
ಲಾಸ್ ಏಂಜಲೀಸ್: ಟ್ರಂಪ್ ವಲಸಿಗ ನೀತಿಯನ್ನು ವಿರೋಧಿಸಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಬುಧವಾರವೂ ಮುಂದುವರೆದಿದೆ. ಪ್ರತಿಭಟನಾಕಾರರ ಆಕ್ರೋಶ ಹತ್ತಿಕ್ಕಲು ಸ್ಥಳೀಯ ಸರ್ಕಾರ ಕರ್ಫ್ಯೂ ಹೇರಿದೆ.
ಲಾಸ್ ಏಂಜಲೀಸ್ ನಡೆಯುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಶಮನವಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೇಯರ್ ತುರ್ತು ಪರಿಸ್ಥಿತಿ ಘೋಷಿಸಿ, ಕರ್ಫ್ಯೂ ವಿಧಿಸಿದ್ದಾರೆ.ಮಂಗಳವಾರ ರಾತ್ರಿಯೇ ಕರ್ಫ್ಯೂ ಹೇರಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಜನರನ್ನು ಚದುರಿಸಲು ಮುಂದಾದ ವೇಳೆ ಕೆಲವರನ್ನು ಬಂಧಿಸಿದ್ದಾರೆ.
ಟ್ರಂಪ್ ಮಂಗಳವಾರವಷ್ಟೇ ಸ್ಥಳೀಯಾಡಳಿತದ ವಿರೋಧದ ನಡುವೆಯೂ ನೌಕಾಪಡೆ ಮತ್ತು ರಾಷ್ಟ್ರೀಯ ಪಡೆ ಯೋಧ ರನ್ನು ಲಾಸ್ ಏಂಜಲೀಸ್‌ಗೆ ಕಳುಹಿಸಿದ್ದರ. ನ್ಯಾಷನಲ್ ಗಾರ್ಡ್ ಈಗಾಗಲೇ ಲಾಸ್ ಏಂಜಲೀಸ್‌ಗೆ ಆಗಮಿಸಿದ್ದು, ಭದ್ರತೆ ಯಲ್ಲಿ ನಿರತವಾಗಿದೆ.
ವಲಸಿಗರ ಪ್ರತಿಭಟನೆ ಅಮೆರಿಕದಾದ್ಯಂತ ಹಬ್ಬಿದ್ದು, ಸಿಯಾಟಲ್, ಆಸ್ಟಿನ್, ಶಿಕಾಗೋ, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಡೆನ್ವರ್, ಸಾಂತಾ ಆನಾ, ಡಲ್ಲಾಸ್ , ಬಾಸ್ಟನ್ , ಟೆಕ್ಸಾಸ್ ಸೇರಿದಂತೆ ಹಲವೆಡೆ ವಲಸಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ