ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್' ಟ್ಯಾಂಕರ್‌ಗಳ ಮೇಲೆ ಡ್ರೋನ್ ದಾಳಿ: ಭಯಾನಕ ಸ್ಫೋಟ, ಸಿಬ್ಬಂದಿ ಕಿರುಚಾಟ!

Published : Nov 29, 2025, 08:54 PM IST
Drone Attack on Russias Shadow Fleet Tankers in Black Sea Ukraine Responsibility

ಸಾರಾಂಶ

Russian tanker attack Black Sea: ಕಪ್ಪು ಸಮುದ್ರದಲ್ಲಿ ರಷ್ಯಾದ 'ಶ್ಯಾಡೋ ಫ್ಲೀಟ್'ಗೆ ಸೇರಿದ 'ಕೈರೋಸ್' ಮತ್ತು 'ವಿರಾಟ್' ತೈಲ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಹೊಣೆ ಉಕ್ರೇನ್‌ ಹೊತ್ತುಕೊಂಡಿದ್ದು, ಇದು ರಷ್ಯಾದ ತೈಲ ರಫ್ತಿಗೆ ಗಮನಾರ್ಹ ಅಡ್ಡಿಯುಂಟುಮಾಡಿದೆ.

Russian tanker attack Black Sea: ರಷ್ಯಾದ ತೈಲ ಸಾಗಣೆ ಜೀವಾಳವಾಗಿರುವ 'ಶ್ಯಾಡೋ ಫ್ಲೀಟ್'ಗೆ ಸೇರಿದ ಎರಡು ಟ್ಯಾಂಕರ್‌ಗಳ ಮೇಲೆ ಶುಕ್ರವಾರ ತಡರಾತ್ರಿ (ನವೆಂಬರ್ 28, 2025) ಟರ್ಕಿಯ ಬಾಸ್ಫರಸ್ ಜಲಸಂಧಿಯ ಸಮೀಪ ಕಪ್ಪು ಸಮುದ್ರದಲ್ಲಿ ಭೀಕರ ಡ್ರೋನ್ ದಾಳಿ ನಡೆದಿದೆ. ಈ ದಾಳಿಯಿಂದ ಟ್ಯಾಂಕರ್‌ಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಸಿಬ್ಬಂದಿ 'ಮೇಡೇ, ಮೇಡೇ' ಎಂದು ಸಹಾಯಕ್ಕಾಗಿ ಕೂಗುವ ದೃಶ್ಯಗಳು ಮತ್ತು ಆಡಿಯೋಗಳು ಹೊರಬಿದ್ದಿವೆ.

ಡ್ರೋನ್ ದಾಳಿಯ ಸ್ಫೋಟ, 'ವಿರಾಟ್' ಹಡಗಿನ ಸಿಬ್ಬಂದಿ ಕೂಗು

ರಷ್ಯಾದ ಶ್ಯಾಡೋ ಫ್ಲೀಟ್‌ಗೆ ಸೇರಿದ 'ಕೈರೋಸ್' ಮತ್ತು 'ವಿರಾಟ್' ಹೆಸರಿನ ಎರಡು ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿದೆ. ಟ್ಯಾಂಕರ್ ಸಿಬ್ಬಂದಿಯೊಬ್ಬರು ಓಪನ್-ಫ್ರೀಕ್ವೆನ್ಸಿ ರೇಡಿಯೋದಲ್ಲಿ ವಿಪತ್ತಿನ ಕರೆ (ಡಿಸ್ಟ್ರೆಸ್ ಕಾಲ್) ನೀಡಿ, ಮಾನವರಹಿತ ಕಡಲ ಡ್ರೋನ್ ದಾಳಿಯ ಬಗ್ಗೆ ವರದಿ ಮಾಡಿದ್ದಾರೆ. ಲಭ್ಯವಾದ ವೀಡಿಯೊದಲ್ಲಿ, ಸಿಬ್ಬಂದಿ ಸದಸ್ಯರು 'ಇದು ವಿರಾಟ್. ಸಹಾಯ ಬೇಕು. ಡ್ರೋನ್ ದಾಳಿ. ಮೇಡೇ (Mayday)' ಎಂದು ಹೇಳುವುದು ಸ್ಪಷ್ಟವಾಗಿ ಕೇಳಿಬಂದಿದೆ.

ವಿರಾಟ್ ಟ್ಯಾಂಕರ್ ಮೇಲೆ ಎರಡನೇ ಬಾರಿಗೆ ದಾಳಿ:

ನವೆಂಬರ್ 29 ರ ಬೆಳಿಗ್ಗೆ ವಿರಾಟ್ ಟ್ಯಾಂಕರ್ ಮೇಲೆ ಎರಡನೇ ಬಾರಿಗೆ ದಾಳಿ ನಡೆಸಲಾಯಿತು ಎಂದು ಟರ್ಕಿಶ್ ಸಾರಿಗೆ ಸಚಿವಾಲಯ 'X' ನಲ್ಲಿ ತಿಳಿಸಿದೆ. ಇದು ಕಪ್ಪು ಸಮುದ್ರದ ಕರಾವಳಿಯಿಂದ ಸುಮಾರು 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಂಭವಿಸಿದೆ.

 

ದಾಳಿಯ ಹೊಣೆ ಹೊತ್ತ ಉಕ್ರೈನ್:

ಟರ್ಕಿ ಆರಂಭದಲ್ಲಿ ಕ್ಷಿಪಣಿ, ಡ್ರೋನ್ ಅಥವಾ ಇತರ ನೌಕಾ ವಾಹನದ ಬಾಹ್ಯ ದಾಳಿಯ ಸಾಧ್ಯತೆಯನ್ನು ಶಂಕಿಸಿತ್ತು. ಆದರೆ, ಈ ದಾಳಿಯ ಹೊಣೆಯನ್ನು ಉಕ್ರೇನ್ ಹೊತ್ತುಕೊಂಡಿದೆ. ಉಕ್ರೇನ್‌ನ ಭದ್ರತಾ ಸೇವೆಯ (SBU) ಅಧಿಕಾರಿಯೊಬ್ಬರ ಪ್ರಕಾರ, SBU ಮತ್ತು ಉಕ್ರೇನಿಯನ್ ನೌಕಾಪಡೆ ಜಂಟಿ ಕಾರ್ಯಾಚರಣೆ ನಡೆಸಿ, ಆಧುನಿಕ ಸಮುದ್ರ ಬೇಬಿ ನೌಕಾ ಡ್ರೋನ್‌ಗಳನ್ನು ಬಳಸಿ ರಷ್ಯಾದ ಹಡಗುಗಳನ್ನು ಯಶಸ್ವಿಯಾಗಿ ಗುರಿಯಾಗಿಸಿವೆ. ದಾಳಿಯ ವೀಡಿಯೊದಲ್ಲಿ ಎರಡೂ ಟ್ಯಾಂಕರ್‌ಗಳು ಗಂಭೀರ ಹಾನಿಗೊಳಗಾಗಿರುವುದು ಕಾಣಿಸುತ್ತದೆ, ಇದು ರಷ್ಯಾದ ತೈಲ ಸಾಗಣೆಗೆ ಗಮನಾರ್ಹ ಹೊಡೆತ ನೀಡಿದೆ ಎಂದು ಅವರು ಹೇಳಿದ್ದಾರೆ.

ದಾಳಿಯ ನಂತರ, ವಿರಾಟ್ ಟ್ಯಾಂಕರ್‌ಗೆ ಅಲ್ಪ ಹಾನಿಯಾಗಿದೆ ಮತ್ತು ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಈ ದಾಳಿಯು, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಉಕ್ರೇನ್ ಮೇಲೆ ಅಮೆರಿಕ ತೀವ್ರ ಒತ್ತಡ ಹೇರುತ್ತಿರುವ ನಿರ್ಣಾಯಕ ಸಮಯದಲ್ಲಿ ಸಂಭವಿಸಿದೆ.

ಶ್ಯಾಡೋ ಫ್ಲೀಟ್ ಎಂದರೇನು?

ಶ್ಯಾಡೋ ಫ್ಲೀಟ್ ಎಂದರೆ ರಷ್ಯಾವು ಪಾಶ್ಚಿಮಾತ್ಯ ದೇಶಗಳ ಕಟ್ಟುನಿಟ್ಟಾದ ನಿರ್ಬಂಧಗಳನ್ನು ತಪ್ಪಿಸಲು ಮತ್ತು ತನ್ನ ತೈಲ ರಫ್ತುಗಳನ್ನು ಮುಂದುವರಿಸಲು ಬಳಸುತ್ತಿರುವ ಗುಪ್ತ ನೌಕಾಪಡೆ. ರಷ್ಯಾದ ಆರ್ಥಿಕತೆಗೆ ಇದು ಜೀವನಾಡಿಯಾಗಿದೆ. ಈ ಹಡಗುಗಳು ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಲು ತಮ್ಮ AIS ಟ್ರಾನ್ಸ್‌ಪಾಂಡರ್‌ಗಳನ್ನು ಆಫ್ ಮಾಡುತ್ತವೆ, ಇದರಿಂದಾಗಿ ಅವು ರಾಡಾರ್‌ನಿಂದ ಮರೆಯಾಗುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!