85 ದೇಶಗಳಿಗೆ ಹಬ್ಬಿದ ಡೆಲ್ಟಾ, ಭಾರೀ ಆತಂಕ!

By Kannadaprabha News  |  First Published Jun 25, 2021, 7:25 AM IST

* ಭಾರತ ರೂಪಾಂತರಿ ಆರ್ಭಟ

* 85 ದೇಶಗಳಿಗೆ ಹಬ್ಬಿದ ಡೆಲ್ಟಾ

* ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ


ವಿಶ್ವಸಂಸ್ಥೆ(ಜೂ.25): ಭಾರತದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿ ಹಬ್ಬಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿರುವ ಹಾಗೂ ಭಾರತದಲ್ಲೇ ಮೊದಲು ಪತ್ತೆಯಾದ ಕೊರೋನಾ ವೈರಸ್‌ನ ರೂಪಾಂತರಿ ತಳಿಯಾದ ಡೆಲ್ಟಾವೈರಸ್‌ ಇದೀಗ ವಿಶ್ವದ 85 ದೇಶಗಳಿಗೆ ಹಬ್ಬಿ ತೀವ್ರ ಆತಂಕ ಮೂಡಿಸಿದೆ. ಕೋವಿಡ್‌ನ ಉಳಿದೆಲ್ಲಾ ರೂಪಾಂತರಿ ವೈರಾಣುಗಳಿಗಿಂತ ಅತ್ಯಧಿಕವಾಗಿ ಪ್ರಸರಣವಾಗುವ ಈ ಮಾದರಿ ವಿಶ್ವದ ಹಲವು ದೇಶಗಳಲ್ಲಿ ಪತ್ತೆಯಾಗುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಒಂದು ವೇಳೆ ಇದೇ ಟ್ರೆಂಡ್‌ ಮುಂದುವರಿದರೆ ಡೆಲ್ಟಾವೈರಾಣು ವಿಶ್ವದ ಪ್ರಬಲ ಸೋಂಕು ಆಗುವ ಎಲ್ಲ ಸಾಧ್ಯತೆಗಳಿವೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

Tap to resize

Latest Videos

ಆಲ್ಛಾ ಕೊರೋನಾ ವೈರಸ್‌ ರೂಪಾಂತರಿ 170 ದೇಶಗಳಲ್ಲಿ, ಬೀಟಾ ವೈರಸ್‌ 119, ಗ್ಯಾಮಾ 71 ದೇಶಗಳಲ್ಲಿ ಪತ್ತೆಯಾಗಿವೆ. ಡೆಲ್ಟಾವೈರಸ್‌ 85 ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳ ಅವಧಿಯಲ್ಲಿ 11 ದೇಶಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಆಲ್ಛಾಗಿಂತಲೂ ಡೆಲ್ಟಾವೈರಸ್‌ ವೇಗವಾಗಿ ಹಬ್ಬುತ್ತದೆ ಎಂದು ವರದಿ ತಿಳಿಸಿದೆ.

ಜೂ.14ರಿಂದ 20ರವರೆಗಿನ ಒಂದು ವಾರದಲ್ಲಿ ಭಾರತದಲ್ಲಿ 4.41 ಲಕ್ಷ ಸೋಂಕಿತರು ಕಂಡುಬಂದಿದ್ದಾರೆ. ಆದರೆ ಹಿಂದಿನ ವಾರಕ್ಕೆ ಹೋಲಿಸಿದರೆ ಭಾರತದಲ್ಲಿ ಸೋಂಕು ಶೇ.30ರಷ್ಟುಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ 16329 ಸಾವು ಸಂಭವಿಸಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ ಶೇ.31ರಷ್ಟು ಇಳಿಕೆಯಾಗಿದೆ ಎಂದು ವರದಿ ವಿವರಿಸಿದೆ.

click me!