ಅಮೆರಿಕದಲ್ಲಿ ಬಾಹ್ಯಾಕಾಶ ಸೇನೆ: ಹೇಗೆ ಸೈನಿಕರ ರವಾನೆ?

By Suvarna NewsFirst Published Dec 22, 2019, 1:37 PM IST
Highlights

ಜಗತ್ತಿನ ಅತ್ಯಂತ ಬಲಷ್ಠ ಸೇನಾಪಡೆ ಹೊಂದಿರುವ ಅಮೆರಿಕ| ತನ್ನ ಸೇನಾಪಡೆಗೆ ಮತ್ತೊಂದು ವಿಭಾಗ ಸೇರಿಸಿದ ಅಮೆರಿಕ| ಸ್ಪೇಸ್ ಫೋರ್ಸ್(ಬಾಹ್ಯಾಕಾಶ ಪಡೆ) ರಚಿಸಿದ ಅಮೆರಿಕ| ಜಗತ್ತಿನ ಮೊಟ್ಟ ಮೊದಲ ಬಾಹ್ಯಾಕಾಶ ಸೇನೆಗೆ ಚಾಲನೆ ನೀಡಿದ ಟ್ರಂಪ್|'ಬಾಹ್ಯಾಕಾಶದಲ್ಲಿ ಅಮೆರಿಕದ ಸರಹದ್ದು ಗುರುತಿಸಲು ಗೋಡೆ ನಿರ್ಮಾಣ'|

ವಾಷಿಂಗ್ಟನ್(ಡಿ.22): ಕೆಲವು ದೇಶಗಳು ಭವಿಷ್ಯದೆಡೆಗೆ ತಮ್ಮ ಚಿತ್ತ ಹರಿಸಿರುತ್ತವೆ. ಇನ್ನೂ ಕೆಲವು ಹೂತು ಹೋದ ಇತಿಹಾಸವನ್ನೇ ಕೆದಕುತ್ತಾ ಪರಸ್ಪರ ಕೆಸರೆರಚಾಡಿಕೊಂಡು ಅದೇ ಕೆಸರಲ್ಲಿ ಬದುಕುವುದನ್ನು ಇಷ್ಟಪಡುತ್ತವೆ.

ಇದರಲ್ಲಿ ಅಮೆರಿಕ ಮೊದಲನೇ ಗುಂಪಿಗೆ ಸೇರಿದ್ದು, ಭವಿಷ್ಯದಲ್ಲಿ ತನ್ನ ದೇಶದ ಸ್ಥಾನಮಾನ, ಮಹತ್ವ, ರಕ್ಷಣೆಯ ಕುರಿತು ಅದಕ್ಕೆ ಸ್ಪಷ್ಟತೆ ಇದೆ.

ಜಗತ್ತಿನ ಅತ್ಯಂತ ಬಲಷ್ಠ ಸೇನಾಪಡೆಯನ್ನು ಹೊಂದಿರುವ ಅಮೆರಿಕ ಇದೀಗ ತನ್ನ ಸೇನಾಪಡೆಗೆ ಮತ್ತೊಂದು ವಿಭಾಗವನ್ನು ಸೇರ್ಪಡೆ ಮಾಡಿಕೊಂಡಿದೆ.

ನಾಸಾ ಎಲೆಕ್ಟ್ರಿಕ್ ವಿಮಾನ: ಸುಲಭ ಇದೀಗ ಆಕಾಶಯಾನ!

ಸ್ಪೇಸ್ ಫೋರ್ಸ್(ಬಾಹ್ಯಾಕಾಶ ಪಡೆ) ಅಮೆರಿಕ ಸೇನೆಯ ಅಧಿಕೃತ ಭಾಗವಾಗಿದ್ದು,  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಮೊಟ್ಟ ಮೊದಲ ಬಾಹ್ಯಾಕಾಶ ಸೇನೆಗೆ ಚಾಲನೆ ನೀಡಿದ್ದಾರೆ. 

2020 ನ್ಯಾಷನಲ್ ಡಿಫೆನ್ಸ್​ ಆಥರೈಸೇಷನ್ ಆ್ಯಕ್ಟ್​​ಗೆ ಬಾಹ್ಯಾಕಾಶ ಸೇನಾ ಚಾಲನಾ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದು, ಬಾಹ್ಯಾಕಾಶ ಪಡೆ ಸ್ಥಾಪನೆಗೆ ಅನುಮತಿ ಅಧಿಕೃತ ನೀಡಿದ್ದಾರೆ. ಈ ಮೂಲಕ ಬಾಹ್ಯಾಕಾಶ ಪಡೆಯು ಅಮೆರಿಕದ ಸಶಸ್ತ್ರ ಪಡೆಗಳ ಆರನೇ ಶಾಖೆಯಾಗಿ ಹೊರಹೊಮ್ಮಿದೆ.

Last night I was so proud to have signed the largest Defense Bill ever. The very vital Space Force was created. New planes, ships, missiles, rockets and equipment of every kind, and all made right here in the USA. Additionally, we got Border Wall (being built) funding. Nice!

— Donald J. Trump (@realDonaldTrump)

ಈ ಕುರಿತು ಟ್ವಿಟ್ ಮಾಡಿರುವ ಟ್ರಂಪ್, ಬಾಹ್ಯಾಕಾಶಕ್ಕೆ ಹೊಸ ವಿಮಾನಗಳು, ಹಡಗುಗಳು, ಕ್ಷಿಪಣಿಗಳು, ರಾಕೆಟ್‌ಗಳು ಮತ್ತು ಇತರ ಉಪಕರಣಗಳನ್ನು ಶೀಘ್ರದಲ್ಲೇ ರವಾನಿಸಲಾಗುವುದು ಎಂದು ಹೇಳಿದರು. 

ಅಲ್ಲದೇ ಬಾಹ್ಯಾಕಾಶದಲ್ಲಿ ಅಮೆರಿಕದ ಸರಹದ್ದು ಗುರುತಿಸಲು ಗೋಡೆ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

click me!