ಡೆಲ್ಟಾಅಬ್ಬರ : 6ನೇ ಬಾರಿ ಮೆಲ್ಬರ್ನ್‌ ಲಾಕ್‌ಡೌನ್‌

By Kannadaprabha NewsFirst Published Aug 6, 2021, 7:38 AM IST
Highlights
  •  ಡೆಲ್ಟಾಕೊರೋನಾ ವೈರಸ್‌ ಭೀತಿ ಜೋರಾಗಿದ್ದು  ಮೆಲ್ಬರ್ನ್‌ ನಗರದಲ್ಲಿ 6ನೇ ಬಾರಿ ಲಾಕ್‌ಡೌನ್‌ ಹೇರಲಾಗಿದೆ
  • ದೇಶದ 2ನೇ ಅತಿ ದೊಡ್ಡ ನಗರ ಮೆಲ್ಬರ್ನ್‌ನಲ್ಲಿಯೂ ಹೊಸದಾಗಿ 8 ಡೆಲ್ಟಾವೈರಸ್‌ ಪ್ರಕರಣ ಪತ್ತೆ

ಮೆಲ್ಬರ್ನ್‌/ಸಿಡ್ನಿ (ಆ.06): ಆಸ್ಪ್ರೇಲಿಯಾದಾದ್ಯಂತ ಡೆಲ್ಟಾಕೊರೋನಾ ವೈರಸ್‌ ಭೀತಿ ಜೋರಾಗಿದ್ದು, ಮೆಲ್ಬರ್ನ್‌ ನಗರದಲ್ಲಿ 6ನೇ ಬಾರಿ ಲಾಕ್‌ಡೌನ್‌ ಹೇರಲಾಗಿದೆ.

ದೇಶದ 2ನೇ ಅತಿ ದೊಡ್ಡ ನಗರ ಮೆಲ್ಬರ್ನ್‌ನಲ್ಲಿಯೂ ಹೊಸದಾಗಿ 8 ಡೆಲ್ಟಾವೈರಸ್‌ ಪ್ರಕರಣ ಪತ್ತೆಯಾಗಿವೆ. ಹಿನ್ನೆಲೆಯಲ್ಲಿ ಮೆಲ್ಬರ್ನ್‌ ಹಾಗೂ ವಿಕ್ಟೋರಿಯಾವನ್ನು ಮತ್ತೆ 7 ವಾರಗಳ ಕಾಲ ಲಾಕ್‌ ಮಾಡಲಾಗಿದೆ. ಈ ಮೂಲಕ ಮೆಲ್ಬರ್ನ್‌ನಲ್ಲಿ 6ನೇ ಬಾರಿ ಲಾಕ್‌ಡೌನ್‌ ಹೇರಿದಂತಾಗಿದೆ.

ದೀರ್ಘಾವಧಿ ಕೋವಿಡ್‌ ಬಗ್ಗೆ ಡಬ್ಲ್ಯುಎಚ್‌ಒ ಕಳವಳ

ಇದೇ ವೇಳೆ, ಸಿಡ್ನಿಯಲ್ಲಿ ಗುರುವಾರ ದಾಖಲೆಯ 262 ಹೊಸ ಡೆಲ್ಟಾಸೋಂಕಿತರು ಪತ್ತೆಯಾಗಿದ್ದಾರೆ. 5 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ಜೂನ್‌ನಿಂದೀಚೆಗೆ ನಗರದಲ್ಲಿ 21 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಜೂ.26ರಿಂದ ಸಿಡ್ನಿ ಸೇರಿದಂತೆ ಹಲವು ನಗರಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ.

ಆಸ್ಪ್ರೇಲಿಯಾದಲ್ಲಿ ಇನ್ನೂ ಶೇ.20ರಷ್ಟುವಯಸ್ಕರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಸದ್ಯ ಲಸಿಕೆಯ ಅಭಾವವೂ ಇದೆ. ಹೀಗಾಗಿ ಲಾಕ್‌ಡೌನ್‌ ಅನಿವಾರ‍್ಯ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!