12 ವರ್ಷದಿಂದ ಅಮ್ಮನಿಗೆ ಸಂಬಳ ನೀಡ್ತಿದ್ದ ಮಗಳು, ಖಾತೆ ನೋಡಿ ಕಂಗಾಲು !

Published : Feb 08, 2025, 07:49 PM ISTUpdated : Feb 09, 2025, 09:24 AM IST
12 ವರ್ಷದಿಂದ ಅಮ್ಮನಿಗೆ ಸಂಬಳ ನೀಡ್ತಿದ್ದ ಮಗಳು, ಖಾತೆ ನೋಡಿ ಕಂಗಾಲು !

ಸಾರಾಂಶ

12 ವರ್ಷಗಳಿಂದ ತಾಯಿಯ ಖಾತೆಗೆ ಸಂಬಳದ ಬಹುಭಾಗ ಹಾಕುತ್ತಿದ್ದ ತೈವಾನ್ ಹುಡುಗಿಗೆ ಆಘಾತವಾಗಿದೆ. 75 ಲಕ್ಷ ರೂ. ನಿರೀಕ್ಷಿಸಿದ್ದ ಆಕೆಗೆ ಸಿಕ್ಕಿದ್ದು ಕೇವಲ 1.31 ಲಕ್ಷ ರೂ. ಮಾತ್ರ. 770 ಡಾಲರ್ ಸಂಬಳದಲ್ಲಿ ಹೆಚ್ಚಿನದ್ದನ್ನು ತಾಯಿಗೆ ನೀಡುತ್ತಿದ್ದಳು. ಹಣ ಕೇಳಿದರೆ ಬೈಯುತ್ತಿದ್ದರಿಂದ ತಾಯಿಯ ಬಳಿ ಹಣ ಕೇಳುತ್ತಿರಲಿಲ್ಲವಂತೆ. ಈಗ ತಾಯಿ ಹಣ ಏನು ಮಾಡಿದ್ದಾರೆ ಎಂಬುದು ತಿಳಿದಿಲ್ಲ.

ತಿಂಗಳ ಸಂಬಳ (Monthly salary) ಖಾತೆಗೆ ಬಂದಿದ್ದು ಮಾತ್ರ ಗೊತ್ತಿರುತ್ತ, ಅದು ಹೇಗೆ ಖರ್ಚಾಗುತ್ತೆ ಅನ್ನೋದೇ ತಿಳಿಯೋದಿಲ್ಲ. ತಿಂಗಳ ಕೊನೆಯಲ್ಲಿ ಮತ್ತೆ ಸ್ನೇಹಿತರ ಮುಂದೆ ಕೈ ಚಾಚ್ಬೇಕು ಅನ್ನೋರೇ ಹೆಚ್ಚು. ಜನರು ಹಣ ಉಳಿಸೋಕೆ ನಾನಾ ಪ್ರಯತ್ನ ಮಾಡ್ತಾರೆ. ಈಗಷ್ಟೇ ಜಾಬ್ ಸಿಕ್ಕಿದೆ ಎನ್ನುವ ಅನೇಕ ಹುಡುಗಿಯರು, ಕೈನಲ್ಲಿ ಸಂಬಳ ಇದ್ರೆ ಖರ್ಚಾಗೋಗುತ್ತೆ ಎನ್ನುವ ಕಾರಣಕ್ಕೆ ಅದನ್ನು ಅಮ್ಮನ ಕೈಗೆ ನೀಡ್ತಾರೆ. ಮತ್ತೆ ಕೆಲವರು ಅಮ್ಮನ ಖಾತೆಗೆ ಹಣವನ್ನು ವರ್ಗ ಮಾಡಿರ್ತಾರೆ. ಈ ಹುಡುಗಿ ಕೂಡ ಅಮ್ಮನ ಖಾತೆಗೆ ಹಣ ಹಾಕಿ ಈಗ ಅಚ್ಚರಿಗೊಂಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 12 ವರ್ಷಗಳ ಕಾಲ ತನ್ನ ತಾಯಿ ಖಾತೆಗೆ ಹಣ ಹಾಕಿದ್ದಳು ಹುಡುಗಿ. ನಂತ್ರ ಅಮ್ಮನ ಖಾತೆ (account) ಚೆಕ್ ಮಾಡಿದ್ದಾಳೆ. ಕೊನೆಯಲ್ಲಿ ಆಕೆಗೆ ಸಿಕ್ಕ ಹಣ ಸೋಶಿಯಲ್ ಮೀಡಿಯಾ (social media)ದಲ್ಲಿ ವೈರಲ್ ಆಗಿದೆ. 

ಘಟನೆ ತೈವಾನ್ (Taiwan) ನಲ್ಲಿ ನಡೆದಿದೆ. ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ತನ್ನ ಕಥೆಯನ್ನು ಬರೆದುಕೊಂಡಿದ್ದಾಳೆ. ಅದನ್ನು ಕೇಳಿದ ಬಳಕೆದಾರರು ದಂಗಾಗಿದ್ದಾರೆ. ಅಮ್ಮನ ಖಾತೆಗೆ ಪ್ರತಿ ತಿಂಗಳು ತನ್ನ ಸಂಬಳದ ಬಹುದೊಡ್ಡ ಪಾಲನ್ನು ಹಾಕ್ತಿದ್ದಳು. ಅಮ್ಮನ ಖಾತೆಯಲ್ಲಿ ಸುಮಾರು 75 ಲಕ್ಷ ಜಮಾ ಆಗಿರಬಹುದೆಂದು ಆಕೆ ಅಂದಾಜಿಸಿದ್ದಳು. ಆದ್ರೆ ಅನಿವಾರ್ಯ ಬಿದ್ದಾಗ ಅಮ್ಮನ ಖಾತೆ ಚೆಕ್ ಮಾಡಿದ್ದಾಳೆ. ಆದ್ರೆ ಖಾತೆಯಲ್ಲಿದ್ದ ಹಣ ಕೇವಲ 1.31 ಲಕ್ಷ ಎಂಬುದು ಆಕೆಗೆ ಗೊತ್ತಾಗಿದೆ. 

700 ರೂ ಲಿಪ್ ಸ್ಟಡ್ ಖರೀದಿದಿಗೆ 1.2 ಕೋಟಿ ರೂ ಕೈಚೆಲ್ಲಿದ ಪುತ್ರಿ, ಪ್ರಜ್ಞೆ ತಪ್ಪಿ ಬಿದ್ದ ತಾಯಿ

ಪದವಿ ಮುಗಿದು ಕೆಲಸಕ್ಕೆ ಸೇರಿಕೊಂಡ ಹುಡುಗಿಗೆ 770 ಡಾಲರ್ ಸಂಬಳ ಬರ್ತಾ ಇತ್ತು. ಬಂದ ಹಣವನ್ನು ಉಳಿಸಬೇಕು ಅಂತ ಆಕೆ ಆಲೋಚನೆ ಮಾಡಿದ್ಲು. ಹಾಗಾಗಿ 12 ವರ್ಷಗಳ ಕಾಲ ಆಕೆಯ ಬಹುತೇಕ ಹಣವನ್ನು ತನ್ನ ಅಮ್ಮನ ಖಾತೆಗೆ ಹಾಕ್ತಾ ಬಂದಿದ್ದಳು. ಖಾತೆಯಲ್ಲಿ 90000 ಡಾಲರ್ ಅಂದ್ರೆ 7298507 ರೂಪಾಯಿ ಸೇವಿಂಗ್ ಆಗಿದೆ ಎಂದು ಆಕೆ ಭಾವಿಸಿದ್ದಳು. ಮದುವೆಗೆ ತಯಾರಿ ನಡೆಸಿದ್ದ ಹುಡುಗಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಅಮ್ಮನ ಖಾತೆಯಿಂದ ಹಣ ಪಡೆಯಲು ಮುಂದಾದ್ಲು. ಆದ್ರೆ ಅಮ್ಮನ ಖಾತೆಯಲ್ಲಿದ್ದ ಹಣ ಕೇವಲ 1600 ಡಾಲರ್ ಅಂದ್ರೆ ಬರೀ 1. 31 ಲಕ್ಷ ರೂಪಾಯಿ. 

ಸಮುದ್ರದಾಳದಲ್ಲಿ ಈಜುತ್ತಿದ್ದ ಟ್ರಾವೆಲ್ ವ್ಲಾಗರ್ ಕೈ ಬೆರಳು ಕಚ್ಚಿದ ಶಾರ್ಕ್: ವೀಡಿಯೋ

ಹಿಂದೆ ಒಮ್ಮೆ ಹುಡುಗಿ ಅಮ್ಮನ ಬಳಿ ಹಣ ಕೇಳಿದ್ದಳು. ಮಗಳು ದುಡಿದ ಹಣವನ್ನು ಮಗಳಿಗೆ ನೀಡಲು ಅಮ್ಮ ನಿರಾಕರಿಸಿದ್ದಳು. ಹಣ ಹಾಳು ಮಾಡ್ಬೇಡ ಎಂದು ಬೈದಿದ್ದಳು. ಅಮ್ಮನ ಬೈಗುಳ ತಿಂದಿದ್ದ ಹುಡುಗಿ ನಂತ್ರ ಎಷ್ಟೇ ಕಷ್ಟವಾದ್ರೂ ಅಮ್ಮನ ಬಳಿ ಹಣ ಕೇಳ್ತಿರಲಿಲ್ಲ. ಅನೇಕ ಬಾರಿ ಉಪವಾಸ ಇರುವ ಪರಿಸ್ಥಿತಿ ಬಂದಿತ್ತು, ಹಣಕ್ಕಾಗಿ ತುಂಬಾ ಕಷ್ಟಪಟ್ಟಿದ್ದೆ, ಆದ್ರೆ ಅಮ್ಮ ಬೈತಾರೆ ಎನ್ನುವ ಕಾರಣಕ್ಕೆ ನಾನು ಹಣ ಕೇಳ್ತಿರಲಿಲ್ಲ ಎಂದು ಹುಡುಗಿ ಹೇಳಿದ್ದಾಳೆ. ಅಮ್ಮ ಇಷ್ಟೊಂದು ಹಣ ಏನ್ ಮಾಡಿದ್ದಾಳೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಅಮ್ಮ ಯಾವುದೇ ಮಾಹಿತಿಯನ್ನು ನೀಡಿಲ್ಲವಂತೆ. ಆದ್ರೆ ವರ್ಷಪೂರ್ತಿ ಕಷ್ಟಪಟ್ಟು ದುಡಿದಿದ್ದ ಹಣವನ್ನು ಅಮ್ಮನ ಕೈಗೆ ನೀಡಿದ ಮಗಳು ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ