ಭಾರತಕ್ಕೆ ಅತಿದೊಡ್ಡ ಶಾಕ್ ಕೊಟ್ಟ ಟ್ರಂಪ್; ಭವಿಷ್ಯದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ?

Published : Feb 08, 2025, 12:20 PM IST
ಭಾರತಕ್ಕೆ ಅತಿದೊಡ್ಡ ಶಾಕ್ ಕೊಟ್ಟ ಟ್ರಂಪ್; ಭವಿಷ್ಯದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಮೊದಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರ ಭಾರತದ ಮಹತ್ವಾಕಾಂಕ್ಷಿ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ 

ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.  ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಇತರೆ ದೇಶಗಳ ಮೇಲೆಯೂ ಪರಿಣಾಮ ಬೀರುತ್ತಿವೆ. ಈ ಎಲ್ಲಾ ವಿವಾದತ್ಮಕ ನಿರ್ಧಾರಗಳ ನಡುವೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 12-13ರಂದು ಅಮೆರಿಕಾಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಿಗ್ ಶಾಕ್ ನೀಡಿದ್ದಾರೆ. ಟ್ರಂಪ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರದಿಂದ ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಿಗೆ ಕೊಕ್ಕೆ ಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಫೆಬ್ರವರಿ 5ರಂದು ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ಕಳುಹಿಸಿದ್ದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತೀಕಮಟ್ಟದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ಚೀನಾದ ವಸ್ತುಗಳ ಮೇಲೆ ಟ್ರಂಪ್ ಸರ್ಕಾರ ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್  ತೆಗೆದುಕೊಂಡಿರುವ ಮತ್ತೊಂದು ನಿರ್ಧಾರ ಭಾರತದ ಕೆಲವು ಪ್ರಮುಖ ಯೋಜನೆಗಳ ಸ್ಥಗಿತಗೊಳ್ಳಲು ಕಾರಣವಾಗಬಹುದು ಎಂದು ವರದಿಯಾಗಿದೆ. 

ಟ್ರಂಪ್ ನಿರ್ಧಾರವೇನು? 
ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್  ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ (USAIDS) ಮೀಸಲಿಡುವ ಅನುದಾನವನ್ನು ನಿಲ್ಲಿಸಲು  ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಧರಿಸಿದೆ. ಕಳೆದ 70 ವರ್ಷಗಳಿಂದ ಭಾರತದ ಅಭಿವೃದ್ಧಿಯಲ್ಲಿ USAID ಪ್ರಮುಖ ಪಾತ್ರವಹಿಸುತ್ತಾ ಬಂದಿದೆ. ಇದೀಗ USAIDಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಲು ಅಮೆರಿಕಾ ಮುಂದಾಗಿದೆ. ಇದರಿಂದಾಗಿ USAID ಆರ್ಥಿಕ ನೆರವಿನಿಂದ ಭಾರತದಲ್ಲಿ ನಡೆಯುತ್ತಿರುವ ಕೆಲವು ಅಭಿವೃದ್ಧಿ ಯೋಜನೆಗಳ ಮೇಲೆ ನೇರ ಪರಿಣಾಮ ಬೀರಲಿದೆ. 

ಏನಿದು USAID?
1961 ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಅವರು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್  ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ ಸ್ಥಾಪಿಸಿದ್ದರು. ಎರಡನೇ ಮಹಾಯುದ್ಧದ ಬಳಿಕ ಕೆನಡಿ USAID ರಚಿಸಿದರು. ಬೇರೆ ದೇಶಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸೋದು USAID ಉದ್ದೇಶ.  ಅಂದಿನಿಂದ ಮಾನವೀಯ ನೆಲೆಗಟ್ಟಿನಲ್ಲಿ  130ಕ್ಕೂ ಅಧಿಕ ದೇಶಗಳಲ್ಲಿ USAID ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಭಾರತದಲ್ಲಿಯೂ ಕಳೆದ 70 ವರ್ಷಗಳಿಂದ USAID ಆರೋಗ್ಯ ಸೇವಾ ವ್ಯವಸ್ಥೆ, ಶಿಕ್ಷಣ, ಸ್ವಚ್ಛತೆ ಮತ್ತು ಹವಾಮಾನ ಬದಲಾವಣೆ ಸುಧಾರಿಸಲು ಕೆಲಸ ಮಾಡುತ್ತಿದೆ.

ಭಾರತಕ್ಕೆ ಎಷ್ಟು ಸಿಗುತ್ತಿದೆ ಆರ್ಥಿಕ ನೆರವು?
ಕಳೆದ 70 ವರ್ಷಗಳಿಂದ ಭಾರತ ಗಣನೀಯವಾಗಿ ಆರ್ಥಿಕ ನೆರವು ಪಡೆದುಕೊಳ್ಳುತ್ತಾ ಬಂದಿದೆ. 2023ರ ಆರ್ಥಿಕ ವರ್ಷದಲ್ಲಿ ಭಾರತಕ್ಕೆ USAIDನಿಂದ  $140 ಮಿಲಿಯನ್ ಆರ್ಥಿಕ ನೆರವು ನೀಡಲಾಗಿದೆ. ಭಾರತದ ಬಜೆಟ್‌ಗೆ ಹೋಲಿಕೆ ಮಾಡಿದ್ರೆ ಇದು ಚಿಕ್ಕ ಮೊತ್ತವಾದ್ರೂ ಹಲವು ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಹಾಯವಾಗಿದೆ. ಯುಎಸ್ ವರದಿಯ ಪ್ರಕಾರ, ಯುಎಸ್ಎಐಡಿ 2023-24ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಆರೋಗ್ಯದ ಮೇಲೆ $55 ಮಿಲಿಯನ್, ಪರಿಸರ ಯೋಜನೆಗಳ ಮೇಲೆ $18 ಮಿಲಿಯನ್ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕೆ $7.8 ಮಿಲಿಯನ್ ವಿತರಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ಬಾಲ ಕತ್ತರಿಸಿದ ಡೊನಾಲ್ಡ್ ಟ್ರಂಪ್; ಸರ್ಜಿಕಲ್ ಸ್ಟ್ರೈಕ್ ಅಂದ್ರು  ನೆಟ್ಟಿಗರು

ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ  ನೂತನ ಸರ್ಕಾರ ಅಮೆರಿಕದ ವಿದೇಶಿ ನೆರವಿನ ಪರಿಶೀಲನೆಯನ್ನು ನಡೆಸುತ್ತಿದೆ. ಈಗಾಗಲೇ ಪಾಕಿಸ್ತಾನಕ್ಕೆ ನೀಡುತ್ತಿದ್ದ ಎಲ್ಲಾ ನೆರವನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ  USAID ನಿಧಿಯ ಮೇಲಿನ ಸ್ಥಗಿತ ಆದೇಶ ಬಂದಿದೆ. ಡೊನಾಲ್ಡ್ ಟ್ರಂಪ್ ಆಪ್ತ ಗೆಳೆಯನಾಗಿರುವ ಉದ್ಯಮಿ ಎಲೋನ್ ಮಸ್ಕ್, USAIDಯನ್ನು 'ಕ್ರಿಮಿನಲ್ ಸಂಸ್ಥೆ' ಎಂದು ಕರೆದಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ  USAID ಸಂಸ್ಥೆ ಆಮೂಲಾಗ್ರ ಎಡಪಂಥೀಯ ಹುಚ್ಚರ ಗುಂಪು ಎಂದು ಕರೆದಿದ್ದಾರೆ. 

ಇದನ್ನೂ ಓದಿ: ಚೀನಾ ಕೆನಡಾಕ್ಕೆ ಟ್ರಂಪ್ ತೆರಿಗೆ ಏಟು, ಭಾರತ ಪಾರು! ಪ್ರಧಾನಿ ಮೋದಿಯ ಈ ಗಟ್ಟಿ ನಿರ್ಧಾರ ತೆರಿಗೆ ಹೆಚ್ಚಿಸಲು ಅಮೆರಿಕಕ್ಕೆ ಭಯ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!