ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ

By Sathish Kumar KH  |  First Published Aug 19, 2023, 5:03 PM IST

ದುಡಿಮೆಗಾಗಿ ಹೋಗಿದ್ದ ದಾವಣಗೆರೆ ಜಿಲ್ಲೆ ಮೂಲದ ಕನ್ನಡಿಗರ ಕುಟುಂಬವೊಂದು ಅಮೇರಿಕಾದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದೆ.


ವರದಿ: ವರದರಾಜ್‌, ಏಷ್ಯಾನೆಟ್ ಸುವರ್ಣ ನ್ಯೂಸ್

ದಾವಣಗೆರೆ (ಆ.19): ದೇಶವನ್ನು ಬಿಟ್ಟು ವಿದೇಶಕ್ಕೆ ಹೋಗಿ ಚೆನ್ನಾಗಿ ದುಡಿದು, ಸಂಪಾದನೆ ಮಾಡಿ ನೆಮ್ಮದಿಯಾಗಿ ಜೀವನ ಮಾಡೋಣವೆಂದು ಹೋಗಿದ್ದ ದಾವಣಗೆರೆ ಜಿಲ್ಲೆ ಮೂಲದ ಕನ್ನಡಿಗರ ಕುಟುಂಬವೊಂದು ಅಮೇರಿಕಾದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದೆ.

Tap to resize

Latest Videos

ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಮೂವರು ಅಮೇರಿಕಾದಲ್ಲಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಘಟನೆ ನಡೆದಿದೆ. ಮೃತರನ್ನು ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35) ಹಾಗೂ ಅವರ ಪುತ್ರ ಯಶ್ ಹೊನ್ನಾಳ್(6) ಸಾವನ್ನಪ್ಪಿದ್ದಾರೆ. ಇವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಾವಣಗೆರೆಯಲ್ಲಿ ಬಂದು ಕುಟುಂಬ ಸಮೇತ ವಾಸವಾಗಿದ್ದರು. ಆದರೆ, ಕುಟುಂಬದಲ್ಲಿ ಯೋಗೇಶ್‌ ಕುಟುಂಬ ಅಮೇರಿಕಾಗೆ ಹೋಗಿ ನೆಲೆಸಿತ್ತು.

ಚಿನ್ನದ ಟ್ರಾಲಿ ಬ್ಯಾಗ್ ತಂದ ದುಬೈ ಪ್ರಯಾಣಿಕ: ನಟ್ಟು, ಬೋಲ್ಟ್‌, ಸ್ಕ್ರೂ ಎಲ್ಲವೂ ಪ್ಯೂರ್‌ ಗೋಲ್ಡ್‌

ಕಳೆದ 9 ವರ್ಷಗಳ ಹಿಂದೆ ದಾವಣೆಗೆರೆಯಲ್ಲಿ ಯೋಗೇಶ್‌ ಮತ್ತು ಪ್ರತಿಭಾ ಮದುವೆ ಆಗಿದ್ದರು. ನಂತರ ಕುಟುಂಬ ಸಮೇತವಾಗಿ ಹೋಗಿ ಅಮೇರಿಕಾದಲ್ಲಿ ವಾಸವಾಗಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕುಟುಂಬದ ಸಾವಿನ ಹಿನ್ನೆಲೆಯಲ್ಲಿ ಹಲವುಯ ಅನುಮಾನಗಳು ಸೃಷ್ಟಿಯಾಗಿವೆ. ಇನ್ನು ಕರ್ನಾಟಕದಲ್ಲಿರುವ ಅವರ ಕುಟುಂಬ ಸದಸ್ಯರು ಸಾವಿನ ನಿಖರ ಕಾರಣ ತಿಳಿಸುವಂತೆ, ಬಾಡಿ ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. 

ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರಾಗಿ ಸೇವೆ: ಯೋಗೇಶ್ ಹೊನ್ನಾಳ ಹಾಗು ಪ್ರತಿಭಾ ಇಬ್ಬರು ಸಾಪ್ಟವೇರ್ ಇಂಜಿನಿಯರ್ ಆಗಿದ್ದರು. ಕಳೆದ ಎರಡು ವರ್ಷಗಳಿಂದ ಪ್ರತಿಭಾ ಕಂಪನಿಯೊಂದರಲ್ಲಿ ಕೆಲಸ‌ಮಾಡುತ್ತಿದ್ದರು. ಯೋಗೇಶ್ ಕಳೆದ 9 ವರ್ಷಗಳಿಂದ ಅಮೇರಿಕಾ ದಲ್ಲಿದ್ದು ಅದಕ್ಕು ಮುನ್ನ ಜರ್ಮನಿಯಲ್ಲಿ ನಾಲ್ಕು ವರ್ಷಗಳ ಕಾಲ ಟೆಕ್ಕಿಯಾಗಿ ಕೆಲಸ ಮಾಡಿದ್ದರು. ಅಮೇರಿಕಾ ಪೊಲೀಸರು ನೀಡಿರುವ ಮಾಹಿತಿಯಂತೆ ಅವರ ವಾಸವಿದ್ದ ನಿವಾಸದಲ್ಲೇ ಮೂವರ ಮೃತದೇಹ ಪತ್ತೆಯಾಗಿದೆ.ಮೂರು ದಿನಗಳಾದ್ರು ಮನೆ ಹೊರಗೆ ಯಾವುದೆ ಚಟುವಟಿಕೆ ಬಾರದ ಹಿನ್ನಲೆಯಲ್ಲಿ ಪೊಲೀಸರು ಮನೆಯ ಬಾಗಿಲು ಹೊಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಾವಿನ ಬಗ್ಗೆ ಅಮೇರಿಕಾ ಪೊಲೀಸರು ತನಿಖೆ ನಡೆಸಿದ್ದು ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. 

ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಂತೆ, ಬೆಳ್ಳಿ ಸಾರೋಟಿನಲ್ಲಿ ಶಿಕ್ಷಕಿ ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೃತರ ಕುಟುಂಬಸ್ಥರು: ಮಗ ಸೊಸೆ ಮೊಮ್ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮಗನ ಸಾವಿನ ಸುದ್ದಿ ಕೇಳಿ ತಾಯಿಯ ಬಾಯಲ್ಲಿ ಮಾತುಗಳೇ ಬರುತ್ತಿಲ್ಲ. ಏನಾಗಿತ್ತೋ ಏನಾಗಿದಿಯೋ ಎಂದು ಧಿಗ್ಬ್ರಾಂತರಾಗಿದ್ದಾರೆ.ಮಗ ಸೊಸೆ ಮೊಮ್ಮಗನ‌ ಮೃತದೇಹವನ್ನು ತಾಯ್ನಾಡಿಗೆ ತರಿಸಿಕೊಡಿ ಎಂದು ಸರ್ಕಾರಕ್ಕೆ ಮೃತರ ತಾಯಿ ಇಡೀ ಕುಟುಂಬ ಮನವಿ ಮಾಡಿದೆ. ಕಳೆದ ವಾರ ಮಾಡಿದ ಪೋನ್ ಕರೆಯೇ ಲಾಸ್ಟ್..ಮತ್ತೇ ಕಾಲ್ ಮಾಡಿರಲಿಲ್ಲ.ಚೆನ್ನಾಗಿದ್ದ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಏನೋ ಕಣ್ಣೀರು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರ ದೂರದ ಅಮೆರಿಕಾ ದೇಶದಲ್ಲಿರುವ ಮೃತದೇಹಗಳನ್ನು ತರಿಸಿಕೊಡಿ ಎಂದು ದಾವಣಗೆರೆ ಜಿಲ್ಲಾಧಿಕಾರಿಗೆ ಕುಟುಂಬ ಮನವಿ ಸಲ್ಲಿಸಿದೆ. ಮೃತರಿಗೆ ಓರ್ವ ಸಹೋದರ ಸಹ ಇದ್ದು ಅವರು ಟೆಕ್ಕಿಯಾಗಿ ಬೆಂಗಳೂರಿನಲ್ಲೆ ಕೆಲಸ ಮಾಡುತ್ತಿದ್ದಾರೆ.

click me!