ಯುದ್ಧದ ನಡುವೆ ಆಗಸದಲ್ಲಿ ಭಯಾನಕ ಕಾಗೆಗಳು! ಇದೆಂಥ ಮುನ್ಸೂಚನೆ? ಮುನ್ನೆಲೆಗೆ ಬಂದ ಸಿಎಂ ಕಾರಿನ ಸ್ಟೋರಿ

Published : Mar 26, 2026, 01:27 PM IST
Crows

ಸಾರಾಂಶ

ಇಸ್ರೇಲ್-ಇರಾನ್ ಯುದ್ಧದ ಭೀತಿಯ ನಡುವೆ, ಟೆಲ್ ಅವಿವ್‌ನ ಆಗಸದಲ್ಲಿ ಸಾವಿರಾರು ಕಾಗೆಗಳು ವಿಚಿತ್ರವಾಗಿ ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಹಲವರು ಅಪಶಕುನ ಮತ್ತು ವಿನಾಶದ ಮುನ್ಸೂಚನೆ ಎಂದು ಭಾವಿಸಿದ್ದರೆ, ತಜ್ಞರು ಮಾತ್ರ ಇದು ಕಾಗೆಗಳ ನೈಸರ್ಗಿಕ ವರ್ತನೆ ಎಂದು ವಿವರಿಸುತ್ತಾರೆ.

ಇರಾನ್​, ಇಸ್ರೇಲ್​ ಅಮೆರಿಕ ಯುದ್ಧದ ಭೀತಿ ಇನ್ನೂ ಎಷ್ಟು ದಿನ ಇದೆಯೋ ಗೊತ್ತಿಲ್ಲ. ಇಡೀ ಜಗತ್ತಿನಲ್ಲಿ ಒಂದು ರೀತಿಯ ಭಯದ ವಾತಾವರಣವೇ ಇದೆ. ಯುದ್ಧದ ಛಾಯೆ ಎಲ್ಲಾ ದೇಶಗಳ ಮೇಲೆಯೂ ಕರಿನೆರಳು ಬೀಳುತ್ತಿವೆ. ಇದರ ನಡುವೆಯೇ, ಆಗಸದಲ್ಲಿ ನಡೆದ ಭಯಾನಕ ದೃಶ್ಯವೊಂದು ಇದೀಗಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುತ್ತಿದೆ. ಅದೇನೆಂದರೆ ಇಸ್ರೇಲ್​ನ ಟೆಲ್ ಅವಿವ್‌ನಲ್ಲಿ ಸಹಸ್ರಾರು ಕಾಗೆಗಳು ವಿಚಿತ್ರವಾಗಿ ಆಗಸದಲ್ಲಿ ಸುತ್ತುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಇದು ಒಂದು ರೀತಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಿಸಿದ್ದು, ಯಾವುದರ ಮುನ್ಸೂಚನೆ ಎಂದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.

ಕಾಗೆಗಳ ಹಾರಾಟ

ಟೆಲ್ ಅವಿವ್‌ನ ಮೇಲೆ ನೂರಾರು ಕಾಗೆಗಳು ಆಕಾಶದಲ್ಲಿ ಸುತ್ತುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮವನ್ನು ಆಕ್ರಮಿಸಿಕೊಂಡಿದ್ದು, ಅನೇಕ ವೀಕ್ಷಕರನ್ನು ಆತಂಕಕ್ಕೀಡು ಮಾಡಿದೆ. X ಮತ್ತು ಇತರ ವೇದಿಕೆಗಳಲ್ಲಿ ತ್ವರಿತವಾಗಿ ಇದು ಶೇರ್​ ಆಗುತ್ತಿದೆ.

ಅಪಶಕುನ?

ಇದು ಇಸ್ರೇಲ್​ ಪ್ರಧಾನಿ ನೆತನ್ಯಾಹುವಿನಿಗೆ ಅಪಶಕುನದ ಸಂಕೇತವೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಈ ಕಾಗೆಯು ಧರ್ಮ ಮತ್ತು ಜ್ಯೋತಿಷದ ಕಡೆಗೆ ತಿರುಗಿದೆ. ಕಾಗೆಗಳಂತಹ ಪಕ್ಷಿಗಳ ಹಿಂಡುಗಳನ್ನು ಕೆಟ್ಟ ಶಕುನಗಳು ಮತ್ತು "ವಿನಾಶದ ಮುನ್ನುಡಿ" ಎಂದು ಕರೆಯಲಾಗುತ್ತದೆ. ಕೆಲ ವರ್ಷಗಳ ಹಿಂದೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾರಿನ ಮೇಲೆ ಕಾಗೆ ಕುಳಿತ ಸಂದರ್ಭದಲ್ಲಿ ಪರಿಹಾರ ಮಾಡಿಕೊಂಡಿದ್ದರಲ್ಲ, ಅದೇ ರೀತಿ ಇದನ್ನು ಅಪಶಕುನ ಎಂದು ಕರೆಯಲಾಗುತ್ತದೆ. (ಮೂಢ ನಂಬಿಕೆಗಳನ್ನು ನಂಬುವುದಿಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  ನಾನು ಬಳಸುವ ಸರ್ಕಾರಿ ಕಾರು ಈಗಾಗಲೇ ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಸಂಚರಿಸಿದೆ. ಜೊತೆಗೆ ಸ್ವಲ್ಪ ಮಟ್ಟಿನಲ್ಲಿ ತಾಂತ್ರಿಕ ಸಮಸ್ಯೆ ಇದ್ದುದರಿಂದ ಕಾರು ಬದಲಾವಣೆ ಮಾಡಬೇಕಾಯಿತು ಎಂದು ತಿಳಿಸಿದ್ದರು ಎನ್ನಿ)  ಕೆಲವರು ಬೈಬಲ್‌ನ ಉಲ್ಲೇಖಗಳನ್ನು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಅಲ್ಲಿ ನಾಶವಾದ ನಂತರ ಈ ರೀತಿ ಪಕ್ಷಿಗಳು ಕಾಣಿಸಿಕೊಳ್ಳುತ್ತವೆ, ಈ ವೀಡಿಯೊ ಇಸ್ರೇಲ್-ಇರಾನ್ ಯುದ್ಧದಲ್ಲಿ ಬರಲಿರುವ ಕೆಟ್ಟದ್ದರ ಎಚ್ಚರಿಕೆಯ ಸಂಕೇತವಾಗಿರಬಹುದು ಎನ್ನಲಾಗುತ್ತಿದೆ.

ತಜ್ಞರು ಹೇಳುವುದು ಏನು?

ಅಷ್ಟಕ್ಕೂ, ಇದು ನಿಜವಾಗಿಯೂ ಟೆಲ್ ಅವಿವ್‌ನಲ್ಲಿ ಚಿತ್ರೀಕರಿಸಲ್ಪಟ್ಟಿದೆಯೇ ಅಥವಾ ಅದು ನಿಜವೇ ಎಂದು ಯಾರೂ ದೃಢಪಡಿಸಿಲ್ಲ. ಈ ದೃಶ್ಯವು ಆತಂಕಕಾರಿಯಾಗಿ ಕಂಡುಬಂದರೂ, ತಜ್ಞರು ಹೇಳುವಂತೆ ಇದಕ್ಕೆ ಸರಳವಾದ ವಿವರಣೆಯಿದೆ. ಕಾಗೆಗಳ ದೊಡ್ಡ ಗುಂಪುಗಳು ಒಟ್ಟಿಗೆ ಸೇರುತ್ತವೆ, ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಈ ಪಕ್ಷಿಗಳು ಹೆಚ್ಚಾಗಿ ಬೆಚ್ಚಗಿರಲು, ಆಹಾರವನ್ನು ಹುಡುಕಲು ಅಥವಾ ಬೆದರಿಕೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಸೇರುತ್ತವೆ. ಅವು ತಮ್ಮ ಗುಂಪಿನ ಸತ್ತ ಸದಸ್ಯರು ಅಥವಾ ಸಮೂಹ ಪರಭಕ್ಷಕಗಳ ಸುತ್ತಲೂ ಸೇರುತ್ತವೆ. ವಲಸೆ, ಹವಾಮಾನ ಮತ್ತು ಆಹಾರ ಲಭ್ಯತೆಯಂತಹ ಪರಿಸರ ಅಂಶಗಳು ಒಂದೇ ಸ್ಥಳದಲ್ಲಿ ಇಷ್ಟೊಂದು ಪಕ್ಷಿಗಳು ಸೇರುತ್ತವೆ ಎನ್ನುವುದು ಅವರ ಮಾತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಯಾಕೆ ಬಿಟ್ಟೋದೆ: ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ
ಭಸ್ಮಾಸುರನ ಗರ್ವಭಂಗ! ಇರಾನ್ ಎದುರು ಹೆಜ್ಜೆ ಹಿಂದಿಟ್ಟಿದ್ದೇಕೆ ಟ್ರಂಪ್? ನಿಗೂಢಾಸ್ತ್ರಕ್ಕೆ ಹೆದರಿದನಾ ದೊಡ್ಡಣ್ಣ?