ಕ್ಯಾಪಿಟಲ್ ಹಿಲ್‌ನಲ್ಲಿ ಟ್ರಂಪ್ ಬೆಂಬಲಿಗರ ದಾಳಿ| ನಾಲ್ವರು ಸಾವು, 52 ಮಂದಿ ಅರೆಸ್ಟ್| ಅಮೆರಿಕದಲ್ಲಿ ಎಮರ್ಜೆನ್ಸಿ ಘೋಷಣೆ
ವಾಷಿಂಗ್ಟಟನ್(ಜ.07): ಕ್ಯಾಪಿಟಲ್ ಹಿಲ್‌ನಲ್ಲಿ ಟ್ರಂಪ್ ಬೆಂಬಲಿಗರು ನಡೆದುಕೊಂಡ ರೀಈತಿ ಬಳಿಕ ವಾಷಿಂಗ್ಟನ್‌ನಲ್ಲಿ ಪಬ್ಲಿಕ್ ಎಮರ್ಜೆನ್ಸಿ ಘೋಷಿಸಲಾಗಿದೆ. ವಾಷಿಂಗ್ಟನ್ ಮೇಯರ್ ಅನ್ವಯ ಮುಂದಿನ ಹದಿನೈದು ದಿನಗಳವರೆಗೆ ಎಮರ್ಜೆನ್ಸಿ ವಿಸ್ತರಿಸಲಾಗಿದೆ. ಇನ್ನು ಈವರೆಗೆ ಒಟ್ಟು ನಾಲ್ವರು ಸಾವನ್ನಪ್ಪಿದ್ದು, 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಅಷ್ಟಕ್ಕೂ ಈ ದಾಳಿ ಬಳಿಕ ಇಲ್ಲಿ ಏನೇನು ನಡೆದಿದೆ? ಇಲ್ಲಿದೆ ವಿವರ
* ಎರಡು ವಾರ 1000 ನ್ಯಾಷನಲ್ ಗಾರ್ಡ್‌ಗಳ ನೇಮಕ: ಅಮೆರಿಕ ಸಂಸತ್ತಿನ ಬಳಿ 1000 ನ್ಯಾಷನಲ್ ಗಾರ್ಡ್‌ಗಳನ್ನು ನೇಮಿಸಲಾಗಿದೆ. ಅಂದರೆ ನೂತನ ಅಧ್ಯಕ್ಷ ಪ್ರಮಾಣವಚನ ಸ್ವೀಕರಿಸುವವರೆಗೂ ಈ ಗಾರ್ಡ್‌ಗಳು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
undefined
* ಶ್ವೇತ ಭವನದ ಡೆಪ್ಯುಟಿ ಪ್ರೆಸ್ ಸೆಕ್ರೆಟರಿ ರಾಜೀನಾಮೆ: ಇಂದಿನ ಹಿಂಸಾಚಾರದ ಬಳಿಕ ಶ್ವೇತ ಭವನದ ಡೆಪ್ಯುಟಿ ಪ್ರೆಸ್ ಸೆಕ್ರೆಟರಿ ಮ್ಯಾಥ್ಯೂಸ್ ರಾಜೀನಾಮೆ ಘೋಷಿಸಿದ್ದಾರೆ.
* ಫೇಸ್ಬುಕ್, ಇನ್ಸ್ಟಾ ಹಾಗೂ ಟ್ವಿಟರ್‌ನಲ್ಲಿ ಟ್ರಂಪ್ ಖಾತೆ ಬ್ಯಾನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಇಪ್ಪತ್ನಾಲ್ಕು ಗಂಟೆ ಬ್ಯಾನ್ ಮಾಡಲಾಗಿದೆ.
* ಟ್ರಂಪ್‌ನ್ನು ಅಧ್ಯಕ್ಷೀಯ ಸ್ಥಾನದಿಂದ ಕೆಳಗಿಳಿಸುವಂತೆ ಕೂಗು: ಅನೇಕ ಮಂದಿ ರಿಪಬ್ಲಿಕನ್ ನಾಯಕರು ಹಾಗೂ ಕ್ಯಾಬಿನೆಟ್ ಅಧಿಕಾರಿಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ್ನು ಜನವರಿ 20ರೊಳಗೆ ಅಧ್ಯಕ್ಷೀಯ ಹುದ್ದೆಯಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದಾರೆ.
* ಬೈಡೆನ್ ಗೆಲುವು ಅಧಿಕೃತ ಘೋಷಣೆ ಪ್ರಕ್ರಿಯೆ ಜಾರಿ: ಯುಎಸ್ ಹೌಸ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್ ಗೆದ್ದಿದ್ದಾರೆಂಬ ಪ್ರಮಾಣಪತ್ರ ವಿಶ್ವಕ್ಕೇ ತೋರಿಸುತ್ತೇವೆಂದಿದ್ದಾರೆ.
* ಓರ್ವ ಮಹಿಳೆ ಸೇರಿ ನಾಲ್ವರು ಸಾವು: ಈವರೆಗೆ ಓರ್ವ ಮಹಿಳೆ ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಟ್ರಂಪ್ ಬೆಂಬಲಿಗರು ವಾಷಿಂಗ್ಟನ್ ಡಿಸಿಯಲ್ಲಿ ಯುಎಸ್ ಕ್ಯಾಪಿಟಲ್‌ನಲ್ಲಿ ದಾಳಿ ನಡೆಸಿದ್ದರು. ಹೀಗಿರುವಾಗ ಓರ್ವ ಮಹಿಳೆಗೆ ಅಮೆರಿಕನ್ ಕ್ಯಾಪಿಟಲ್ ಪೊಲೀಸರು ಗುಂಡು ಹಾರಿಸಿದ್ದರು. ಆಕೆ ಬ್ಯಾರಿಕೇಡ್ ಮುರಿದು ಪ್ರವೇಶಿಸಲು ಯತ್ನಿಸಿದ್ದಳರೆಂಬುವುದು ಪೊಲೀಸರ ಮಾತಾಗಿದೆ. ಇನ್ನು ಮೂವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
* ವಾಷಿಂಗ್ಟನ್‌ನಲ್ಲಿ 15 ದಿನ ಎಮರ್ಜೆನ್ಸಿ: ವಾಷಿಂಗಗ್ಟನ್ ಮೇಯರ್ ಮುಂದಿನ ಹದಿನೈದು ದಿನ ಸಾರ್ವಜನಿಕ ಎಮರ್ಜೆನ್ಸಿ ಘೋಷಿಸಿದ್ದಾರೆ.
* ಟ್ರಂಪ್ 52 ಬೆಂಬಲಿಗರು ಅರೆಸ್ಟ್: ಇನ್ನುು ಹಿಂಸಾಚಾರದಲ್ಲಿ ಭಾಗಿಯಾದ ಸುಮಾರು 52 ಮಂದಿ ಟ್ರಂಪ್ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
* ಅಪಾಯಕಾರಿ ಪರಿಸ್ಥಿತಿ ಎಂದ ಫೇಸ್‌ಬುಕ್: ಫೇಸ್ಬುಕ್‌ನ ವೈಟ್ ಹೌಸ್ ಅಧ್ಯಕ್ಷೆ ಗಾಯ್ ರೋಸೆನ್ ಇದೊಂದು ಅಪಾಯಕಾರಿ ಪರಿಸ್ಥಿತಿ ಎಂದಿದ್ದಾರೆ. ಹೀಗಿರುವಾಗ ಟ್ರಂಪ್ ಪೋಸ್ಟ್ ಮಾಡಿದ ವಿಡಿಯೋವನ್ನು ತೆಗೆಯಲು ಯತ್ನಿಸುತ್ತಿದ್ದೇವೆ ಎಂದಿದ್ದಾರೆ.