ವಿಶ್ವದ ಕಂಪನಿಗಳಲ್ಲಿ 20 ಲಕ್ಷ ಚೀನಾ ಸ್ಪೈಗಳು: ನೌಕರಿ ಜೊತೆ ಗೂಢಾಚಾರಿಕೆ!

Published : Dec 15, 2020, 07:40 AM ISTUpdated : Dec 15, 2020, 10:23 AM IST
ವಿಶ್ವದ ಕಂಪನಿಗಳಲ್ಲಿ 20 ಲಕ್ಷ ಚೀನಾ ಸ್ಪೈಗಳು: ನೌಕರಿ ಜೊತೆ ಗೂಢಾಚಾರಿಕೆ!

ಸಾರಾಂಶ

ಜಾಗತಿಕ ಕಂಪನಿಗಳಲ್ಲಿರುವ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರ ಪಟ್ಟಿ ಬಯಲು| ನೌಕರಿ ಮಾಡುತ್ತಲೇ ಚೀನಾಕ್ಕೆ ರಹಸ್ಯ ಮಾಹಿತಿ ರವಾನೆ?| ಆಸ್ಟ್ರೇಲಿಯಾ ಪತ್ರಿಕೆ ಸ್ಫೋಟಕ ವರದಿ

ಮೆಲ್ಬರ್ನ್(ಡಿ.15): ಚೀನಾದಲ್ಲಿ ಆಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸುಮಾರು 20 ಲಕ್ಷ ಸದಸ್ಯರು ರಹಸ್ಯವಾಗಿ ಜಗತ್ತಿನೆಲ್ಲೆಡೆಯ ಬೃಹತ್ ಸಂಸ್ಥೆಗಳಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ ಎಂಬ ಸ್ಪೋಟಕ ಬಹಿರಂಗಗೊಂಡಿದೆ. ಸಿಪಿಸಿ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೇ ಬೇರೆ ಬೇರೆ ದೇಶಗಳಿಂದ ವ್ಯೂಹಾತ್ಮಕ ಮಾಹಿತಿಗಳನ್ನು ಸಂಘ್ರಹಿಸಲು ಇಂತಹುದ್ದೊಂದು ಜಾಲವನ್ನು ಮುಂದೆ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಲೈಂಗಿಕ ತೃಪ್ತಿಗಾಗಿ ಮಹಿಳಾ ಸ್ಕ್ವಾಡ್ ಇಟ್ಟುಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ!

ಶಾಂಘೈ ಸಂಸ್ಥೆಯೊಂದರ ಸರ್ವರ್‌ನಿಂದ ಈ ರಹಸ್ಯ ಸಿಿಆಸ್ಪಿಟ್ಸಿರೇ ಬೇಹುಗಾರಿಕಾ ನೌಕರ ಜಾಲದ ಮಾಹಿತಿಯನ್ನು ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಸೋರಿಕೆ ಮಾಡಿ 'ದ ಆಸ್ಟ್ರೇಲಿಯನ್' ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಮೊದಲೇ ಪರಸ್ಪರ ಶತ್ರು ರಾಷ್ಟ್ರಗಳಾಗಿರುವ ಚೀನಾ- ಆಸ್ಟ್ರೇಲಿಯಾ ನಡುವೆ ಈ ಸಂಗತಿ ದೊಡ್ಡ ವಿವಾದ ಹುಟ್ಟು ಹಾಕಿದೆ. ಸರ್ವರ್‌ನಿಂದ ಪಡೆದ ದತ್ತಾಂಶಗಳನ್ನು ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಪಿಸಿಯ ಎಲ್ಲಾ 1.95 ದಶಲಕ್ಷ ಸದಸ್ಯರು ಚೀನಾದ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಹೊಂದಿರುವ ಹುದ್ದೆ, ಜನ್ಮ ದಿನಾಂಕ, ರಾಷ್ಟ್ರೀಯ ಐಡಿ ಸಂಖ್ಯೆಹೀಗೆ ಎಲ್ಲಾ ವಿವರಗಳಿವೆ. 

ಚೀನಾ ಜೊತೆ ಗಡಿ ಸಂಘರ್ಷ: 15 ದಿನದ ಭಾರಿ ಯುದ್ಧಕ್ಕೆ ಶಸ್ತ್ರಾಸ್ತ್ರ ಸಂಗ್ರಹ!

ಇವರೆಲ್ಲರೂ ಜಗತ್ತಿನ ಅತಿ ದೊಡ್ಡ ರಕ್ಷಣಾ ಸಂಸ್ಥೆಗಳು, ಬ್ಯಾಂಕ್, ಕೊರೋನಾ ವೈರಸ್‌ಗೆ ಲಸಿಕೆ ತಯಾರಿಸುತ್ತಿರುವ ಫಾರ್ಮಾಸುಟಿಕಲ್ ಕಂಪನಿಗಳೂ ಸೇರಿದಂತೆ ನಾನಾ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಅಲ್ಲೇ ಸುಮಾರು 79,000 ಸಿಪಿಸಿ ಘಟಕಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಸಿಪಿಸಿ ಸದಸ್ಯರು ರಹಸ್ಯವಾಗಿ ನೌಕರಿ ಪಡೆದಿರುವ ಕಂಪನಿಗಳಲ್ಲಿ ಅಮೆರಿಕ, ಬ್ರಿಟನ್ ಆಸ್ಟ್ರೇಲಿಯಾ ಮುಂತಾದ ದೇಶಗಳ ಬೋಯಿಂಗ್, ವೋಕ್ಸ್‌ವ್ಯಾಗನ್, ಫೈಝರ್, ಆಸ್ಟ್ರಾಜೆನಿಕಾ, ಎಎನ್‌ಝಡ್, ಎಸ್‌ಎಸ್‌ಬಿಸಿ ಮುಂತಾದ ಕಂಪನಿಗಳೂ ಸೇರಿವೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ