಹಾರದ ಪೂರೈಕೆಯಲ್ಲಿ ಕೊರತೆ ಅನುಭವಿಸುತ್ತಿದ್ದರೂ ದುಬೈನಲ್ಲಿ ಈ ಬಿಕ್ಕಟ್ಟು ವಿಶೇಷವಾಗಿ ತೀವ್ರವಾಗಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇನ್ನೊಂದು ವಾರಗಳಲ್ಲಿ ದುಬೈನಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಖಾಲಿಯಾಗುತ್ತವೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಇರಾನ್ ನಿರ್ಧಾರವು ಪ್ರದೇಶದಾದ್ಯಂತ ಹಡಗು ಮಾರ್ಗಗಳನ್ನು ನಿರ್ಬಂಧಿಸಿದೆ, ವ್ಯಾಪಾರವನ್ನು ಅಡ್ಡಿಪಡಿಸಿದೆ. ಕಡಲ ವ್ಯಾಪಾರವು ಸುಧಾರಿಸದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ತಜ್ಞರು ಹೇಳುತ್ತಾರೆ.
NBT ವರದಿಯ ಪ್ರಕಾರ, ವಿಶ್ಲೇಷಕ ಶಾನಕ ಅನ್ಸ್ಲೇಮ್ ಪೆರೆರಾ ಅವರು ಲಾಜಿಸ್ಟಿಕ್ಸ್ ಮುಖ್ಯಸ್ಥ ಸ್ಟೀಫನ್ ಪಾಲ್ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ದುಬೈ ಪ್ರಸ್ತುತ 8-10 ದಿನಗಳ ತಾಜಾ ಆಹಾರ ಸರಬರಾಜುಗಳನ್ನು ಹೊಂದಿದೆ. ಅಂದರೆ ಮಾರ್ಚ್ 7 ಅನ್ನು ಪರಿಗಣನೆಗೆ ತೆಗೆದುಕೊಂಡರೆ ಎಂಟು ದಿನಗಳ ಆಹಾರ ಮಾತ್ರ ಉಳಿದಿದೆ ಎಂದಿದ್ದಾರೆ. ಅವರು ತಮ್ಮ ಕಂಪನಿಯು ಮೇಲ್ವಿಚಾರಣೆ ಮಾಡುವ ಸರಬರಾಜು ಸರಪಳಿ ದತ್ತಾಂಶವನ್ನು ಆಧರಿಸಿ ಈ ಮಾಹಿತಿಯನ್ನು ಆಧರಿಸಿದ್ದಾರೆ. ಗಲ್ಫ್ ರಾಷ್ಟ್ರವು ತನ್ನ ಆಹಾರದ ಅಗತ್ಯಗಳಲ್ಲಿ 80-90 ಪ್ರತಿಶತವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಗಲ್ಫ್ ಸಹಕಾರ ಮಂಡಳಿಯ ಆಹಾರದ 70 ಪ್ರತಿಶತವು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ, ಇದು ಇಸ್ರೇಲಿ ಮತ್ತು ಯುಎಸ್ ದಾಳಿಯ ನಂತರ ಇರಾನ್ ನಿರ್ಬಂಧಿಸಿದ ಪ್ರಮುಖ ಹಡಗು ಕಾರಿಡಾರ್ ಆಗಿದೆ. ಸಮುದ್ರ ಮಾರ್ಗದ ಜೊತೆಗೆ, ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಹೋರಾಟವು ವಾಯು ಸರಕು ಸಾಗಣೆಯ ಮೇಲೂ ಪರಿಣಾಮ ಬೀರಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಯುಎಇ ಸರ್ಕಾರ ಮತ್ತು ಹಣಕಾಸು ಸಚಿವಾಲಯವು ದೇಶವು 4-6 ತಿಂಗಳ ಅಗತ್ಯ ವಸ್ತುಗಳ ಕಾರ್ಯತಂತ್ರದ ದಾಸ್ತಾನು ಹೊಂದಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದೆ. ಲುಲು ಗ್ರೂಪ್‌ನಂತಹ ಚಿಲ್ಲರೆ ವ್ಯಾಪಾರಿಗಳು ಸರಬರಾಜುಗಳನ್ನು ನಿರ್ವಹಿಸಲು ಭಾರತದಂತಹ ಇತರ ದೇಶಗಳಿಂದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳಲು ಚಾರ್ಟರ್ಡ್ ಕಾರ್ಗೋ ವಿಮಾನಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಒಂದರ್ಥದಲ್ಲಿ ಇವುಗಳಿಗೆ ಆಪತ್ಪಾಂಧವನಾಗಿ ಬಂದದ್ದು ಭಾರತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ